ಅಂತರಾಷ್ಟ್ರೀಯ

ಬೇಸಿಗೆಗೆ ಕಲ್ಲಂಗಡಿ ತಂಪು…

Pinterest LinkedIn Tumblr

watermelon2

ಬೇಸಿಗೆಯ ಝಳದಿಂದ ತಪ್ಪಿಸಲು ಜನ ನೀರು, ಮಜ್ಜಿಗೆ, ಸೌತೆಕಾಯಿ ಸೇರಿದಂತೆ ನಾನಾ ರೀತಿಯ ಪಾನೀಯ, ಹಣ್ಣು ಸೇವನೆ ಮಾಡುತ್ತಾರೆ. ಕಲ್ಲಂಗಡಿ ದೇಹಕ್ಕೆ ತಂಪು ನೀಡುವುದರಿಂದ ಬೇಸಿಗೆಯಲ್ಲಿ ಕಲ್ಲಂಗಡಿ ಸೇವನೆ ಒಳ್ಳೆಯದು.

ಕಲ್ಲಂಗಡಿ ದೇಹವನ್ನು ತಂಪಾಗಿಸುವುದಲ್ಲದೆ ದೇಹದ ಒಳಗಿನ ವಿಷಕಾರಿ ಅಂಶಗಳನ್ನು ಹೊರ ಹಾಕಲು ನೆರವಾಗುತ್ತದೆ.

ಹಾಗಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಸೇವನೆ ಒಳ್ಳೆಯದು ಎಂಬುದು ಆಹಾರ ತಜ್ಞರ ಕಿವಿಮಾತು.

ಕಲ್ಲಂಗಡಿಯನ್ನು ಬೆಳಿಗ್ಗೆ, ಮಧ್ಯಾಹ್ನ ಸಂಜೆಯ ಹೊತ್ತಿನಲ್ಲಿ ಉಪಾಹಾರ ರೂಪದಲ್ಲು ಸೇವಿಸಬಹುದು.
ಇದು ದೇಹಕ್ಕೆ ಅಗತ್ಯವಾದ ಹೆಚ್ಚಿನ ಪ್ರಮಾಣದ ನೀರು, ಲವಣಗಳು ಹಾಗೂ ಪೋಷಕಾಂಶಗಳನ್ನು ಒದಗಿಸುತ್ತದೆ.

ಬಿಸಿಲಿನ ಝಳ ಹೆಚ್ಚಿದ ಸಮಯದಲ್ಲಿ ಕಲ್ಲಂಗಡಿ ಹಣ್ಣಿನ ಜೊತೆಗೆ ಅನಾನಸು, ಕಿವಿಹಣ್ಣು, ಕರಬೂಜ ಅಥವಾ ಕರಬೂಜ ಬೀಜಗಳ ಸೇವನೆ ಒಳ್ಳೆಯದು.
ಈ ಹಣ್ಣುಗಳಲ್ಲಿ ಸಾಲ್ಟನ್ ಪಾನಿಗಿಂತಲೂ ಎಂಟು ಪಟ್ಟು, ಓಮೇಗಾ ೩ ಕೊಬ್ಬಿನ ಆಮ್ಲ, ಹಾಲಿಗಿಂತಲೂ ಆರು ಪಟ್ಟು ಹೆಚ್ಚಿನ ಕ್ಯಾಲ್ಸಿಯಂ ಮೂಲಕ ಪಾಲಕ್ ಸೊಪ್ಪಿನಲ್ಲಿರುವುದಕ್ಕಿಂತಲೂ ಮೂರು ಪಟ್ಟು ಕಬ್ಬಿಣ ಅಂಶ, ಬಾಳೆಹಣ್ಣಿನಲ್ಲಿ ರುವುದಕ್ಕಿಂತ ದುಪ್ಪಟ್ಟು ಪ್ರಮಾಣದ ಪೊಟ್ಯಾಶಿಯಂ.

ಅಗಸೆ ಬೀಜದಲ್ಲಿರುವುದಕ್ಕಿಂತ ನಾಲ್ಕು ಪಟ್ಟು ಸೆಟೆನಿಯಂ, ಹೆಚ್ಚಿನ ಆಂಟಿ ಆಕ್ಸಿಡೆಂಟುಗಳಿವೆ.
ಹಾಗಾಗಿ ಬೇಸಿಗೆಯಲ್ಲಿ ಹಣ್ಣುಗಳ ಸೇವನೆ ಒಳ್ಳೆಯದು.

Write A Comment