ಕರಾವಳಿ

“ಕಡಲಾಚೆಯ ಮಸ್ಕತ್’ನಲ್ಲೊಂದು ಮೊದಲಬಾರಿಗೆ ಊರಿನ ಗ್ರಾಮೀಣ ರೀತಿಯ ಬಾಂಧವ್ಯ ಬಂಧ”

Pinterest LinkedIn Tumblr

Oman _March 27-2016-009

ಸೋಶಿಯಲ್ ಫೋರಂ ಮಸ್ಕತ್(ಒಮಾನ್) ಇದರ ಅಡಿಯಲ್ಲಿ ದಿನಾಂಕ 25/03/2016 ರಂದು ಮಸ್ಕತ್’ನ ಬರ್ಕಾ ಫಾರ್ಮ್ ಹೌಸ್’ನಲ್ಲಿ “ಬಾಂಧವ್ಯ-2016” ಎಂಬ ಹೆಸರಿನಲ್ಲಿ ನಡೆದ ಕರ್ನಾಟಕ ಸಹೋದರ ಪ್ರವಾಸಿಗಳ ಬಾಂಧವ್ಯ ಬೆರೆಸುವ ಮನರಂಜನೆಯೊಂದಿಗಿನ ಆಟೋಟ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.

Oman _March 27-2016-001

Oman _March 27-2016-002

Oman _March 27-2016-003

Oman _March 27-2016-004

Oman _March 27-2016-005

Oman _March 27-2016-006

Oman _March 27-2016-007

Oman _March 27-2016-008

ಕಾರ್ಯಕ್ರಮದಲ್ಲಿ ಕಡಲಾಚೆಯ ಮಸ್ಕತ್’ನಲ್ಲಿ ಮೊಟ್ಟಮೊದಲ ಬಾರಿಗೆ ಊರಿನ ಹಳೆಯ ನೆನಪನ್ನು ಮೆಲುಕುಹಾಕುವ ಗ್ರಾಮೀಣ ಪ್ರದೇಶದ ಗೂಡಂಗಡಿ,ಚರ್ಮುರಿ ಅಂಗಡಿ,ತಟ್ಟಿ ಹೋಟೆಲ್,ಆಮ್ಲೇಟ್ ಅಂಗಡಿಗಳನ್ನು ಮಾಡಿ ಹೋಬಳಿ ಮಟ್ಟದ ಸ್ವಾದವನ್ನು ರಚಿಸಿ ಪ್ರವಾಸಿ ಸಹೋದರರ ಮನತಣಿಸುವಲ್ಲಿ ಯಶಸ್ವಿಯಾಯಿತು.ಊರಿನಲ್ಲಿಯೂ ಇತ್ತೀಚೆಗೆ ಮರೆಯಾಗುತ್ತಿರುವ ಇಂತಹ ಅಂಗಡಿಗಳಿಗೆ ಬೇಕಾದ ಸಾಮಾಗ್ರಿಗಳನ್ನು ಊರಿನಿಂದ ತರಲು ಮಾಡಿದ ಪ್ರಯಾಸವನ್ನು ಸವಾಲಾಗಿ ತೆಗೆಯುವಲ್ಲಿ ಸೋಶಿಯಲ್ ಫೋರಂ ಮಸ್ಕತ್ ಬಳಗ ಯಶಸ್ವಿಯಾಗಿದ್ದು ಪ್ರವಾಸಿ ಸಹೋದರರ ಪ್ರಶಂಸೆಗೆ ಪಾತ್ರವಾಯಿತು.

ಅಲ್ಲದೆ ಊರಿನ ಮದುವೆ ಮನೆಯ ರೀತಿಯಲ್ಲಿಯೇ ಈ ಫಾರ್ಮ್ ಹೌಸ್ ಆವರಣದಲ್ಲಿಯೇ ಊಟೋಪಚಾರವನ್ನು ತಯಾರು ಮಾಡಿ ಬಡಿಸಿರುವುದು ವಿಶಿಷ್ಟವೆನಿಸಿದ್ದು ಈ ಕಾರ್ಯಕ್ರಮಕ್ಕೆ ಬಂದಂತಹಾ ಅನಿವಾಸಿ ಭಾರತೀಯ ಸಹೋದರರ ಮನತಣಿಸುವಲ್ಲಿ ಯಶಸ್ವಿಯಾಗಿದ್ದು ಸೋಶಿಯಲ್ ಫೋರಂ ಮಸ್ಕತ್ ಬಳಗದ ವಿಜಯವಾಗಿತ್ತು.

Oman _March 27-2016-010

Oman _March 27-2016-011

Oman _March 27-2016-012

Oman _March 27-2016-013

Oman _March 27-2016-014

Oman _March 27-2016-015

Oman _March 27-2016-016

ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಆಟೋಟ ಸ್ಪರ್ದೆ,ಪುರುಷರಿಗಾಗಿ ಊರಿನ ಹಳೆಯ ಕಾಲದ ನೆನಪಿನ ಆಟೋಟ ಸ್ಪರ್ದೆ,ಅಲ್ಲದೆ ಮಹಿಳೆಯರಿಗಾಗಿ ಸೋಶಿಯಲ್ ಫೋರಂ  ಮಹಿಳಾ ಸದಸ್ಯರಿಂದಲೇ ಮಾಡಿದ ಆಟೋಟ ಸ್ಪರ್ದೆಯು ಈ ಬಾಂಧವ್ಯದ ಸಮುದಾಯ ಬಂಧ ಬೆಸೆಯುವಲ್ಲಿ ಸಫಲವಾಗಿದೆ ಎಂಬುವುದು ಈ ಕಾರ್ಯಕ್ರಮದ ಪ್ರಯೋಜನ ಪಡೆದ ಪ್ರವಾಸಿಗಳ ಅಭಿಪ್ರಾಯವಾಗಿತ್ತು.ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಅರ್ಥವತ್ತಾದ ಸ್ಟೇಜ್ ಸ್ಕಿಟ್,ದಫ್ ಪರಿಣಾಮಕಾರಿಯಾಗಿ ಯಶಸ್ವಿಯಾಗಿತ್ತು.

ಕಾರ್ಯಕ್ರಮದ ಕೊನೆಯ ಭಾಗದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಜನಾಬ್ ಅಸ್ಲಂ ಹಸನ್ ಮಾತನಾಡಿ ಸಮುದಾಯದ ಒಗ್ಗಟ್ಟಿಗಾಗಿ ಸಮುದಾಯ ಅಲೆ ಅಲೆಯಾಗದೆ ಒಂದುಗೂಡುತ್ತಾ ಬಾಂಧವ್ಯ ಬೆಸುಗೆಯಲ್ಲಿದ್ದರೆ ನಮ್ಮ ಸಮುದಾಯವನ್ನು ಉನ್ನತವಾದ ಸಬಲೀಕರಣ ಮಾದರಿ ಸಮುದಾಯವಾಗಿ ಕಾಣಲು ನಮಗೆ ಸಾಧ್ಯವಾಗಬಹುದು ಎನ್ನುತ್ತಾ ಉದಾಹರಣೆಯಾಗಿ ಇಂದಿನ ಈ ಕೂಟದ ಯಶಸ್ವಿಯೂ ಕೂಡ ಸದಸ್ಯರ ಒಗ್ಗಟ್ಟಿನ ಫಲವಾಗಿದೆ ಎನ್ನುತ್ತಾ ಸೋಶಿಯಲ್ ಫೋರಂನ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು.

Oman _March 27-2016-017

Oman _March 27-2016-018

Oman _March 27-2016-019

Oman _March 27-2016-020

Oman _March 27-2016-021

Oman _March 27-2016-022

ಸೋಶಿಯಲ್ ಫೋರಂ ಮಸ್ಕತ್ ಇದರ ಅಧ್ಯಕ್ಷರಾದ ಮುಹಮ್ಮದ್ ಅನ್ವರ್ ಮೂಡಬಿದ್ರೆ ಮಾತನಾಡಿ ಮಸ್ಕತ್ನಲ್ಲಿ ಸೋಶಿಯಲ್ ಫೋರಂ ಅನಿವಾಸಿ ಭಾರತೀಯರ ಕಷ್ಟ ನಷ್ಟಗಳಲ್ಲಿ ಮಾಡಿದ ಕಾನೂನು ರೀತಿಯ ಸಹಕಾರಗಳನ್ನು ವಿವರಿಸಿದರು.

ಸಭೆಯಲ್ಲಿ ಸೋಶಿಯಲ್ ಫೋರಂ ಒಮಾನ್ ಇದರ ರಾಷ್ಟ್ರಾದ್ಯಕ್ಷ ಹಮೀದ್ ಪಾಣೆಮಂಗಳೂರು,ಇಂಡಿಯನ್ ಪ್ರವಾಸಿ ಫೋರಂ ಇದರ ಅಧ್ಯಕ್ಷರಾದ ಯೂಸುಫ್ ಹೈದರ್ ಮುಕ್ಕ, ರಾಜ್ಯ ಉಪಾದ್ಯಕ್ಷ ಜನಾಬ್ ಮೊಹಿದಿನ್ ಸಾಹೇಬ್ ಸಾಸ್ತಾನ್ ಉಪಸ್ತಿತರಿದ್ದರು.ಈ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅನ್ಸಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.ನೂರ್ ಮುಹಮ್ಮದ್ ಸ್ವಾಗತಿಸಿದರು.

 ವರದಿ: ಅಬ್ದುಲ್ ಮುಬಾರಕ್ ಕಾರಾಜೆ

Write A Comment