ಕರಾವಳಿ

ಕುಂತೂರು: ಮದ್ಹುರ್ರಸೂಲ್ ಪ್ರಭಾಷಣ-ಅನುಸ್ಮರಣಾ ಸಮ್ಮೇಳನ-ಬುರ್ದಾ ಮಜ್ಲಿಸ್

Pinterest LinkedIn Tumblr

7795640f-fa5b-49a6-a10f-52987529706e

ಕುಂತೂರು: ಕರ್ನಾಟಕ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಇದರ ಕುಂತೂರು ಘಟಕದ ವತಿಯಿಂದ ಏರ್ಪಡಿಸಿದ ಮದ್ಹುರ್ರಸೂಲ್ ಪ್ರಭಾಷಣ, ಅನುಸ್ಮರಣಾ ಸಮ್ಮೇಳನ ಹಾಗೂ ಬುರ್ದಾ ಮಜ್ಲಿಸ್ ಅತ್ಯಂತ ವಿಜೃಂಭಣೆಯಿಂದ ಮರ್ಹೂಂ ಪೋಸೋಟ್ ತಂಙಳ್ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅಚ್ಚುಕಟ್ಟಾಗಿ ನಡೆಯಿತು.

e75568f4-abda-4313-9db6-ec81dded7ed8

8420cdff-f05f-4db6-907a-449db82771da

41feed1d-342b-4d35-9934-df885b897b03

9d2c4742-0a72-441c-b5fd-5a7f2f0a54dc

0ca811ae-633e-4acc-a88e-9d134ed863a9

ಮಗರಿಬ್ ನಮಾಝ್ ಬಳಿಕ ನಡೆದ ಕಾರ್ಯಕ್ರಮವು ಮಸ್ವೂದ್ ಸ ಅದಿ ನೇತೃತ್ವದ ಮಿಶ್ಕಾತುಲ್ ಮದೀನಾ ಬುರ್ದಾ ತಂಡದ “ಬುರ್ದಾ ಆಲಾಪನೆ” ಹಾಗೂ ಮಾಸ್ಟರ್ ಶಮ್ಮಾಸ್ ಉಲ್ಲಾಳ ಇವರ ಸುಶ್ರಾವ್ಯ “ನ-ಅತೇ ರೀಫ್” ಗಾಯನದ ಮೂಲಕ ಆರಂಭಗೊಂಡು ಸಯ್ಯದ್ ಸಿ ಟಿ ಎಂ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್ ರವರ ಭಕ್ತಿ ನಿರ್ಬರವಾದ ದುವಾ ಮತ್ತು ಪ್ರಾಸ್ತಾವಿಕ ಭಾಷಣದೊಂದಿಗೆ ಮುಂದುವರಿಯಿತು ತಂಙಳ್ ರವರು ತನ್ನ ಪ್ರಭಾಷಣದಲ್ಲಿ ನಮ್ಮನ್ನಗಲಿದ ಉಲಮಾ ನೆತಾರರುಗಳಾದ ತಾಜುಲ್ ಉಲಮಾ, ನೂರುಲ್ ಉಲಮಾ, ಶಂಸುಲ್ ಉಲಮಾ, ಪೋಸೋಟ್ ತಂಗಲ್ ಮೊದಲಾದವರು ಜೀವಿಸಿದ ಜೀವನ ಶೈಲಿಯ ಬಗ್ಗೆ ಮನ ಮುಟ್ಟುವ ಶೈಲಿಯಲ್ಲಿ ವಿವರಿಸಿ ಅಹ್ಲು ಸುನ್ನತ್ ನ ಸತ್ಪಥ ಮತ್ತು ತತ್ವಾದರ್ಶಗಳನ್ನು ಪಾಲಿಸಿ ಜೀವನ ನಡೆಸಲು ನಿರ್ದೇಶಿಸಿದರು.

ಕಾರ್ಯಕ್ರಮದ ಮುಖ್ಯ ಪ್ರಭಾಷಣ ನಡೆಸಿದ ಬಹು ಶಾಕಿರ್ ಬಾಖವಿ ಮಂಬಾಡ್ ತನ್ನ ವಾಕ್ಚಾತುರ್ಯದ ಮೂಲಕ ಹಬೀಬ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಂ ತಂಙಳ್ ರವರ ಜೀವನ ಚರಿತ್ರೆಯನ್ನೂ ಇಂದಿನ ಯುವ ಸಮುದಾಯಕ್ಕೆ ಬೇಕಾದ ಮಾರ್ಗದರ್ಶನಗಳನ್ನೂ ಅತ್ಯಂತ ಸುಲಲಿತ ಶೈಲಿಯಲ್ಲಿ ಪ್ರಸ್ತಾಪಿಸಿದರು ಹಾಗೂ ಎಸ್ಸೆಸ್ಸೆಫ್ ಕಾರ್ಯಕರ್ತರು ಶಾಂತಿ ಸಮಾಧಾನವನ್ನು ಮಾತ್ರವೇ ಪಾಲಿಸುವವರಾಗಿದ್ದು ಎಲ್ಲಿಯೂ ಅಹಿಂಸೆಗೆ ಅವಕಾಶ ಕೊಡುವವರಲ್ಲ, ಆಕ್ರಮಿಸಲ್ಪಟ್ಟರೆ ಪ್ರತಿ ದಾಳಿ ನಡೆಸುವವರಲ್ಲ ಶಾಂತಿಯ ಮೂಲಕ ಉತ್ತರ ಹೇಳುವವರು ಹಾಗೂ ಆಲಿಂ ಗಳಿಗಿರುವ ಮಹತ್ವ ಮತ್ತು ಆಲಿಂ ಗಳ ಪ್ರಾಮುಖ್ಯತೆಯನ್ನೂ ಈ ಸಂದರ್ಭ ನೆನಪಿಸಿದರು.

ಕಾರ್ಯಕ್ರಮವನ್ನು ಉಮರ್ ಮುಸ್ಲಿಯಾರ್ ಮರ್ಧಾಳ ಉದ್ಘಾಟಿಸಿದರು, ಶಾಖಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಲತೀಫಿ ಸುರುಳಿ ಸ್ವಾಗತಿಸಿ ಧನ್ಯವಾದವಿತ್ತರು. ಕಾರ್ಯಕ್ರಮದ ಯಶಸ್ವಿಗೊಸ್ಕರ ಎಸ್ಸೆಸ್ಸೆಫ್ ಮರ್ದಾಳ, ಕೋಡಿಂಬಾಳ, ಕಡಬ, ನೆಲ್ಯಾಡಿ, ಅತೂರು, ಕೆಮ್ಮಾರ, ಉಪ್ಪಿನಂಗಡಿ ವಲಯ ಮತ್ತು ಶಾಖೆಯ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ನೆರವಾದರು ಮಾತ್ರವಲ್ಲದೆ ಕರ್ನಾಟಕದ ಅನಿವಾಸೀ ಸಂಘಟನೆಯಾದ ಕೆ.ಸಿ.ಎಫ್ (ಕರ್ನಾಟಕ ಕಲ್ಚರಲ್ ಫೌಂಡೇಶನ್)ಸೌದಿ ಅರೇಬಿಯಾ, ಯು ಏ ಯಿ, ಖತಾರ್ ದೇಶಗಳ ಸದಸ್ಯರು ಸರ್ವ ಸಹಕಾರಗಳನ್ನು ನೀಡಿದ್ದು ಪ್ರಶಂಸೆಗೊಳಪಟ್ಟರು. ಶಾಹುಲ್ ಹಮೀದ್ ತಂಙಳ್ ಮರ್ದಾಳ, ಉದ್ಯಮಿ ಸಾಗರ್ ಹಂಝಾ ನೆಲ್ಯಾಡಿ, AMEC ಮೂಡಡ್ಕ ಮ್ಯಾನೇಜರ್ ಅಶ್ರಫ್ ಸಖಾಫಿ, ಎಸ್ ವೈ ಎಸ್ ಉಪ್ಪಿನಂಗಡಿ ಸೆಂಟರ್ ಅಧ್ಯಕ್ಷ ಶಾಫಿ ಸಖಾಫಿ ಅಲ್ ಕಾಮಿಲ್, ಕುಂತೂರು ಮಾಜಿ ಖತೀಬರಾದ ಇಲ್ಯಾಸ್ ಮದನಿ ಕೋಡಿಂಬಾಳ, ಬಷೀರ್ ಸಅದಿ ಕೆಮ್ಮಾರ, ಸ್ವಾಗತ ಸಮಿತಿ ಚೈರ್ಮಾನ್ ಬಿ ಕೆ ಹಮೀದ್, ಐ ಸಿ ಎಫ್ ಮತ್ತು ಕೆ ಸಿ ಎಫ್ ಮುಸಫ್ಫಾಃ ಕಾರ್ಯಕರ್ತರಾದ ಕೆ ಎಸ್ ಅಬ್ಬಾಸ್ ನೆಕ್ಕರೆ, ಉಪ್ಪಿನಂಗಡಿ ಡಿವಿಷನ್ ಕಾರ್ಯದರ್ಶಿ ಮುಹಮ್ಮದಲಿ ತುರ್ಕಳಿಕೆ, ಸೆಕ್ಟರ್ ಕಾರ್ಯದರ್ಶಿ ಆದಂ ಮದನಿ ಮೊದಲಾದವರು ಈ ಸಂದರ್ಭ ಹಾಜರಿದ್ದರು. ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ಅಂತರ್ಜಾಲದಲ್ಲಿ “ಕರ್ನಾಟಕ ಸುನ್ನೀ ಆನ್ಲೈನ್ ಕ್ಲಾಸ್ ರೂಂ” ಮೂಲಕ ನೇರ ಪ್ರಸಾರ ಏರ್ಪಡಿಸಲಾಗಿತ್ತು.

Write A Comment