ವಾಸ್ತವವಾಗಿ ತ್ವರಿತವಾದ ಲಘುನಿದ್ರೆ ಮಾನಸಿಕ ಜಾಗ್ರತೆ, ದೈಹಿಕ ಚಟುವಟಿಕೆ ಮತ್ತು ಉತ್ತಮ ಮನಸ್ಥಿತಿಯನ್ನು ವರ್ಧಿಸುತ್ತವೆ. ಬಹುಪಾಲು ಸಸ್ತನಿಗಳು ದಿನವಿಡೀ ಅಲ್ಪಾವಧಿ ನಿದ್ದೆ ಮಾಡುವುದಕ್ಕೆ ಆದ್ಯತೆ ನೀಡುತ್ತವೆ. ಇದೇ 8-10 ಗಂಟೆಗಳ ಕಾಲ ರಾತ್ರಿ ನಿದ್ದೆ ಮಾಡುವ ಮಾನವರಿಗೂ ಅನ್ವಯಿಸುತ್ತದೆ.
ಜನರು ಮುಖ್ಯವಾಗಿ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆ, ಮತ್ತು ರಾತ್ರಿ 2 ಗಂಟೆಯಿಂದ 4 ಗಂಟೆವರೆಗೆ ಈ ಕಿರು ನಿದ್ದೆ ಮಾಡಲು ಇಷ್ಟಪಡುತ್ತಾರೆ. ಅಂದರೆ ಇದರ ಅರ್ಥ, ನಿಮ್ಮ ಆ ಮಧ್ಯಾಹ್ನದ ನಿದ್ದೆ, ಭಾರೀ ಊಟದಿಂದಾಗಿ ಬರುವುದಲ್ಲ ಎಂದು!
ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಉತ್ತಮವಾದ ಮತ್ತು ಸರಿಯಾದ ೪೫ ನಿಮಿಷಗಳ ಕಿರು ನಿದ್ದೆ ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ದಿನವಿಡೀ ಕಿರುನಿದ್ದೆ ಮಾಡುತ್ತಿದ್ದರೆ ಇನ್ನೂ ಒಳ್ಳೆಯದು. ಇದರಿಂದ ತೂಕಡಿಕೆ ಮತ್ತು ಆಯಾಸ ಕಡಿಮೆಯಾಗುತ್ತದೆ. ದೀರ್ಘ ನಿದ್ದೆ ಹೃದಯ ಸಂಬಂಧಿ ರೋಗಗಳು ಉಂಟಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಜನರಿಗೆ ದೀರ್ಘ ನಿದ್ರೆ ಮಾಡುವ ಬಯಕೆ ಹೆಚ್ಚಿದ್ದಲ್ಲಿ ತಜ್ಞರ ಸಹಾಯ ತೆಗೆದುಕೊಳ್ಳುವುದು ಒಳ್ಳೆಯದು.
ಕಿರುನಿದ್ದೆ ಮಾಡಲು ಒಳ್ಳೆಯ ಕಾಲಮಿತಿಯೆಂದರೆ 20 ನಿಮಿಷಗಳಿಂದ 2 ಗಂಟೆಗಳವರೆಗೆ. ನಿಮ್ಮ ನಿದ್ದೆಯ ಸಂದರ್ಭದಲ್ಲಿ ಮೆದುಳು ವಿದ್ಯುತ್ ಚಟುವಟಿಕೆಗಳ ಐದು ಹಂತದ ಚಕ್ರದಲ್ಲಿ ಕೆಲಸ ಮಾಡುತ್ತದೆ. ಆರಂಭಿಕ ಹಂತ ಲಘುವಾಗಿದ್ದು, ಜಾಗೃತಿ ಮತ್ತು ನಿಷ್ಕ್ರಿಯತೆ ನಡುವೆ ಓಡಾಡುತ್ತಿರುತ್ತದೆ. ಎರಡನೆಯ ಹಂತ ನಿಮ್ಮ ದೇಹಕ್ಕೆ ಉತ್ತಮ. ಇದು ಚಲನಶೀಲತೆಯನ್ನು ಹೆಚ್ಚಿಸುತ್ತದೆ. ೪೫ ನಿಮಿಷಗಳ ನಿದ್ರೆ ತ್ವರಿತ ಕಣ್ಣಿನ ಚಲನೆಗೆ ಕಾರಣವಾಗುವ ಮೂಲಕ ಸಂವೇದನಾ ಸಾಮರ್ಥ್ಯದ ವರ್ಧನೆಗೆ ನೆರವಾಗುತ್ತದೆ. ೪೫ ನಿಮಿಷಗಳ ನಂತರದ ಸಮಯ ನಿಧಾನ ತರಂಗ ನಿದ್ದೆಗೆ ಕಾರಣವಾಗಬಹುದು
