ಕರಾವಳಿ

ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ನ.11ರಂದು ಹುತ್ತರಿ ಹಬ್ಬಕ್ಕೆ ದಿನ ನಿಗದಿ

Pinterest LinkedIn Tumblr

ಹುತ್ತರಿ_ಹಬ್ಬ

ವರದಿ ಕೃಪೆ: ಚರಣ್ ಕೇಕಡ
ನಾಪೋಕ್ಲು,  ನವೆಂಬರ್ ೦೯: ಸಮೀಪದ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ನ.11 ರಂದು ಬೆ.10.30೦ಕ್ಕೆ ಹುತ್ತರಿ ಹಬ್ಬದ ದಿನ ಗೊತ್ತುಪಡಿಸಲಾಗುವುದು.

ದೇವತಕ್ಕರು, ನಾಡಿನ 13 ತಕ್ಕಮುಖ್ಯಸ್ಥರು, ಅಮ್ಮಂಗೇರಿ ಜ್ಯೋತಿಷ್ಯರು, ಭಕ್ತರು, ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ವಿಧಿವತ್ತಾಗಿ ಕಲ್ಚಾಡ ಹಾಗೂ ಹುತ್ತರಿ ನಡೆಯುವ ದಿನವನ್ನು ಗೊತ್ತುಪಡಿಸಲಾಗುವುದು ಎಂದು ದೇವತಕ್ಕ ಪರದಂಡ ಕಾವೇರಪ್ಪ ತಿಳಿಸಿದ್ದಾರೆ.

11ರಿಂದ ಕಲ್ಚಾಡ ಹಬ್ಬದ ಕಟ್ಟು ಬೀಳಲಿದ್ದು ಹಬ್ಬದ ವರೆಗೆ ತುಲಾಭಾರ ಸೇವೆ ಹಾಗೂ ನಾಮಕರಣ ಕಾರ್ಯಕ್ರಮಗಳು ಜರುಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Write A Comment