ಕರಾವಳಿ

ಸಮುದಾಯದ ಸಬಲೀಕರಣಕ್ಕಾಗಿ ಒಂದಾಗೋಣ: ಶಾಫೀ ಬೆಳ್ಳಾರೆ

Pinterest LinkedIn Tumblr

IMG_6240

ಪ್ರಸಕ್ತವಾಗಿ ಮುಸ್ಲಿಂ ಸಮುದಾಯವು ಇಂಡಿಯಾದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು , ಇಂತಹ ಸಮುದಾಯವನ್ನು ಆರ್ಥಿಕವಾಗಿ , ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಬಲೀಕರಣಗೊಳಿಸಲು ಸಮುದಾಯದ ಸಂಘಟನೆಗಳು ಒಂದಾಗಿ ಪ್ರಯತ್ನಿಸಬೇಕಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜನಾಬ್! ಶಾಫೀ ಬೆಳ್ಳಾರೆ ಹೇಳಿದರು.

ಅವರು 12/06/2015 ರಂದು ರಾತ್ರಿ ರಿಯಾದಿನ , ಬತ್ತ ಕ್ಲಾಸ್ಸಿಕ್ ಆಡಿಟೋರಿಯಂನಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ , ರಿಯಾದ್ ಕರ್ನಾಟಕ ಘಟಕವು ತಮಗಾಗಿ ಆಯೋಜಿಸಿದ್ದ ಸ್ವೀಕರಣಾ ಸಮಾರಂಭ ಹಾಗೂ ಐಕ್ಯತೆ ಕಾಲದ ಬೇಡಿಕೆ ಎಂಬ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿ ಮಾತನಾಡುತ್ತಿದ್ದರು.

IMG_6249

IMG_6228

ಐಎಫ್ಎಫ್ ರಿಯಾದ್ ಕರ್ನಾಟಕ ಘಟಕದ ಕಾರ್ಯದರ್ಶಿ ಜನಾಬ್ ಇಸ್ಮಾಯಿಲ್ ಇನೋಳಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು, ಐಎಫ್ಎಫ್ ರಿಯಾದ್ ಕೇರಳ ಘಟಕದ ಅಧ್ಯಕ್ಷರಾದ ಜನಾಬ್! ಅಶ್ರಫ್ ಮೇಳಟ್ಟೂರುರವರು ಉದ್ಘಾಟಿಸಿದರು. ತಮ್ಮ ಭಾಷಣದುದ್ದಕ್ಕೂ ಮುಸ್ಲಿಂ ಸಮುದಾಯದ ಅರ್ಥಿಕ ಹಾಗೂ ಶೈಕ್ಷಣಿಕ ಹಿಂದುಳಿಯುವಿಕೆ ಬಗೆಗೆ, ಅದರ ಕಾರಣಗಳು ಹಾಗೂ ಪರಿಹಾರಗಳ ಬಗೆಗೆ ಅತ್ಯಂತ ಸ್ಪಷ್ಟ ಮಾತುಗಳಿಂದ ವಿವರಿಸಿದ ಶಾಫೀ ಬೆಳ್ಳಾರೆ , ಮುಸ್ಲಿಂ ಸಮುದಾಯದ ಸಂಘಟನೆಗಳು ತಮ್ಮ ಸಂಕುಚಿತ ಭಾವನೆಯನ್ನು ಬಿಟ್ಟು ಒಂದಾಗಿ ನಿಲ್ಲಬೇಕಾದದ್ದು ಕಾಲದ ಬೇಡಿಕೆಯಾಗಿದೆ ಎಂದು ಅವರು ಕರೆಕೊಟ್ಟರು. ನಮ್ಮ ದೇಶದಲ್ಲಿ ವಿವಿದ ಧರ್ಮಗಳ ಜನರ ನಡುವೆ ಕೋಮು ಭಾವನೆಯನ್ನು ಬಿತ್ತುವ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದು , ಇದು ದೇಶದ ಅಭಿವೃದ್ದಿಗೆ ಮಾರಕವಾಗಿ ಪರಿಣಮಿಸಿದೆ, ಅದರ ಜೊತೆಗೆ ಲವ್ ಜಿಹಾದ್, ಮದ್ರಸ ಭಯೋತ್ಪಾದನೆ , ಭಗವದ್ಗೀತೆ ಕಡ್ದಾಯಗೊಳಿಸುವಿಕೆ ಮುಂತಾದ ಗುಪ್ತ ಅಜೆಂಡಾವನ್ನು ಸಮುದಾಯದ ವಿರುದ್ಧ ಹರಿಯಬಿಡಲಾಗುತ್ತಿದೆ. ಭಯೋತ್ಪಾದನೆಯ ಸುಳ್ಳು ಕೇಸ್ ಗಳಲ್ಲಿ ಹಲವಾರು ಮುಸ್ಲಿಂ ವಿಧ್ಯಾವಂತ ಯುವಕರನ್ನು ಜೈಲಿಗಟ್ಟಲಾಗುತ್ತಿದ್ದು , ಅವರನ್ನು ಕುಟುಂಬ ಹಾಗೂ ಸಾಮಾಜದಲ್ಲಿ ಅಶ್ಪ್ರಶ್ಯರಂತೆ ಕಾಣುವ ಪರಿಸ್ತಿತಿ ಉಂಟಾಗುತ್ತಿದೆ. ಆದರೆ ಅಂತಹ ಯುವಕರಿಗೆ ಸಂವಿದಾನ ಬದ್ದವಾದ ನ್ಯಾಯ ಒದಗಿಸಿಕೊಡಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜನಾಬ್! ಶಾಫೀ ಬೆಳ್ಳಾರೆಯವರನ್ನು ಐಎಫ್ಎಫ್ ರಿಯಾದ್ ಕರ್ನಾಟಕ ಘಟಕದ ವತಿಯಿಂದ ಕಿರುಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ಅತಿಥಿಗಳಾಗಿ ವೇದಿಕೆಯಲ್ಲಿ ಇಂಡಿಯನ್ ಸೋಶಿಯಲ್ ಫಾರಂ , ರಿಯಾದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಜನಾಬ್! ಸಮೀರ್ ಏರ್ಮಾಲ್ ಉಪಸ್ತಿತರಿದ್ದರು. ಮಹಮ್ಮದ್ ಅಲೀ ವಿಟ್ಲರವರ ಕಿರಾಅತ್ ಪಾರಯಣದೊಂದಿಗೆ ಕಾಯಕ್ರಮ ಆರಂಭಗೊಂಡಿದ್ದು, ರವೂಫ್ ಕಲಾಯಿ ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದಗೈದರು. ಶರೀಫ್ ಕಬಕ ಕಾರ್ಯಕ್ರಮವನ್ನು ನಿರೂಪಿಸಿದರು.

Write A Comment