ಕರಾವಳಿ

ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ‘ನಂದಿನಿ’ ಶುದ್ಧ ಕುಡಿಯುವ ನೀರು

Pinterest LinkedIn Tumblr

Nandini

ಬೆಂಗಳೂರು: ಸಹಕಾರಿ ಕ್ಷೇತ್ರದ ಕರ್ನಾಟಕ ಹಾಲು ಮಹಾಮಂಡಲ(ಕೆಎಂಎಫ್) ನಂದಿನಿ ಹೆಸರಿನಲ್ಲಿ ಖನಿಜಯುಕ್ತ ಕುಡಿಯುವ ನೀರುನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ನಂದಿನಿ ಕುಡಿಯುವ ನೀರಿನ ಪ್ಯಾಕೆಟ್ ಗಳು ಎಲ್ಲಾ ನಂದಿನಿ ಕೇಂದ್ರಗಳಲ್ಲಿ ಅತಿ ಕಡಿಮೆ ದರದಲ್ಲಿ ದೊರೆಯಲಿದೆ. ಹಾಲು, ಸಿಹಿ ತಿಂಡಿ, ಬಿಸ್ಕೆಟ್ ಸೇರಿದಂತೆ ಹಾಲಿನ ವಿವಿಧ ಉತ್ಪನ್ನಗಳ ಮಾರಾಟದ ಜೊತೆಗೆ ಕುಡಿಯುವ ನೀರನ್ನು ಮಾರಲು ಕೆಎಂಎಫ್ ಮುಂದಾಗಿದೆ. ಈ ಮೂಲಕ ರಾಜ್ಯದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವುದರಲ್ಲಿ ಕೆಎಂಎಫ್ ಎರಡನೇ ಸ್ಥಾನ ಪಡೆದಿದೆ. ಮೊದಲನೇ ಸ್ಥಾನ ರೈಲ್ವೆ ಇಲಾಖೆ ಪಡೆದಿದೆ.

ಕುಡಿಯುವ ನೀರು ಪೂರೈಕೆ ಉದ್ಯಮ ಹೊಸದಾಗಿದೆ. ಈಗಾಗಲೇ ನೀರಿನ ಘಟಕ ಇರುವ ಅಥವಾ ಅದನ್ನು ತಯಾರಿಸುವ ಸಂಸ್ಥೆಯಿಂದ ಟೆಂಡರ್ ಕರೆಯಲಾಗಿದೆ. ಇನ್ನು ಗ್ರಾಹಕರಿಗೆ ಶುದ್ಧ ನೀರು ಪೂರೈಸಲಾಗುತ್ತದೆ ಹಾಗೂ ಕೈಗೆಟಕುವ ದರದಲ್ಲಿ ನೀಡಲಾಗುತ್ತದೆ ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೀರಿನಿಂದ ಬರುವ ಲಾಭವನ್ನು ನಾವು ನಿರೀಕ್ಷಿಸುತ್ತಿಲ್ಲ. ನಮಗೆ ಹಾಲು ಪೂರೈಕೆ ಮಾಡುವ ರೈತರಿಗಾಗಿ ಇದರ ಲಾಭವನ್ನು ಬಳಸಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲದೇ, ನಂದಿನಿ ನೀರು ಹೋಟೆಲ್ ಗಳಲ್ಲೂ ಲಭ್ಯವಾಗುವಂತೆ ಮಾಡಲಾಗುತ್ತೆ. ಖಾಸಗಿಯವರ ಅಂಗಡಿಗಳಲ್ಲಿ ಮಾರಾಟಕ್ಕೂ ನಂದಿನಿ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ ಎಂದ ಅವರು ಮುಂದಿನ ಮೂರ್ನಾಲ್ಕು ವಾರಗಳಲ್ಲಿ ನಂದಿನ ನೀರು ಎಲ್ಲರಿಗೂ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

Write A Comment