ಕರಾವಳಿ

ಕೋಟ ಪಡುಕೆರೆಯಲ್ಲಿ ತಿಮಿಂಗಿಲದ ಕಳೇಬರಹ ಪತ್ತೆ

Pinterest LinkedIn Tumblr

IMG-20150708-WA0005

ಕುಂದಾಪುರ: ಕೋಟತಟ್ಟು ಪಡುಕರೆಯ ಶಿರಸಿ ಮಾರಿಕಾಂಬ ದೇವಸ್ಥಾನ ಸಮೀಪ ಕಡಲ ತೀರದಲ್ಲಿ ಭಾರಿ ಗಾತ್ರದ ತಿಮಿಂಗಿಲ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೋಟ ಸಮೀಪದಲ್ಲಿ ಈ ಬೃಹತ್ ಗಾತ್ರದ ತಿಮಿಂಗಿಲ ದಡದಲ್ಲಿ ಸಿಕ್ಕಿದ್ದು ಬುಧವಾರ ಬೆಳಿಗ್ಗೆ ನಿವಾಸಿಯೊಬ್ಬರು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ತಿಮಿಂಗಿಲದ ಕಳೇಬರವನ್ನು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಎಲ್ಲಿಂದಲೋ ಕೊಚ್ಚಿ ಬಂದ ಈ ತಿಮಿಂಗಿಲ ಸುಮಾರು 40 ಅಡಿ ಉದ್ದವಿದ್ದು ಕೊಳೆತ ಸ್ಥಿತಿಯಲ್ಲಿ ದಡಕ್ಕಪಳಿಸಿದೆ.

???????????????????????????????

???????????????????????????????

ಕೊಳೆತ ದುರ್ವಾಸನೆ ಬೀರುತ್ತಿದ್ದ ಈ ತಿಮಿಂಗಿಲ ಒಂದೆರಡು ದಿನಗಳ ಹಿಂದೆಯೇ ಸತ್ತಿರಬಹುದೆಂದು ಅಂದಾಜಿಸಲಾಗಿದ್ದು ಸ್ಥಳೀಯ ಪರಿಸರದಲ್ಲಿ ದುರ್ನಾತ ಬೀರಿತ್ತು. ಕೂಡಲೇ ಜನರ ಸಮಸ್ಯೆಗೆ ಸ್ಪಂಧಿಸಿದ ಸ್ಥಳೀಯ ಕೋಟತಟ್ಟು ಗ್ರಾಮಪಂಚಾಯತ್ ಜೆ.ಸಿ.ಬಿ. ತರಿಸಿ ತಿಮಿಂಗಿಲದ ವಿಲೇವಾರಿ ಕಾರ್ಯಕ್ಕೆ ಕೈಹಾಕಿದೆ. ಕೆಲವೇ ಹೊತತಿನಲ್ಲಿ ತಿನಿಂಗಿಲದ ಕಳೇಬರವನ್ನು ಸಮುದ್ರದ ಸನಿಹ ಮಣ್ಣಲ್ಲಿ ಲೀನಗೊಳಿಸಲಾಯಿತು.

Write A Comment