ಅಂತರಾಷ್ಟ್ರೀಯ

ದುಬೈಯಲ್ಲಿ ಇಂದು ನಡೆಯಲಿರುವ ವರ್ಣರಂಜಿತ ‘ತುಳು ಪರ್ಬ’ಕ್ಕೆ ಸಿದ್ಧಗೊಂಡ ವೇದಿಕೆ

Pinterest LinkedIn Tumblr

211

ದುಬೈ, ಅ.9: ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಯುಎಇ ತುಳುಕೂಟ ದುಬೈ ಶುಕ್ರವಾರ(ಅ.9ರಂದು) ಮಧ್ಯಾಹ್ನ 3 ಗಂಟೆಗೆ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್‌ರಿಂಕ್‌ನಲ್ಲಿ ಅದ್ದೂರಿಯ ‘ತುಳು ಪರ್ಬ’ವನ್ನು ಆಯೋಜಿಸಿದ್ದು, ವೇದಿಕೆ ಸಿದ್ಧಗೊಂಡಿದೆ.

ತುಳು ಪರ್ಬದಲ್ಲಿ ಹಾಸ್ಯ, ಜಾದೂ, ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ತವರೂರಾದ ಮಂಗಳೂರಿನಿಂದ ಕಲಾವಿದರ ದಂಡು, ಮುಖ್ಯ ಅತಿಥಿ, ಗಣ್ಯರು ಈಗಾಗಲೇ ದುಬೈಗೆ ಆಗಮಿಸಿದ್ದಾರೆ.

ದುಬೈಯಲ್ಲಿ ತುಳು ಭಾಷೆಯ ಪೋಷಣೆಯಲ್ಲಿ ತೊಡಗಿರುವ ತುಳಕೂಟ ಈ ಬಾರಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದು, ತುಳುನಾಡಿನ ಹಾಸ್ಯದಿಗ್ಗಜರು , ವಿಶ್ವವಿಖ್ಯಾತಿಯ ಜಾದೂ ಪ್ರದರ್ಶನ ಸೇರಿದಂತೆ ಹತ್ತಲವು ಬಗೆಯ ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸಿದೆ.

ತುಳುರಂಗಭೂಮಿಯ ಹಾಸ್ಯ ದಿಗ್ಗಜರೆಂದೇ ಖ್ಯಾತರಾಗಿರುವ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಸತೀಶ್ ಬಂದಲೆಯವರಿಂದ ಹಾಸ್ಯಮಯ ಪ್ರಹಸನ, ಹಾಸ್ಯ ಚಟಾಕಿ ಪ್ರದರ್ಶನಗೊಳ್ಳಲಿದೆ. ಜೊತೆಗೆ ವಿಶ್ವವಿಖ್ಯಾತಿಗಳಿಸಿರುವ ಕುದ್ರೋಳಿ ಗಣೇಶ್‌ರಿಂದ ರೋಮಂಚನಗೊಳಿಸುವ ವಿಸ್ಮಯ ಜಾದೂ ಪ್ರದರ್ಶನ ಕೂಡಾ ನಡೆಯಲಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೆಂದ್ರ ಹೆಗ್ಗಡೆಯವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವುದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತರಲಿದೆ. ಗೌರವ ಅತಿಥಿಗಳಾಗಿ ದುಬೈಯ ಖ್ಯಾತ ಉದ್ಯಮಿಗಳಾದ ಡಾ.ಬಿ. ಆರ್. ಶೆಟ್ಟಿ, ರೋನಾಲ್ಡ್ ಕೊಲಾಸೋ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮಾವರ ಪಾಲ್ಗೊಳ್ಳಲಿದ್ದಾರೆ.

ಪ್ರಶಾಂತ್ ದೇವಾಡಿಗ ತಂಡದವರ ಸ್ಯಾಕ್ಸೊಫೋನ್ ವಾದನ, ಜಸ್ಮಿತಾ ವಿವೇಕ್ ತಂಡದ ತುಳುನಾಡ ವೈಭವ ನೃತ್ಯ ರೂಪಕ ತುಳು ಪರ್ಬಕ್ಕೆ ಇನ್ನಷ್ಟು ಮೆರೆಗು ತರಲಿದೆ. ದಯಾನಂದ್ ಕತ್ತಲ್ಸರ್‌ರವರು ನಿರೂಪಣೆ ಮಾಡಲಿದ್ದು, ವಿವಿಧ ಬಗೆಯ ಸ್ಪರ್ಧೆಗಳು ಕೂಡಾ ನಡೆಯಲಿದೆ.

Write A Comment