ಕರಾವಳಿ

ದುಬೈಯಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಗೆ ಸನ್ಮಾನ; ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಲು ಒಂದುಗೂಡಲು ಕರೆ

Pinterest LinkedIn Tumblr

Justice hegde _March 28-2016-007

ದುಬೈ: ಮಾನವೀಯತೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿ ಕೊಂಡರೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದು ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತ ಪಡಿಸಿದರು.

Justice hegde _March 28-2016-001

Justice hegde _March 28-2016-002

Justice hegde _March 28-2016-003

Justice hegde _March 28-2016-004

ದುಬೈಯ ಇಂಡಿಯಾ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಯುಎಇ ಕನ್ನಡಿಗರು ಹಾಗೂ ಮಲಬಾರ್ ಕಲಾ ಸಾಂಸ್ಕೃತಿಕ ವೇದಿ ಜಂಟಿಯಾಗಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಪ್ರಸಕ್ತ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ಎಂಬುದು ವ್ಯಾಪಿಸಿದ್ದು, ಯುವ ಸಮುದಾಯ ಇಂಥ ಸಂದರ್ಭದಲ್ಲಿ ಜಾಗ್ರತವಾಗಬೇಕಿದೆ. ಜೊತೆಗೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದತ್ತ ಹೆಜ್ಜೆಹಾಕಬೇಕಿದೆ ಎಂದರು.

Justice hegde _March 28-2016-005

Justice hegde _March 28-2016-006

Justice hegde _March 28-2016-008

Justice hegde _March 28-2016-009

Justice hegde _March 28-2016-010

Justice hegde _March 28-2016-011

Justice hegde _March 28-2016-012

ಈ ಸಂದರ್ಭದಲ್ಲಿ ಯು ಎ ಇ ಎಕ್ಸ್ಚೇಂಜ್ ನ ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ರಾಜ್ಯ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪದ್ಮಶ್ರೀ ಡಾ.ಬಿ.ಆರ್ ಶೆಟ್ಟಿ ವಹಿಸಿದ್ದರು. ಈ ವೇಳೆ ಮುಖ್ಯ ಅತಿಥಿಗಳಾಗಿ ಆರೋಗ್ಯ ಸಚಿವ ಯು.ಟಿ ಖಾದರ್, ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ , ಉದ್ಯಮಿ ಶಂಸುದ್ದೀನ್ , ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ನ ಪ್ರವೀಣ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ, ಗುಣಶೀಲ ಶೆಟ್ಟಿ, ಮಲಬಾರ್ ಕಲಾ ಸಾಂಸ್ಕೃತಿಕ ವೇದಿ ಅಧ್ಯಕ್ಷ ಯೂಸುಫ್ ಅಲ್ ಫಾಲ ಸುಬ್ಬಯ್ಯ ಕಟ್ಟೆ, ರಶೀದ್ ಹಾಜಿ ಬೆಳ್ಳಾರೆ, ರಶೀದ್ ವಿಟ್ಲ, ಕನ್ನಡಿಗರು ದುಬೈ ಸಾದನ್ ದಾಸ್ ಸಹಿತ ಯುಎಇ ಯಾ ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು.

Justice hegde _March 28-2016-013

Justice hegde _March 28-2016-014

Justice hegde _March 28-2016-015

Justice hegde _March 28-2016-016

Justice hegde _March 28-2016-017

ಕಾರ್ಯಕ್ರಮದ ಪ್ರಮುಖ ಸಂಘಟಕರು ಹಾಗೂ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರೂ ಆದ ಶ್ರೀ ಸರ್ವೋತ್ತಮ ಶೆಟ್ಟಿ ಸ್ವಾಗತಿಸಿದರು. ಸೈಫ್ ಸುಲ್ತಾನ್, ಕೆ.ಎ ಅಬ್ಬಾಸ್, ಪತ್ರಕರ್ತ ಅರ್ಶದ್ ವರ್ಕಾಡಿ ಮತ್ತು ಎ.ಕೆ.ಎಂ ಅಶ್ರಫ್ , ಮಲಬಾರ್ ಕಲಾ ಸಾಂಸ್ಕೃತಿಕ ವೇದಿಯ ಉಪಾಧ್ಯಕ್ಷರಾದ ಅಶ್ರಫ್ ಕಾರ್ಲ ಈ ವೇಳೆ ಹಾಜರಿದ್ದರು.

Write A Comment