ಅಂತರಾಷ್ಟ್ರೀಯ

ಪಾಲಕ್‌ ಸೇವಿಸಿ…ನಿರೋಗಿಗಳಾಗಿ

Pinterest LinkedIn Tumblr

Fresh spinach iin a wooden bowl on a cutting board

ಹಸಿ ತರಕಾರಿ ಸೊಪ್ಪುಗಳನ್ನು ಸೇವಿಸುವುದರಿಂದ ಪೋಷಕಾಂಶಗಳು ದೊರೆತು ದೇಹವು ಸದೃಢವಾಗಿ ಬೆಳೆದು,ಆರೋಗ್ಯಕರವಾಗಿರುತ್ತದೆ. ದಿನನಿತ್ಯ ನಾವು ತಿನ್ನುವ ನಾನಾ ಬಗೆಯ ಸೊಪ್ಪುಗಳಲ್ಲಿ ಪಾಲಕ್‌ಗೆ ಅಗ್ರಸ್ಥಾನ.

ಪಾಲಕ್‌ ಸೊಪ್ಪಿನ ಖಾದ್ಯಗಳನ್ನು ಹೆಚ್ಚು ಸೇವಿಸುತ್ತಾರೆ. ಪಾಲಕ್‌ ನಿಂದ ಯಾವುದೇ ಬಗೆಯ ಆಹಾರ ತಯಾರಿಸಲಿ,ಅದರ ರುಚಿಗೆ ಪಾರವೇ ಇಲ್ಲಾ, ಇದು ಕೇವಲ ರುಚಿಕರ ಮಾತ್ರವಲ್ಲಾ,ಇದು ಕಬ್ಬಿಣದಂಶ ಹಾಗೂ ಜೀವಸತ್ವಗಳ ಆಗರವಾಗಿದೆ. ಅಲ್ಲದೇ ಕೆಲವೊಂದು ರೋಗಗಳನ್ನೂ ಗುಣಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.ಹಾಗಾದರೇ ಪಾಲಕ್‌ ಸೊಪ್ಪಿನಿಂದಾಗುವ ಪ್ರಯೋಜನಗಳ ಕುರಿತು ಈ ಕೆಳಗಿನಂತೆ ಪಟ್ಟಿಮಾಡಬಹುದಾಗಿದೆ.

* ಪಾಲಕ್‌ ಸೊಪ್ಪು ಫ್ರೋಲೆಟ್ ಅಂಶವನ್ನು ಹೊಂದಿದ್ದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಇದು ಇತರೆ ಹೃದಯ ಸಂಬಂಧಿ ಖಾಯಿಲೆಗಳನ್ನು ನಿವಾರಿಸುತ್ತದೆ.

* ಪಾಲಕ್‌ಸೊಪ್ಪಿನಲ್ಲಿ ಕ್ಯಾರೋಟಿನೈಡ್ ಅಂಶವಿದ್ದು ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ ಮತ್ತು ಅದರ ಪ್ರಮಾಣವನ್ನು ಹೆಚ್ಚಾಗದಂತೆ ನಿಯಂತ್ರಿಸುತ್ತದೆ.

* ಪಾಲಕ್‌ ಸೇವನೆಯು ಮೊಡವೆಗಳನ್ನು ಹೋಗಲಾಡಿಸುವುದೇ ಅಲ್ಲದೇ ಮುಖದಲ್ಲಿ ಬೇಗನೇ ನೆರಿಗೆ ಮೂಡದಂತೆ ಕಾಪಾಡುತ್ತದೆ.

* ಸಾಮಾನ್ಯವಾಗಿ ಉಂಟಾಗಬಹುದಾದ ದೃಷ್ಠಿದೋಷವನ್ನು ತಡೆಗಟ್ಟುವಲ್ಲಿ ಪಾಲಕ್‌ ಸೊಪ್ಪು ನೆರವಾಗುತ್ತದೆ.

* ಮೆದುಳಿನ ನರಕೋಶಗಳ ಅಭಿವೃದ್ಧಿಗೆ ಸಹಾಯಕವಾಗಬಲ್ಲ ಪೋಷಕಾಂಶಗಳು ಪಾಲಕ್‌ ಸೊಪ್ಪಿನಲ್ಲಿರುವುದರಿಂದ ಅದರ ಸೇವನೆಯು ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಬಲ್ಲದು.

* ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪಾಲಕ್‌ ದಿವ್ಯೌಷಧವಾಗಬಲ್ಲದು.

* ದಿನನಿತ್ಯ ಪಾಲಕ್‌ ಸೊಪ್ಪನ್ನು ಸೇವಿಸುವುದರಿಂದ ಅದರಲ್ಲಿರುವ ಕಬ್ಬಿಣದಂಶದಿಂದಾಗಿ ನಮ್ಮ ರಕ್ತಕಣಗಳು ವೃದ್ಧಿಯಾಗಿ ರಕ್ತಹೀನತೆಯನ್ನು ದೂರವಿಡಬಹುದು.

* ಪಾಲಕ್‌ನಲ್ಲಿರುವ ಎ ಜೀವಸತ್ವವು ಚರ್ಮವನ್ನು ಬಿಗಿಗೊಳಿಸಿ ಕಾಂತಿಯುತವಾಗಿರಿಸುತ್ತದೆ.

* ಪಾಲಕ್‌ನಲ್ಲಿನ ಸಿ ಜೀವಸತ್ವವು ಹೊಸ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ.

* ಬಿಸಿಲಿನ ತಾಪದಿಂದಾಗಿ ಮಂಕಾಗಿರುವ ಚರ್ಮಕ್ಕೆ ಸಹಜವರ್ಣ ಪಡೆಯಲು ಪಾಲಕ್‌ ನೆರವಾಗುತ್ತದೆ.

* ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಕಣಗಳನ್ನು ನಾಶಮಾಡಬಲ್ಲ ಶಕ್ತಿ ಪಾಲಕ್‌ನಲ್ಲಿದೆ.

* ತ್ವಚೆಯ ತಳಭಾಗದಲ್ಲಿ ಸಂಗ್ರಹವಾಗಿ ಮೊಡವೆಗೆ ಕಾರಣವಾಗುವ ವಿಷಕಾರಿ ವಸ್ತುಗಳನ್ನು ರಕ್ತದಿಂದಲೇ ನಿವಾರಿಸಲು ಪಾಲಕ್‌ ಸಹಾಯಕವಾಗುತ್ತದೆ.

* ಕೂದಲು ಉದುರುವ ಸಮಸ್ಯೆಯಿರುವವರು ಬೆಳಗ್ಗೆ ಎದ್ದೊಡನೆ ಒಂದು ಲೋಟ ಪಾಲಕ್‌ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಕೆಲ ದಿನಗಳಲ್ಲೇ ಪರಿಣಾಮ ಕಂಡುಬರುತ್ತವೆ.
ಹರೀಶ್‌ ಕುಮಾರ್‌

Write A Comment