ಕನ್ನಡ ವಾರ್ತೆಗಳು

ಎಂ.ಬಿ‌.ಎ. ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿ ಆತ್ಮಹತ್ಯೆ

Pinterest LinkedIn Tumblr

suicide

ಕುಂದಾಪುರ: ಇಲ್ಲಿನ ಶಿರೂರು ಸಮೀಪದ ಮೂರ್ಕೋಡಿ ನಿವಾಸಿ ಎಂಬಿ‌ಎ ವಿದ್ಯಾರ್ಥಿ ವಿನಾಯಕ (25) ಎಂ.ಬಿ.ಎ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರೂರಿನಲ್ಲಿ ಸಂಭವಿಸಿದೆ.

ಘಟನೆಯ ವಿವರ: ಭಾನುವಾರ ಬೆಳಗ್ಗೆ ವಿನಾಯಕ ಕ್ಷೌರ ಮಾಡಿಸಿ ಕೊಂಡು ಬರುತ್ತೇನೆ ಎಂದು ಮನೆಯಿಂದ ಹೋದವರು ಸಂಜೆ ಯಾದರೂ ಬಂದಿರಲಿಲ್ಲ. ಅನಂತರ ಆತ ಮನೆಗೆ ಕರೆ ಮಾಡಿ ನನ್ನನ್ನು ಹುಡುಕ ಬೇಡಿ ನಾನು ಮುಂಡಳ್ಳಿ ಸಮುದ್ರ ತೀರದಲ್ಲಿ ಇದ್ದೇನೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು ಎನ್ನಲಾಗಿದೆ.

ಆತ ಬೆಂಗಳೂರಿನಲ್ಲಿ ಎಂಬಿ‌ಎ ವಿದ್ಯಾಭ್ಯಾಸ ಮಾಡುತ್ತಿದ್ದು ಒಂದು ವಿಷಯದಲ್ಲಿ ಅನುತ್ತೀರ್ಣರಾದುದರಿಂದ ನೊಂದಿದ್ದರು. ಕೃಷಿ ಕುಟುಂಬದವರಾಗಿದ್ದ ಆತ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾನೆ.

ಈ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರ)

Write A Comment