ಕರಾವಳಿ

‘ಮೊಗವೀರ್ಸ್ ಬಹ್ರೈನ್’ನಿಂದ ಸ್ವಸಮುದಾಯದ ವಿದ್ಯಾರ್ಥಿಗಳಿಗೆ ‘ಶೈಕ್ಷಣಿಕ ಪ್ರತಿಭಾ ಪುರಸ್ಕಾರ’

Pinterest LinkedIn Tumblr

medol

ಮನಾಮ, ಬಹ್ರೈನ್: ಮೊಗವೀರ್ಸ್ ಬಹ್ರೈನ್ ಸಂಸ್ಥೆಯು ತನ್ನ ಪ್ರಸಕ್ತ ವರ್ಷದ ‘ಶೈಕ್ಷಣಿಕ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮಕ್ಕಾಗಿ ಗತ ಮಾರ್ಚ್-2015ರಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಇಲಾಖೆಯು ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಯನ್ನು ಗೈದ ಸ್ವಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಿದೆ.

ಅರ್ಜಿ ಸಲ್ಲಿಕೆಗೆ ಯಾವುದೇ ಮಾಧ್ಯಮದ ನಿರ್ಬಂಧವಿಲ್ಲವಾಗಿದ್ದು, ಅಗ್ರ ಅಂಕಗಳನ್ನು ಗಳಿಸಿ ಶ್ರೇಷ್ಠ ದರ್ಜೆಯೊಂದಿಗೆ ಉತ್ತೀರ್ಣರಾದ ಮೊಗವೀರ ಸಮುದಾಯದ ಅತ್ಯಂತ ಪ್ರತಿಭಾಪೂರ್ಣ ವಿದ್ಯಾರ್ಥಿಗಳು ಸರಕಾರದ ಸಕ್ಷಮ ಅಧಿಕಾರಿಯಿಂದ ಯಾ ಸ್ವಸಮುದಾಯದ ಯಾವುದೇ ಸ್ಥಳೀಯ ಅಧಿಕೃತ ಸಂಘಟನೆಯಿಂದ ದೃಢೀಕರಿಸಿದ ತಮ್ಮ ಅಂಕಪಟ್ಟಿಯ ನಕಲನ್ನು ಕಿರು ಭಾವಚಿತ್ರ ಮತ್ತು ಹೆಸರು, ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ನಮೂದಿಸಲಾದ ಒಂದು ಪ್ರತ್ಯೇಕ ಅರ್ಜಿ ಪತ್ರದೊಂದಿಗೆ ಈ ಕೆಳಗಿನ ವಿಳಾಸಕ್ಕೆ ದಿ. 30.07.2015ರೊಳಗಾಗಿ ತಲುಪುವಂತೆ ಒಂದು ಸಾಮಾನ್ಯ ಅಂಚೆಯ ಮೂಲಕ ಕಳುಹಿಸಿ ಕೊಡಬೇಕಾಗುವುದು.

LEELADHAR BAIKAMPADY
MOGAVEERS BAHRAIN
P.O. BOX – 30848, BUDAIYA
KINGDOM OF BAHRAIN.

ಸ್ವೀಕರಿಸಲಾದ ಒಟ್ಟು ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ ಗರಿಷ್ಠ ಅಂಕ ಗಳಿಸಿರುವ ಮೊದಲ ಮೂವರು ಯಶಸ್ವಿ ವಿದ್ಯಾರ್ಥಿಗಳನ್ನು ಸಂಸ್ಥೆಯು ತನ್ನ ಪ್ರಥಮ, ದ್ವಿತೀಯ ಮತ್ತು ತೃತೀಯ ಪ್ರಶಸ್ತಿಗಳಿಗೆ ಆಯ್ಕೆಗೊಳಿಸಿ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಪ್ರಶಸ್ತಿ ಶಾಲು ಸಹಿತವಾಗಿ ಕ್ರಮವಾಗಿ ರೂ.10,000, ರೂ.7,000 ಮತ್ತು ರೂ.5,000 ದ ನಗದು ಬಹುಮಾನವನ್ನೂ ನೀಡಿ ಗೌರವಿಸಲಿದೆ. ಅಂತೆಯೇ ಆಯ್ದ ಕೆಲವು ಪಠ್ಯಗಳಲ್ಲಿ ಶ್ರೇಷ್ಠ ಸಾಧನೆ ಗೈಯುವವರಿಗೂ ಹಾಗೂ ವಿಶೇಷ ಅರ್ಹತೆಯ ಆಧಾರದ ಮೇಲೆ ಆಯ್ಕೆಗೊಳ್ಳುವ ಇನ್ನು ಕೆಲವರಿಗೂ ಸಂಸ್ಥೆಯು ತನ್ನ ಪ್ರೋತ್ಸಾಹಕ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಿದೆ.

ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ mogaveersbahrain@yahoo.com ಈ ಈಮೇಲ್ ಮೂಲಕ ವಿಚಾರಿಸಬಹುದಾಗಿದೆ ಇಲ್ಲವೇ ರಾಜೇಶ್ ಮೆಂಡನ್ [+973-36152999] ಯಾ ಸುರೇಶ್ ಅಮೀನ್ [+973-39206045] ಇವರನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ.

Write A Comment