ಕರಾವಳಿ

ದಾಂಪತ್ಯ ಜೀವನದಲ್ಲಿ ಗಂಡನಿಗೆ ಹೆಂಡತಿ ಮೋಸ ಮಾಡುವುದು ಯಾಕೆ ಗೊತ್ತೇ…? ಇಲ್ಲಿದೆ ಅದರ ಕುರಿತ ಮಾಹಿತಿ…

Pinterest LinkedIn Tumblr

cheating-bench

ದಾಂಪತ್ಯವೆಂದರೆ ದಾರದಲ್ಲಿ ಕಟ್ಟಿದ ಗಾಳಿಪಟದಂತೆ. ದಾರ ಕೈಯಿಂದ ಜಾರಿ ಹೋದರೆ ಮತ್ತೆ ಗಾಳಿಪಟವನ್ನು ಹಿಡಿಯುವುದು ಕಷ್ಟ. ದಾಂಪತ್ಯದಲ್ಲಿ ಪರಸ್ಪರ ನಂಬಿಕೆ, ಸಹಕಾರ ಮತ್ತು ಪ್ರೀತಿಯೊಂದಿಗೆ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಶಕ್ತಿಯೂ ಇರಬೇಕು. ಯಾವುದಾದರೊಂದು ವಿಷಯದಲ್ಲಿ ಸಾಮರಸ್ಯ ಕಾಣದೇ ಹೋದಲ್ಲಿ ಆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.

ಈ ಡಿಜಿಟಲ್ ಯುಗದಲ್ಲಿ ವಿವಾಹಗಳು ಎಷ್ಟು ಬೇಗ ನಡೆಯುತ್ತವೋ ಅಷ್ಟೇ ವೇಗದಲ್ಲಿ ವಿಚ್ಛೇದನಗಳೂ ಆಗುತ್ತಿರುವುದನ್ನು ನಾವು ಕಾಣಬಹುದು. ಹೆಣ್ಣಾಗಲೀ ಗಂಡಾಗಲೀದಾಂಪತ್ಯದಲ್ಲಿ ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ ಎಂದುಕೊಂಡಾಗಲೇ ಆ ಸಂಬಂಧದಿಂದ ಹೊರಬರಲು ನಿಶ್ಚಯಿಸುತ್ತಾರೆ. ಹೊಂದಿಕೊಳ್ಳಲು ಆಗುವುದಿಲ್ಲ ಎಂಬ ಕಾರಣವಲ್ಲದೆ ಮೋಸ, ವಂಚನೆಗಳೂ ವಿವಾಹ ವಿಚ್ಛೇದನಕ್ಕೆ ಕಾರಣವಾಗುತ್ತಿವೆ. ಇತ್ತೀಚೆಗೆ ದಂಪತಿಗಳ ಮಧ್ಯೆ ಮೋಸದಾಟಗಳು ಹೆಚ್ಚುತ್ತಿವೆ ಎಂದು ಅಧ್ಯಯನ ವರದಿಯೊಂದರಲ್ಲಿ ಹೇಳಲಾಗಿದೆ. ಮಾತ್ರವಲ್ಲ ಮದುವೆಯಾದ ಮೇಲೆ ಹೆಣ್ಮಕ್ಕಳೇ ಹೆಚ್ಚಾಗಿ ಗಂಡನ ಜತೆ ಮೋಸದಾಟವನ್ನಾಡುತ್ತಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಅಂದಹಾಗೆ ಪತಿ ಪತ್ನಿಯರ ನಡುವಿನ ಸಂಬಂಧದಲ್ಲಿ ಹೆಣ್ಣು ತನ್ನ ಗಂಡನಿಗೆ ಯಾಕೆ ಮೋಸ ಮಾಡುತ್ತಾಳೆ ಎಂಬ ಕಾರಣವನ್ನೂ ವರದಿಯಲ್ಲಿ ನೀಡಲಾಗಿದೆ.

ಗಂಡನಿಂದ ಮೋಸ ಹೋದ ಹೆಣ್ಮಕ್ಕಳು ಅದಕ್ಕೆ ಪ್ರತಿಯಾಗಿ ಗಂಡನಿಗೆ ಬುದ್ಧಿ ಕಲಿಸಲೋಸುಗ ಮೋಸದಾಟವಾಡುತ್ತಾರಂತೆ. ಮಾತ್ರವಲ್ಲದೆ ಗಂಡನ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಅಸಾಧ್ಯವಾದಾಗ ಅವರು ಬೇರೊಂದು ಸಂಬಂಧಕ್ಕೆ ಹಾತೊರೆಯುತ್ತಾರಂತೆ.

ಗಂಡಸರ ಬಗ್ಗೆ ಹೇಳುವುದಾದರೆ ಲೈಂಗಿಕ ಸುಖಕ್ಕೋಸ್ಕರ ಅವರು ವಿವಾಹಬಾಹಿರ ಸಂಬಂಧವನ್ನು ಇಟ್ಟುಕೊಳ್ಳುತ್ತಾರಂತೆ. ಹೆಂಡತಿ ಜತೆಗಿನ ಸಂಬಂಧದಲ್ಲಿ ವೈರುಧ್ಯ ಕಂಡುಬಂದಾಗಲೇ ಅವರು ಇನ್ನೊಂದು ಸಂಗಾತಿಯನ್ನು ಬಯಸುತ್ತಾರೆ. ದಾಂಪತ್ಯದಲ್ಲಿ ಸುಖದ ಕೊರತೆ ಬಂದಾಗ ಗಂಡು ಇನ್ನೊಬ್ಬಳಲ್ಲಿ ಲೈಂಗಿಕ ಸುಖವನ್ನು ಬಯಸಿದರೆ, ಹೆಣ್ಮಕ್ಕಳು ಇನ್ನೊಬ್ಬ ವ್ಯಕ್ತಿಯಿಂದ ಭಾವನಾತ್ಮಕ ಹಾಗೂ ಧೈರ್ಯ ನೀಡುವ ಮಾತುಗಳನ್ನು ಬಯಸುತ್ತಾಳೆ. ಇದು ಕೂಡಾ ದಾಂಪತ್ಯದಲ್ಲಿ ಬಿರುಕುಂಟಾಗಲು ಕಾರಣವಾಗುತ್ತದೆ.

ಈ ವರದಿ ಸಿದ್ಧಪಡಿಸಲು ಕೆಲವೊಂದು ಮಹಿಳೆಯರನ್ನು ಸಂದರ್ಶಿಸಲಾಯಿತು. ಅದರಲ್ಲಿ ಮಹಿಳೆಯೊಬ್ಬರು ನೀಡಿದ ಕಾರಣ ಹೀಗಿದೆ.

ಪ್ರತೀ ದಿನ ಕೆಲಸ ಕೆಲಸ ಎಂದು ಬ್ಯುಸಿಯಾಗಿರುತ್ತಿದ್ದ ನನ್ನ ಗಂಡನಿಗೆ ನನ್ನತ್ತ ಗಮನ ಹರಿಸುವುದಕ್ಕೆ ಸಮಯವೇ ಇರಲಿಲ್ಲ, ಸಂಸಾರಕ್ಕಾಗಿ ನನ್ನ ಸಮಯವನ್ನೆಲ್ಲ ಅರ್ಪಿಸಿದರೂ ನನಗೆ ಪ್ರತಿಯಾಗಿ ಪ್ರೀತಿ ಸಿಗುವುದಿಲ್ಲ ಎಂದು ಅನಿಸಿದಾಗ ನಾನು ಬೇರೊಂದು ಸಂಬಂಧಕ್ಕೆ ಕೈಚಾಚಿದೆ.

ಪ್ರೀತಿ ಮಾಡುವ ಗಂಡ ಮತ್ತು ಮುದ್ದಾದ ಮಕ್ಕಳಿದ್ದರೂ ಅಲ್ಲಿಯೂ ಸಂತೃಪ್ತಿ ಕಾಣದೆ ಬೇರೊಬ್ಬರೊಂದಿಗೆ ಸಂಬಂಧ ಬೆಳೆಸಿದ ಮಹಿಳೆಯರೂ ಇದ್ದಾರೆ.

ಇನ್ನೊಂದು ಮಹಿಳೆಯ ಅನುಭವ ಹೀಗಿದೆ ಮದುವೆಯಾದ ಕೂಡಲೇ ಮಕ್ಕಳು ಬೇಡ ಎಂದು ನಿರ್ಧರಿಸಿದ್ದೆವು. ನನಗೆ ನನ್ನ ಕೆರಿಯರ್ ಬಗ್ಗೆ ಚಿಂತೆ ಇತ್ತು. ಆದರೆ ಮದುವೆಯಾದ ಕೂಡಲೇ ಗಂಡನ ನಿರ್ಧಾರ ಬದಲಾಯಿತು. ನಾನು ಕೆಲಸಕ್ಕೆ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. ಇದು ನಮ್ಮ ನಡುವಿನ ಜಗಳಕ್ಕೆ ಕಾರಣವಾಯ್ತು. ವಿವಾಹವಾಗಿ ಒಂದು ವರುಷದ ನಂತರ ನನಗೆ ಗೊತ್ತಾದದ್ದು ಏನಂದರೆ ಗಂಡ ನನ್ನನ್ನು ಮೋಸ ಮಾಡುತ್ತಿದ್ದರು ಎಂಬುದು. ಅವನ ಮೇಲೆ ದ್ವೇಷ ಸಾಧಿಸುವುದಕ್ಕೋಸ್ಕರವೇ ನಾನು ಬೇರೊಂದು ಸಂಬಂಧಕ್ಕೆ ಹಾತೊರೆದೆ.

ಗಂಡ ಹೆಂಡತಿಯ ನಡುವೆ ನಂಬಿಕೆಯ ಕೊರತೆ ಇದ್ದಾಗಲೇ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಹೆಣ್ಮಕ್ಕಳು ಗಂಡನೊಂದಿಗೆ ಶಾರೀರಕ ಮಾತ್ರವಲ್ಲ ಭಾವನಾತ್ಮಕ ಸಂಬಂಧಗಳೂ ಗಟ್ಟಿಯಾಗಿರಬೇಕೆಂದು ಬಯಸುತ್ತಾರೆ. ಇದು ಸಾಧ್ಯವಾಗದೇ ಇದ್ದಾಗ ಆ ಸಂಬಂಧದಿಂದ ಹೊರ ನಡೆಯುತ್ತಾರೆ ಎನ್ನುತ್ತಿದೆ ಅಧ್ಯಯನ ವರದಿ.

Write A Comment