ಕರಾವಳಿ

ಮಾ 25 ದುಬೈಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಪ್ರತಿನಿಧಿ ಸಂಗಮ ಯಶಸ್ವಿ ಗೊಳಿಸುವಂತೆ ಕೆ ಐ ಸಿ ಕೇಂದ್ರ ಸಮಿತಿ ಕರೆ

Pinterest LinkedIn Tumblr

Untitled

ದುಬೈ ; ಮಾರ್ಚ್ 25 ರಂದು ಜುಮಾ ನಮಾಝಿನ ಬಳಿಕ ದೇರಾ ರಾಫೀ ಹೋಟೆಲ್ ಸಭಾಂಗಣದಲ್ಲಿ ನಡೆಯಲಿರುವ ಬೃಹತ್ ಎಸ್ ಕೆ ಎಸ್ ಎಸ್ ಎಫ್ ಪ್ರತಿನಿಧಿ ಸಂಗಮ ಹಾಗೂ ಝೈನುಲ್ ಉಲಮಾ ಝೈನುದ್ದೀನ್ ಮುಸ್ಲಿಯಾರ್ ಅನುಸ್ಮರಣಾ ಕಾರ್ಯಕ್ರಮದಲ್ಲಿ ಅನಿವಾಸಿ ಸಮಸ್ತ ಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಲಿಸುವಂತೆ ಕೆ ಐ ಸಿ ಕೇಂದ್ರ ಸಮಿತಿಯು ಕರೆ ನೀಡಿದೆ.

ಈ ಪ್ರಯುಕ್ತ ಪತ್ರಿಕಾ ಪ್ರಕಟಣೆಯನ್ನು ನೀಡಿದ ಕೆ ಐ ಸಿ ಕೇಂದ್ರ ಸಮಿತಿ ಪಧಾಧಿಕಾರಿಗಳು ಇಂದು ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿರುವ ಮುಂಚೂಣಿ ಸಂಘಟನೆಗಳಲ್ಲಿ ಒಂದಾದ ಎಸ್ ಕೆ ಎಸ್ ಎಸ್ ಎಫ್ ದುಬೈಯಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದು , ಬೆಂಗಳೂರಿನಲ್ಲಿ ನಡೆದ ಪ್ರತಿನಿಧಿ ಸಂಗಮ ಕಾರ್ಯಕ್ರದಲ್ಲಿ ಅಸ್ತಿತ್ವಕ್ಕೆ ಬಂದ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಗೊಂಡು ಇದೀಗ ಯು ಎ ಇ ಆಗಮಿಸಿರುವ ಸಂಘಟನಾ ಚತುರ, ಪ್ರಭಾಷಣ ವೇದಿಕೆಗಳಲ್ಲಿ ತನ್ನ ವಾಕ್ಚಾತುರ್ಯಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿರುವ , ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಪ್ರಧಾನಿಸುವ ” ಕೌಸರಿ ” ಬಿರುದುದಾರಿಗಳಲ್ಲಿ ಓರ್ವರೂ , ಪ್ರಸಕ್ತ ಅಕಾಡೆಮಿಯ ಪ್ರಾಧ್ಯಾಪಕರೂ ಆಗಿರುವ ಮುಹಮ್ಮದ್ ಅನೀಸ್ ಕೌಸರಿಯವರು ಮುಖ್ಯ ಪ್ರಭಾಷಣಕಾರರಾಗಿ ಭಾಗವಹಿಸಲಿದ್ದು ಅನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೆ ಐ ಸಿ ಕೇಂದ್ರ ಸಮಿತಿ ಪಧಾಧಿಕಾರಿಗಳು ವಿನಂತಿಸಿಕೊಂಡಿರುತ್ತಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ಹಲವಾರು ಸಂಘ ಸಂಸ್ಥೆಗಳ ನೇತಾರರು , ಉಲಮಾ ಉಮರಾ ಶಿರೋಮಣಿಗಳು ಪ್ರಭಾಷಣ ಲೋಕದ ಮುಂಚೂಣಿ ನಾಯಕರು ಭಾಗವಹಿಸಲಿದ್ದು ಕಾರ್ಯಕ್ರಮವು ಜುಮಾ ನಮಾಝಿನ ಬಳಿಕ ಪ್ರಾರಂಭಗೊಳ್ಳಲಿದೆ.

Write A Comment