ಮುಂಬಯಿ : ಕಲ್ಬಾದೇವಿಯಲ್ಲಿ ದುರಸ್ತಿ ಹಂತದಲ್ಲಿದ್ದ ನಾಲ್ಕು ಮಹಡಿಯ ಹಳೆಯ ಕಟ್ಟಡಕ್ಕೆ ಮೆ. 9 ರಂದು ಬೆಂಕಿ ತಗಲಿ ಬೆಂಕಿಯನ್ನು ಹತೋಟಿಗೆ ತರಲು ಮತ್ತು ಕಟ್ಟಡದಲ್ಲಿದ್ದವರನ್ನು ರಕ್ಷಿಸಲು ಅಗ್ನಿಶಾಮಕ ದಳದ ನೇತೃತ್ವವನ್ನು ಕನ್ನಡಿಗ, ಅಗ್ನಿ ಶಾಮಕ ದಳದ ಡೆಪ್ಯೂಟಿ ಚೀಪ್ ಫಯರ್ ಅಧಿಕಾರಿ ಸುಧೀರ್ ಜಿ. ಅಮೀನ್ (50) ಅವರು ವಹಿಸಿದ್ದು ಶೇಕಡಾ 90ರಷ್ಟು ಸುಟ್ಟ ಗಾಯಗೊಂಡು ಐರೋಲಿಯ ನ್ಯಾಶನಲ್ ಆಸ್ಪತ್ರೆಯಲ್ಲಿ ಕಳೆದ ಆರು ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿ ಇಂದು ಸಂಜೆ ಇಹಲೋಕವನ್ನು ತ್ಯಜಿಸಿದರು.
ಕಾರ್ಕಳದ ನಿಟ್ಟೆ ದಡ್ಡೋಡಿಯವರಾದ ಸುಧೀರ್ ಅಮೀನ್ ಅವರು ಪತ್ನಿ, ಇಬ್ಬರು ಮಕ್ಕಳು, ಇಬ್ಬರು ತಂಗಿಯಂದಿರು, ತಮ್ಮಂದಿರು, ಆಪ್ತ ಮಿತ್ರರಾದ ಉದ್ಯಮಿ ಕುಮಾರ ಬಂಗೇರ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ರಾತ್ರಿ ಹತ್ತು ಗಂಟೆಗೆ ಸರಕಾರಿ ಗೌರವದೊಂದಿಗೆ ನಡೆಯಿತು.








