ಕರಾವಳಿ

ಮಂಗಳೂರಿನ ಕುವರಿಯಾಗಿರುವ ಪೂಜಾ ಹೆಗ್ಡೆಗೆ ಮನಸೋತನೇ ಹೃತಿಕ್‌ ರೋಶನ್‌?

Pinterest LinkedIn Tumblr

pooja-hrithik

ಮುಂಬಯಿ: ಬಾಲಿವುಡ್‌ನ ಸುಂದರಾಂಗ ಹೃತಿಕ್‌ ರೋಶನ್‌ ಮತ್ತೆ ಪ್ರೀತಿಗೆ ಬಿದ್ದಿದ್ದಾನಾ? ಮೊಹಂಜೋದಾರೋ ಚಿತ್ರದ ನಾಯಕಿ ಪೂಜಾ ಹೆಗ್ಡೆ ಜತೆಗೆ ಆತನ ಪ್ರೇಮಾಯಣ ಶುರುವಾಗಿದೆಯಾ?

ಇಂಥದ್ದೊಂದು ಗುಸುಗುಸು ಬಾಲಿವುಡ್‌ ಅಂಗಣದಲ್ಲಿ ಕೇಳಿಬರುತ್ತಿದೆ. ಪತ್ನಿ ಸೂಸಾನ್‌ಳಿಂದ ವಿಚ್ಛೇದನ ಪಡೆದು ಸದ್ಯ ಒಬ್ಬಂಟಿಯಾಗಿರುವ ಹೃತಿಕ್‌, ಮಂಗಳೂರಿನ ಕುವರಿಯಾಗಿರುವ ಕನ್ನಡತಿ ಪೂಜಾ ಹೆಗ್ಡೆಗೆ ಮನಸ್ಸು ಕೊಟ್ಟಿದ್ದಾನೆ ಎನ್ನುವ ಪುಕಾರು ಕೇಳಿ ಬರಲು ಕಾರಣ ಅವರಿಬ್ಬರ ನಡುವಿನ ತೆರೆಯ ಮೇಲಿನ ಕೆಮಿಸ್ಟ್ರಿ.

ನಿರ್ದೇಶಕ, ನಿರ್ಮಾಪಕ ಅಶುತೋಶ್‌ ಗೋವರಿಕರ್‌ ನಿರ್ಮಿಸುತ್ತಿರುವ ಸಾಹಸಭರಿತ-ಪ್ರಣಯಭರಿತ ಚಿತ್ರವಾಗಿರುವ ಮೊಹಂಜೋದಾರೋ ಇದೀಗ ಸಖತ್‌ ಸುದ್ದಿ ಮಾಡುತ್ತಿದೆ.

ಹೃತಿಕ್‌, ಪೂಜಾ ನಡುವಿನ ಅಭಿನಯದ ಭಾಗಗಳನ್ನು ಭುಜ್‌ನಲ್ಲಿ ಮುಗಿಸಿ ಚಿತ್ರತಂಡ ವಾಪಸ್‌ ಮುಂಬಯಿಗೆ ಮರಳಿದೆ. ಅಲ್ಲಿ ಚಿತ್ರೀಕರಣ ಮುಗಿಸಿದ ಬಳಿಕ ಇಲ್ಲಿ ಶೂಟಿಂಗ್‌ ಮುಂದುವರಿಸಿರುವ ತಂಡದಲ್ಲಿ ಈಗ ಇವರಿಬ್ಬರ ಪ್ರೇಮ ಪ್ರಕರಣದ್ದೇ ಸುದ್ದಿ. ನಿಜವೋ ಸುಳ್ಳೋ.ಚಿತ್ರಕ್ಕಂತೂ ಪುಕ್ಕಟೆ ಪ್ರಚಾರ ಸಿಗುತ್ತಿದೆ.

ಇನ್ನೊಂದೆಡೆ ಈ ಸುದ್ದಿ ನಂಬುವವರು ಬೆಂಕಿ ಇಲ್ಲದೆ ಹೊಗೆ ಏಳಲಿಕ್ಕಿಲ್ಲ ಎಂದು ತಲೆಕೆರೆದುಕೊಳ್ಳುತ್ತಿದ್ದಾರೆ. ಇಬ್ಬರ ಜೋಡಿ ಮಾತ್ರ ಸೂಪರ್‌ ಆಗಿದೆ ಎನ್ನುತ್ತಾರೆ ಚಿತ್ರತಂಡದಲ್ಲಿರುವವರು.

Write A Comment