ಕರಾವಳಿ

ಕುಲಾಲ ಸಂಘ ಮುಂಬಯಿ : ಸಂಭ್ರಮದ ಗಣೇಶೋತ್ಸವ ಆಚರಣೆ

Pinterest LinkedIn Tumblr

kulala sangha mumbai _Oct 9_2015-008

ಕುಲಾಲ ಸಂಘ ಮುಂಬಯಿ ಇದರ ಥಾಣೆ ಪಶ್ಚಿಮದ ಥಾಣೆ -ಘೊಡ್ ಬಂದರ್ ಮಾರ್ಗ ಇಲ್ಲಿ ಖರೀದಿಸಿದ ಸ್ವಂತ ಜಾಗದಲ್ಲಿ ಗಣೇಶೋತ್ಸವ ಆಚರಣೆಯು ಸೆಪ್ಟೆಂಬರ್ 17 ಮತ್ತು 18 ರಂದು ಸಂಘದ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ರವರ ಉಪಸ್ಥಿತಿಯಲ್ಲಿ, ಗಣೇಶೋತ್ಸವ ಸಮಿತಿಯ ಸಂಚಾಲಕ ಮತ್ತು ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಘು ಮೂಲ್ಯ ಪಿ. ಇವರ ಮುಂದಾಳತ್ವ ಮತ್ತು ಉಸ್ತುವಾರಿಯಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.

ಸೆಪ್ಟೆಂಬರ್ 17 ರಂದು ಥಾಣೆಯ ಕೆ. ಎಸ್. ತಂತ್ರಿ ಇವರ ಪೌರೊಹಿತ್ಯದಲ್ಲಿ ಗಣಹೋಮ, ಮೂರ್ತಿ ಪ್ರತಿಷ್ಠೆ , ಸಂಜೆ ಭಜನೆ ಸಂಕೀರ್ತನೆ , ಮಹಾಆರತಿ ರಾತ್ರಿ ಅನ್ನ ಸಂತರ್ಪಣೆ ಮರುದಿನ ಬೆಳಗ್ಗೆ ಮಹಾಆರತಿ ಮತ್ತು ಮಧ್ಯಾಹ್ನ ಮೂರ್ತಿ ವಿಸರ್ಜನಾ ಮೆರವಣಿಗೆ ಬಹಳ ಸಡಗರ ಸಂಭ್ರಮದಿಂದ ಜರಗಿತು.

kulala sangha mumbai _Oct 9_2015-001

kulala sangha mumbai _Oct 9_2015-002

kulala sangha mumbai _Oct 9_2015-003

kulala sangha mumbai _Oct 9_2015-004

kulala sangha mumbai _Oct 9_2015-005

kulala sangha mumbai _Oct 9_2015-006

kulala sangha mumbai _Oct 9_2015-007

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಥಾಣೆ ಮಹಾನಗರ ಪಾಲಿಕೆಯ ಮೇಯರ್ ಶ್ರೀ ಸಂಜಯ್ ಮೋರೆ ಮಾತನಾಡುತ್ತಾ “ಮುಂಬಯಿಯಲ್ಲಿ ಕಳೆದ 86 ವರ್ಷಗಳಿಂದ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಸಮಾಜ ಭಾಂದವರ ಏಳಿಗೆಗಾಗಿ ಶ್ರಮಿಸುತ್ತಿರುವ ಈ ಸಂಘ ನಿಜಕ್ಕೂ ಪ್ರಶಂಸನೀಯ, ಈ ಜಾಗದಲ್ಲಿ ನಿಮ್ಮ ಕುಲಾಲ ಭವನ ಕೆಲಸ ಆದಷ್ಟು ಬೇಗ ಆರಂಭವಾಗಲಿ, ನನ್ನಿಂದ ಯಾವುದೇ ಸಹಾಯ ಬೇಕಾದರೂ ನನ್ನನ್ನು ಸಂಪರ್ಕಿಸಿರಿ , ನಾನು ಸದಾ ನಿಮ್ಮೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಕೈಜೋಡಿಸುವೆ.” ಎಂದು ಭರವಸೆ ಇತ್ತರು..

ಇನ್ನೊಬ್ಬ ಅತಿಥಿ ಮುಂಬಯಿ ಪೋಲಿಸ್ ನ ಹಿರಿಯ ಅಧಿಕಾರಿ ಶ್ರೀ ದೇವೊಕರ್ ಬಿ. ಸೇಲ್ಕೆ ಮಾತನಾಡುತ್ತಾ “ಕುಟ್ಟಿಮೂಲ್ಯರವರು ಮತ್ತು ನಾನು ಒಂದೇ ಬಿಲ್ಡಿಂಗ್ ನಲ್ಲಿ ವಾಸವಾಗಿದ್ದು ಇವರೊಂದಿಗೆ ಅನ್ಯೋನ್ಯ ಸಂಭಂದವಿದೆ. ನಿಮ್ಮ ಕುಲಾಲ ಸಂಘದ ಸಾಮಾಜಿಕ ಕಾರ್ಯಗಳ ಬಗ್ಗೆ ತಿಳಿದು ಹರ್ಷವಾಯಿತು. ತಮ್ಮ ಕೆಲಸದ ಒತ್ತಡದ ನಡುವೆಯೂ ಸ್ವಲ್ಪ ಸಮಯ ಸಮಾಜಕ್ಕಾಗಿ ಮೀಸಲಿಟ್ಟು ತಾವು ಸಮಾಜದ ಅಭಿವೃದ್ದಿಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜ ಭಾಂದವರನ್ನು ಒಗ್ಗೂಡಿಸುವ ಉತ್ತಮ ಕಾರ್ಯ ಮಾಡುತ್ತಿದ್ದಿರಿ. ಈ ಜಾಗದಲ್ಲಿ ಎಲ್ಲಾ ಸಮಾಜದವರಿಗೆ ಉಪಯೋಗವಾಗುವಂತ ಭವ್ಯ ಭವನ ಆದಷ್ಟು ಬೇಗ ನಿರ್ಮಾಣವಾಗಲಿ. ಯಾವುದೇ ಸಹಾಯ ಬೇಕಾದರೂ ಕುಟ್ಟಿಅಣ್ಣನ ಮುಖಾಂತರ ನನಗೆ ತಿಳಿಯಪಡಿಸಿ. ನಿಮ್ಮ ಸಂಘ ಉತ್ತರೋತ್ತರ ಅಭಿವೃದ್ದಿ ಹೊಂದಲಿ ” ಎಂದು ಶುಭಹಾರೈಸಿದರು.

ಎರಡು ದಿನ ನಡೆದ ಕಾರ್ಯಕ್ರಮಗಳಲ್ಲಿ ಮುಂಬಯಿ , ಥಾಣೆ ಜಿಲ್ಲೆ , ನವಿ ಮುಂಬಯಿ , ಪಾಲ್ಘರ್ ಜಿಲ್ಲೆಯ ಅಪಾರ ಸಂಖ್ಯೆಯ ಸಮಾಜ ಬಾಂಧವರು ಉಪಸ್ಥಿತರಿದ್ದು, ಇದರ ಯಶಸ್ಸಿನಲ್ಲಿ ಡಿ ಐ. ಮೂಲ್ಯ, ಉಮೇಶ್ ಬಂಗೇರ , ಕುಟ್ಟಿ ಜಿ., ಜಗದೀಶ್ ಬಂಜನ್, ನಂದಕುಮಾರ್ , ಕುಶ ಮೂಲ್ಯ , ಆನಂದ್ ಬಂಟ್ವಾಳ , ಜಯ ಅಂಚನ್ , ಪಿ. ಶೇಖರ್ ಮೂಲ್ಯ, ಪ್ರಸಾದ್ ಮೂಲ್ಯ, ಸುನಿಲ್ ಕುಲಾಲ್ , ರಘು ಬಿ. ಮೂಲ್ಯ ,ಕರುಣಾಕರ್ ಮೂಲ್ಯ , ಭರತ್ ಕುಲಾಲ್, ಸಂಜೀವ ಬಂಗೇರ, ಶೇಖರ್ ಮೂಲ್ಯ, ದಯಾನಂದ್ ಮೂಲ್ಯ ಅವಿರತವಾಗಿ ಶ್ರಮಿಸಿದರು.

ವರದಿ : ಈಶ್ವರ ಎಂ. ಐಲ್

Write A Comment