ಅಂತರಾಷ್ಟ್ರೀಯ

ಜಾಗತಿಕ ಮಾರುಕಟ್ಟೆಗಳಲ್ಲಿ ದುರ್ಬಲ ವಹಿವಾಟು; ಬೇಡಿಕೆ ಇಲ್ಲದೆ ಕುಸಿದ ಚಿನ್ನದ ದರ

Pinterest LinkedIn Tumblr

gold

ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿ ದುರ್ಬಲ ವಹಿವಾಟು ಕಾಣುತ್ತಿರುವುದರಿಂದ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಆಭರಣ ತಯಾರಕರು ಖರೀದಿಯಿಂದ ದೂರು ಉಳಿದಿರುವುದರಿಂದ ಚಿನ್ನ ಮತ್ತು ಬೆಳ್ಳಿ ದರಗಳು ಗಣನೀಯವಾಗಿ ಕುಸಿದಿವೆ.

ಶುಕ್ರವಾರ ಇಲ್ಲಿನ ಚಿನಿವಾರ ಪೇಟೆ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ರು.300 ಕುಸಿತದೊಂದಿಗೆ ರು.25,950ಕ್ಕೆ ಇಳಿಯಿತು. ಇದು 3 ತಿಂಗಳಲ್ಲೇ ಕನಿಷ್ಠ ದರವಾಗಿದೆ. ಚಿನ್ನದ ಹಾದಿಯಲ್ಲೇ ಸಾಗಿದ ಬೆಳ್ಳಿ ಪ್ರತಿ ಕೆಜಿ ದರ ರು.500 ಕುಸಿತದೊಂದಿಗೆ ರು.34,400ಕ್ಕೆ ಇಳಿಯಿತು. ಕೈಗಾರಿಕೆ ಮತ್ತು ನಾಣ್ಯ ತಯಾರಕರು ಖರೀದಿಯಿಂದ ಹಿಂದೆ ಸರಿದಿದ್ದರು.

ಜಾಗತಿಕ ಮಾರಕಟ್ಟೆಯಲ್ಲಿ ಚಿನ್ನದ ದರಗಳು 5 ವರ್ಷಗಳಲ್ಲೇ ಕನಿಷ್ಠ ಮಟ್ಟದಲ್ಲಿ ವಹಿವಾಟು ಕಾಣುತ್ತಿ ದೆ. ಅಮೆರಿಕದ ಫೆಡರಲ್‍ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಲಿದೆ ಎಂಬ ನಿರೀಕ್ಷೆಗಳ ಮೇರೆಗೆ ಚಿನ್ನದ ಖಾತರಿ ಹೊಂದಿದ್ದ ಹೂಡಿಕೆಗಳನ್ನು ಹೆಚ್ಚು ಮಾರಾಟ ಮಾಡಲಾಗುತ್ತಿದೆ ಎಂದು ವರ್ತಕರು ಹೇಳಿದ್ದಾರೆ.

ಇದರ ಜೊತೆಗೆ ದೀಪಾವಳಿ ಹಬ್ಬ ಮುಗಿದಿದ್ದರಿಂದ ಆಭರಣ ತಯಾರಕರು ಚಿನ್ನದ ಖರೀದಿಯಿಂದ ಹಿಂದೆ ಸರಿದಿದ್ದರು. ಸಿಂಗಾಪುರ ಮಾರುಕಟ್ಟೆಯ ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಔನ್ಸ್ ದರ ಶೇ.0.4 ರಷ್ಟು ನಷ್ಟ ಕಂಡು 1,080,40 ಡಾಲರ್ ಗೆ ಇಳಿದಿತ್ತು.

Write A Comment