ಅಂತರಾಷ್ಟ್ರೀಯ

`ಧೂಮಪಾನ ಬಿಡಿಸೋ’ ಆಹಾರ!

Pinterest LinkedIn Tumblr

smoking

ಧೂಮಪಾನ ಆರೋಗ್ಯಕ್ಕೆ ಮಾರಕವೆನಿಸಿದರೂ ಹಲವರು ಧೂಮಪಾನ ಚಟಕ್ಕೆ ದಾಸರಾಗುತ್ತಿದ್ದಾರೆ. ಮತ್ತೆ ಕೆಲವರು ಧೂಮಪಾನ ಬಿಡುವ ಮನಸಿದ್ದರೂ ಅದು ಆಗದೇ ತೊಳಲಾ‌ಡುತ್ತಿದ್ದಾರೆ. ಧೂಮಪಾನ ಬಿಡುವ ದೃಢ ಸಂಕಲ್ಪ ಹೊಂದಿರುವವರಿಗೆ ಕೆಲ ಆಹಾರಗಳಿಂದ ಧೂಮಪಾನ ಬಿಡಲು ಸಾಧ್ಯವಿದೆ. ಈ ಆಹಾರಗಳು ಧೂಮಪಾನದಿಂದ ದೂರವಿರಲು ನೆರವಾಗುತ್ತವೆ.

ಸಿಗರೇಟ್ ಬೇಕೆನಿಸಿದಾಗ ಹಸಿಯಾಗಿ ಸೇವಿಸಬಹುದಾದ ಸೌತೆಕಾಯಿ, ಕ್ಯಾರೆಟ್, ಕೆಲೆರಿ ಎಲೆಗಳನ್ನು ಸೇವಿಸಿ ಆ ಬಳಿಕ ಸಿಗರೇಟ್ ಸೇದಿದರೆ ಅದು ಅತಿಯಾದ ಕಹಿ ರುಚಿ ಇರುವಂತೆ ಮಾ‌ಡುತ್ತದೆ. ಇದರಿಂದ ಸಿಗರೇಟ್ ಕಹಿ ಎಂಬ ಭಾವನೆ ಮೂಡಿ ಸಿಗರೇಟ್‌ನಿಂದ ದೂರಾಗಬಹುದು.

ಸಿಗರೇಟಿನ ಹೊಗೆಯ ಮೂಲಕ ರಕ್ತಕ್ಕೆ ಸೇರಿದ ನಿಕೋಟಿನ್‌ನನ್ನು ನಿಭಾಯಿಸಲು ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್‌ `ಸಿ’ ಅಗತ್ಯವಿದೆ.

ನಿಕೋಟಿನ್ ಲಭ್ಯವಿರುವ ವಿಟಮಿನ್‌ `ಸಿ’ಯನ್ನು ಕಬಳಿಸಿ ಬಿಡುತ್ತದೆ. ಇದೇ ಕಾರಣದಿಂದ ದೇಹದಲ್ಲಿ ವಿಟಮಿನ್ `ಸಿ’ ಕೊರತೆಯಾದವರೆಲ್ಲಾ ಸಿಗರೇಟ್ ಸೇದುವಂತೆ ಮಿದುಳಿಗೆ ಸೂಚನೆ ಹೋಗುತ್ತದೆ. ಹಾಗಾಗಿ ನಿತ್ಯವೂ ಸಾಕಷ್ಟು ವಿಟಮಿನ್ ಸಿ ಹೆಚ್ಚಿರುವ ಆಹಾರ ತಿನ್ನುವ ಮೂಲಕ ನಿಕೋಟಿನ್ ಮೇಲಿನ ಅವಲಂಬನೆಯನ್ನು ಮಿದುಳು ಕಳೆದುಕೊಳ್ಳುತ್ತದೆ. ಹಾಗಾಗಿ ಪ್ರತಿನಿತ್ಯ ಕಿತ್ತಳೆ, ನೇರಳೆಹಣ್ಣು, ವಿವಿಧ ಚೆರ್ರಿ ಹಣ್ಣುಗಳನ್ನು ಸೇವಿಸಿದರೆ ಸಿಗರೇಟ್ ಸೇದಬೇಕು ಅನ್ನಿಸುವುದಿಲ್ಲ. ಸಿಗರೇಟು ಸೇದುತ್ತಿರುವವರು ಥಟ್ಟನೇ ಸಿಗರೇಟ್ ಬಿಡಬಾರದು, ನಿತ್ಯದ ನಿಕೋಟಿನ್ ಪ್ರಮಾಣಕ್ಕೆ ದೇಹ ಮತ್ತು ಮಿದುಳು ಹೊಂದಿಕೊಂಡಿದ್ದು, ಥಟ್ಟನೇ ನಿಕೋಟಿನ್ ನಿಂತು ಹೋದರೆ, ದೇಹ ಬಳಲುತ್ತದೆ. ವಾಂತಿ, ವಾಕರಿಕೆ, ಸುಸ್ತು, ತುರಿಕೆ, ಚಡಪಡಿಕೆ, ತಲೆ ತಿರುಗುವುದು ಇದರ ಸೂಚನೆಗಳಾಗಿದೆ.

ಈ ಸೂಚನೆ ಸರಿಪಡಿಸಲು ಹಸಿ ಶುಂಠಿ ನೆರವಾಗುತ್ತದೆ. ಶುಂಠಿ ಸೇರಿಸಿದ ಟೀ ಸೇವಿಸಿದರೇ ಈ ತೊಂದರೆ ದೂರವಾಗುತ್ತದೆ. ಒಂದು ಅಧ್ಯಯನ ವರದಿ ಪ್ರಕಾರ ಜಿನ್ಸಿಂಗ್ ಎಂಬ ಶುಂಠಿಯಂತಹ ಗಡ್ಡೆಯ ರಸದ ಸೇವನೆಯಿಂದ ಡೋಪಮ್ಯಾನ್ ಎಂಬ ನರ ಪ್ರಚೋದಕ ಹಾರ್ಮೋನೊಂದು ಬಿಡುಗಡೆಯಾಗುತ್ತದೆ. ಇದು ಸಿಗರೇಟು ಸೇದಿದಾಗ ಸಿಗುವ ಪರಿಣಾಮ ನೀಡುವ ಕಾರಣ ಸಿಗರೇಟು ಸೇದಬೇಕು ಎಂಬ ಬಯಕೆ ಉಂಟಾಗುವುದಿಲ್ಲ. ಇದು ಧೂಮಪಾನ ತ್ಯಜಿಸುವವರಿಗೆ ವರದಾನವಾಗಿದೆ.
ಈ ಆಹಾರ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಿಗರೇಟಿನಿಂದ ಮುಕ್ತರಾಗಬಹುದು.

Write A Comment