ಅಂತರಾಷ್ಟ್ರೀಯ

ಚಂದ್ರನಲ್ಲಿ ನೆಲೆಸ್ಥಾಪಿಸಲು ಯುರೋಪ್, ರಶ್ಯ ಯೋಜನೆ

Pinterest LinkedIn Tumblr

21

ಮಾಸ್ಕೊ, ಅ.18: ಯಾವುದೇ ಸಂಶೋಧನೆಗೆ ಒಳಪಡದಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮಾನವ ವಾಸಕ್ಕೆ ನೆಲೆಗಳನ್ನು ಸ್ಥಾಪಿಸುವ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು ಯುರೋಪಿಯನ್ ಹಾಗೂ ರಶ್ಯದ ಬಾಹ್ಯಾಕಾಶ ಸಂಸ್ಥೆಗಳು ಚಂದ್ರನಲ್ಲಿಗೆ ವ್ಯೋಮನೌಕೆಗಳನ್ನು ಕಳುಹಿಸಲು ಚಿಂತನೆ ನಡೆಸಿವೆ.

ಮಾನವನನ್ನು ಚಂದ್ರಲೋಕಕ್ಕೆ ಕಳುಹಿಸಿ ಮರಳಿ ಕರೆತರುವ ಹಾಗೂ ಚಂದ್ರನಲ್ಲೇ ಖಾಯಂ ಮಾನವ ನೆಲೆಗಳನ್ನು ಸ್ಥಾಪಿಸುವ ಸಾಧ್ಯತೆಯ ಅಧ್ಯಯನ ನಡೆಸುವ ಸರಣಿ ಯೋಜನೆಗಳ ಭಾಗವಿದಾಗಿದೆ ಎಂದು ಮೂಲಗಳು ತಿಳಿಸಿವೆ.

ಚಂದ್ರನಲ್ಲಿ ನೀರು ಮತ್ತು ಇಂಧನ ಹಾಗೂ ಆಮ್ಲಜನಕ ತಯಾರಿಗೆ ಬೇಕಾದ ಕಚ್ಚಾ ಪದಾರ್ಥಗಳ ಲಭ್ಯತೆಯ ಬಗ್ಗೆ ಬಾಹ್ಯಾಕಾಶ ನೌಕೆಗಳು ಅಧ್ಯಯನ ನಡೆಸಲಿವೆ.

Write A Comment