ಅಂತರಾಷ್ಟ್ರೀಯ

ಇ-ಸಿಗರೇಟ್ ಗಳೂ ಆರೋಗ್ಯಕ್ಕೆ ಹಾನಿಕರ! ಸಂಶೋಧನಾ ವರದಿ ಏನು ಹೇಳುತ್ತಿದೆ ಇಲ್ಲಿದೆ ನೋಡಿ…

Pinterest LinkedIn Tumblr

e-sigaret

ನ್ಯೂಯಾರ್ಕ್: ಸಿಗರೇಟು ವ್ಯಸನಮುಕ್ತ ‘ಔಷಧ’ ಸೋಗಿನಲ್ಲಿ ಲಗ್ಗೆಯಿಟ್ಟ ಎಲೆಕ್ಟ್ರಾನಿಕ್ ಸಿಗರೇಟ್(ಇ-ಸಿಗರೇಟ್ ) ಗಳೂ ಸೇಫ್ ಅಲ್ಲ!.

ತಂಬಾಕು ಸಿಗರೇಟ್ ಗಳಂತೆಯೇ ಎಲೆಕ್ಟ್ರಾನಿಕ್ ಸಿಗರೇಟ್ ಗಳೂ ಸಹ ಕ್ಯಾನ್ಸರ್ ಗೆ ಕಾರಣವಗಾಬಲ್ಲವು ಹೊಸ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ. “ತಂಬಾಕು ಸಿಗರೇಟ್ ಗಳಿಗಿಂತ ಇ-ಸಿಗರೇಟ್ ಗಳು ಸುರಕ್ಷಿತವಾಗಿ ಉಳಿದಿಲ್ಲ” ಎಂದು ಕ್ಯಾಲಿಫೋರ್ನಿಯಾದ ಸಂಶೋಧನಾ ತಂಡದ ಪ್ರೊ. ಜೆಸ್ಸಿಕಾ ವಾಂಗ್-ರೊಡ್ರಿಗಜ್ ಹೇಳಿದ್ದಾರೆ.

ಎರಡೂ ಮಾದರಿಯ ಸಿಗರೇಟ್ ನಿಂದ ಹೊರಬರುವ ಹೊಗೆಯನ್ನು ಸಂಗ್ರಹಿಸಿ ಸಂಶೋಧನೆ ನಡೆಸಲಾಗಿದ್ದು ಎರಡು ಮಾದರಿಯ ಹೊಗೆಯೂ ಮಾನವ ಜೀವಕೋಶಗಳಿಗೆ ಮಾರಕ ಎಂಬ ಅಂಶ ಬಹಿರಂಗವಾಗಿದೆ. ನಿಕೋಟಿನ್ ಇರುವ ಸಿಗರೇಟ್ ಗಳಿಂದ ಜೀವಕೋಶಗಳಿಗೆ ಅತಿ ಹೆಚ್ಚು ಹಾನಿಯುಂತಾಗುತ್ತದೆ, ನಿಕೋಟಿನ್ ಇಲ್ಲದ ಇ-ಸಿಗರೆಟ್ ಗಳಿಂದ ಆರೋಗ್ಯವಂತ ಜೀವಕೋಶಗಳು ಹಾಳಾಗುತ್ತವೆ, ಒಟ್ಟಿನಲ್ಲಿ ಎರಡೂ ಮಾದರಿಯ ಸಿಗರೇಟ್ ಗಳಿಂದ ಜೀವಕೋಶಗಳಿಗೆ ಹಾನಿಯುಂಟಾಗುವುದು ಖಚಿತ ಎನ್ನುತ್ತಿದೆ ಸಂಶೋಧನಾ ವರದಿ.

Write A Comment