ರಾಷ್ಟ್ರೀಯ

ವ್ಯಾಪಂ ಹಗರಣ: ಒಡಿಶಾದಲ್ಲಿ ನಿವೃತ್ತ ಐಎಫ್‌ಎಸ್ ಅಧಿಕಾರಿಯ ಮೃತದೇಹ ಪತ್ತೆ

Pinterest LinkedIn Tumblr

Vyapam-scam

ಹೊಸದಿಲ್ಲಿ, ಅ. 18: ವ್ಯಾಪಂ ನೇಮಕಾತಿ ಪರೀಕ್ಷೆಗಳ ವೀಕ್ಷಕರಾಗಿದ್ದ ನಿವೃತ್ತ ಐಎಫ್‌ಎಸ್ ಅಧಿಕಾರಿಯೊಬ್ಬರ ಮೃತ ದೇಹ ಗುರುವಾರ ಪತ್ತೆಯಾಗುವುದರೊಂದಿಗೆ ಈ ಕುಖ್ಯಾತ ಬಹುಕೋಟಿ ಹಗರಣಕ್ಕೆ ಇನ್ನೊಂದು ನಿಗೂಢ ತಿರುವು ದೊರೆತಿದೆ.

ವಿಜಯ್ ಬಹ ದ್ದೂರ್ ಎಂಬ ನಿವೃತ್ತ ಅಧಿಕಾರಿಯ ಮೃತ ದೇಹ ಒಡಿಶಾದ ಝಾರ್ಸುಗುಡದಲ್ಲಿ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹವನ್ನು ಬಹದ್ದೂರರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಲಾಗಿದೆ. ಇದುವರೆಗೆ, ವ್ಯಾಪಂ ಹಗರಣಕ್ಕೆ ಸಂಬಂಧಿಸಿದ 40 ಕ್ಕೂ ಹೆಚ್ಚು ಮಂದಿ ನಿಗೂಢವಾಗಿ ಸಾವನ್ನಪ್ಪಿ ್ದಾರೆ.ವಿವಾದಿತ ಹಗರಣಕ್ಕೆ ಸಂಬಂಧಿಸಿ, ಯಾವುದೇ ಹಂತದಲ್ಲಿರುವ ಎಲ್ಲ ಮೊಕದ್ದಮೆಗಳ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್ 2015ರ ಆಗಸ್ಟ್‌ನಲ್ಲಿ ಸಿಬಿಐಗೆ ಆದೇಶ ನೀಡಿತ್ತು.ನ್ಯಾಯಾಲಯಗಳಲ್ಲಿ ವಿಚಾರಣಾ ಹಂತಗಳಲ್ಲಿರುವ ಪ್ರಕರಣಗಳ ತನಿಖೆಯನ್ನು ತಾನು ಕೈಗೆತ್ತಿಕೊಂಡರೆ, ರಾಜ್ಯ ಪೊಲೀಸ್‌ನ ವಿಶೇಷ ತನಿಖೆ ತಂಡ (ಎಸ್‌ಐಟಿ) ಹಾಗೂ ವಿಶೇಷ ಕಾರ್ಯ ಪಡೆಗಳು (ಎಸ್‌ಟಿಎಫ್) ತನಗೆ ಸಹಕರಿಸಲಾರವೆಂಬ ಸಿಬಿಐಯ ಸಂದೇಹವನ್ನು ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ನೇತೃತ್ವದ ಪೀಠ ಈ ಆದೇಶದ ಮೂಲಕ ನಿವಾರಿಸಿತ್ತು.

ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಉನ್ನತ ಮಟ್ಟದ ದಲ್ಲಾಳಿಗಳನ್ನೊಳಗೊಂಡ ವ್ಯಾಪಂ ಹಗರಣವು ಮಧ್ಯಪ್ರದೇಶದ ಸರಕಾರಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿ ಹಾಗೂ ಸರಕಾರಿ ಇಲಾಖೆಗಳಲ್ಲಿ ನೇಮಕಾತಿಗಳಲ್ಲಿ ನಡೆದಿರುವ ಭಾರೀ ಅವ್ಯವಹಾರಕ್ಕೆ ಸಂಬಂಧಿಸಿದುದಾಗಿದೆ.ಈ ಮೊದಲು ಪ್ರಕರಣದ ತನಿಖೆ ನಡೆಸಿದ್ದ ಮಧ್ಯಪ್ರದೇಶದ ವಿಶೇಷ ಕಾರ್ಯಪಡೆ, ಸುಮಾರು 55 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದು, ನ್ಯಾಯಾಲಯಕ್ಕೆ 28 ಚಲನ್‌ಗಳನ್ನು ಹಾಜರುಪಡಿಸಿತ್ತು.

Write A Comment