ಕರಾವಳಿ

ಯುರೋಪಿಯನ್ ಕಾಂಟಿನೆಂಟಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಸನದು ಪ್ರಾಪ್ತಿಸಿಕೊಂಡ ಶಿವರಾಮ ಕೆ.ಭಂಡಾರಿ

Pinterest LinkedIn Tumblr

Dr.Shivarama_Bhandary_1

ವರದಿ ಕೃಪೆ : ಆರೀಫ್ ಕಲ್ಲಟ್ಟ

ಮುಂಬಯಿ, ಮೇ.12: ಕಳೆದ ಭಾನುವಾರ ಥೈಲ್ಯಾಂಡ್ ರಾಷ್ಟ್ರದ ಬ್ಯಾಂಗ್‌ಕಾಕ್ ಅಲ್ಲಿನ ಹೋಲಿಡೇ ಇನ್ನ್ ಹೊಟೇಲು ಸಭಾಗೃದಲ್ಲಿ ಏಷಿಯಾ ಚಾಪ್ಟರ್-2015ರ ಜಾಗತಿಕ ಸಾಧಕ ಉದ್ಯಮಶೀಲರ ಘಟಿಕೋತ್ಸವದಲ್ಲಿ ಯುರೋಪಿಯನ್ ಕಾಂಟಿನೆಂಟಲ್ ಯುನಿವರ್ಸಿಟಿಯ ಕಾರ್ಯನಿರ್ವಹಕಾ ಪ್ರಧಾನ ರಾಜ್ಯಪಾಲ ಪ್ರೊ| ಡಾ| ರಾಲ್ಫ್ ಥೋಮಸ್, ಯುಸಿಯು ಬದಲಿ ಉಪಕುಲಪತಿ ಡಾ| ಜೋಪ್ಪ್ರೆಯ್ ಕ್ಲರ್ಕ್ ಮತ್ತು ವಿಶ್ವವಿದ್ಯಾನಿಲಯದ ಪ್ರತಿನಿಧಿ ಕು| ಜುಡಿತ್ ಕೌಲ್‌ಸನ್ ಉಪಸ್ಥಿತರಿದ್ದು, ಮುಂಬಯಿಯಲ್ಲಿ ಹೇರ್ ಸ್ಟೈಲೋ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಕೊಂಡಿರುವ ನಾಡಿನ ಹೆಸರಾಂತ ಕೇಶ ವಿನ್ಯಾಸ ಸಂಸ್ಥೆ ಶಿವಾ’ಸ್ ಹೇರ್ ಡಿಝೈನರ್‍ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಅತ್ತೂರು ಶಿವರಾಮ್ ಕೆ.ಭಂಡಾರಿ ಅವರಿಗೆ ಡಾಕ್ಟರೇಟ್ ಸನದು ಪ್ರದಾನಿಸಿ ಗೌರವಿಸಿದರು.

ದಕ್ಷಿಣ ಭಾರತೀಯ ಸಿಟಿವಿ ಕಮ್ಯೂನಿಕೇಶನ್ ಆಫ್ ತಮಿಳುನಾಡು ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಅಮೇರಿಕಾ (ಯು‌ಎಸ್‌ಎ) ಡೆಲವಾರೆ ಅಲ್ಲಿನ ನಾಲೆಜ್ ಯುನಿವರ್ಸಿಟಿ ಸಂಘಟಿತ ಯುರೋಪಿಯನ್ ಕಾಂಟಿನೆಂಟಲ್ ಯುನಿವರ್ಸಿಟಿ (ಯುಸಿಯು) ಸಂಸ್ಥೆಯು ಯುನೈಟೆಡ್ ಕೊರಿಯಾ (ಯುಕೆ) ಕಮಿಶನ್ ಆಫ್ ಕಾನ್ಸಿಸ್ಟೆಂಟ್ ಸಹಯೋಗದೊಂದಿ ಗೆ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಸಾಧಕ ಒಡನಾಟದದೊಂದಿಗೆ ಉದ್ಯಮ ವೃದ್ಧಿಕೆಯ ಸಾಧನಾಶೀಲ ಆಡಳಿತಗಾರ (ಕಾನ್ಸಾರ್ಶಿಯಂ ಆಂಟರ್‌ಪ್ರಿನರಿಯಲ್ ಆಡ್‌ಮಿನಿಸ್ಟ್ರೇಟರ್‍ಸ್ ಫಾರ್ ಪ್ರೊಫೆಶನಲ್ ಡೆವಲಪ್‌ಮೆಂಟ್) ಪದವೀದಾನ ಸಮಾರಂಭದಲ್ಲಿ ಶಿವರಾಮ್ ಭಂಡಾರಿ ಅವರಿಗೆ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಲಾಯಿತು.

Dr_Shivarama_Bhandary_2 Dr_Shivarama_Bhandary_3 Dr_Shivarama_Bhandary_4 Dr_Shivarama_Bhandary_5 Dr_Shivarama_Bhandary_6 Dr_Shivarama_Bhandary_7 Dr_Shivarama_Bhandary_8 Dr_Shivarama_Bhandary_9 Dr_Shivarama_Bhandary_10 Dr_Shivarama_Bhandary_11

ಬಾಲ್ಯದಲೇ ತನ್ನ ಜನಕನನ್ನು ಕಳೆದುಕೊಂಡು ಮಮತೆಯ ತಾಯಿ ಶ್ರೀಮತಿ ಗುಲಾಬಿ ಭಂಡಾರಿ ಅವರ ಆಸರೆಯಲ್ಲಿ ಬೆಳೆದು ಮುಂಬಯಿ ಸೇರಿ ಸಲೂನ್‌ನಲ್ಲಿ ಕೆಲಸ ನಿರ್ವಹಿಸುತ್ತಾ ತನ್ನ ಸಾಧನೆಯಿಂದ ಇಂದು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಧರೆಗುಡ್ಡೆ ನಿವಾಸಿ ಶಿವರಾಮ ಭಂಡಾರಿ ಅವರು 1998ರ ಸಾಲಿನ ಸೆಲೂನ್ ಇಂಟರ್‌ನ್ಯಾಶನಲ್ ಪುರಸ್ಕಾರದಲ್ಲಿ ವಿಶ್ವದ ಖ್ಯಾತ ೪೮ ಪ್ರತಿಷ್ಠಿತ ಕೇಶ ವಿನ್ಯಾಸಗಾರರಲ್ಲಿ ಭಾರತೀಯರಾಗಿ ಶಿವಾಸ್ ಪುರಸ್ಕೃತರಾಗಿದ್ದರು.

ಹೇರ್ ಕಟ್ಟಿಂಗ್ ಸಲೂನ್‌ಗೆ ಹೊಸ ಆಯಾಮ ನೀಡಿ ತನ್ನ ಉದ್ಯಮವನ್ನು ಪ್ರೈವೇಟ್ ಲಿಮಿಟೆಡ್ ಆಗಿಸಿ ಶಿವಾಸ್ ಹೇರ್ ಸ್ಟೈಲೋ ಡಿಸೈನರ್ ಮುಖೇನ ಥಾಣೆ, ಜುಹೂ, ಮುಲುಂಡ್, ಅಂಧೇರಿ ಲೊಖಂಡ್‌ವಾಲ, ಅಂಧೇರಿ ಪಶ್ಚಿಮ, ಮಲಾಡ್ ಮತ್ತು ಮೂಡಬಿದ್ರೆ ನಗರದಲ್ಲೂ ವೃತ್ತಿ ನಿರತವಾಗಿದ್ದು, ಅತ್ಯಾಧುನಿಕ, ಸುಸಜ್ಜಿತ ಮಳಿಗೆಯಾಗಿ ಕಾರ್ಯಚರಿಸುತ್ತಾ ವ್ಯಕ್ತಿತ್ವದಲ್ಲಿ ಬಾಲಿವುಡ್ ವ್ಯಕ್ತಿಯಂತೆಯೇ ಪ್ರಜ್ವಲಿಸುತ್ತಾ ಸದಾ ತೆರೆಯ ಮರೆಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಶಿವರಾಮ ಅವರು ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ತುಳುನಾಡ ಹಳ್ಳಿ ಹುಡುಗನೋರ್ವ ಭಂಡಾರಿ ಸಮುದಾಯದಲ್ಲಿ ಹುಟ್ಟಿ ಬೆಳೆದು ಅಖಂಡ ಭಂಡಾರಿ ಸಮಾಜಕ್ಕೆ ಕೀರ್ತಿಯನ್ನೊದಗಿಸಿದ ನಾದ ಶಿವರಾಮ ಭಂಡಾರಿ ಅವರ ಸಾಧನೆ ಸರ್ವರಿಗೂ ಮಾದರಿ ಆಗಿದೆ ಎಂದು ಭಂಡಾರಿ ಮಹಾ ಮಂಡಲದ ನಿಕಟಪೂರ್ವ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ ತಿಳಿಸಿ ಹರ್ಷವ್ಯಕ್ತ ಪಡಿಸಿದ್ದಾರೆ.

ಬಾಲಿವುಡ್ ರಂಗದ ಸೆಲೆಬ್ರೆಟಿಗಳಾದ ಚಲನಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್, ಬಾಲಿವುಡ್ ಚಿತ್ರನಟರಾದ ಅನುಪಮ್ ಖೇರ್, ನೀಲ್ ರತನ್ ಮುಕೇಶ್, ಅಂಜನ್ ಶ್ರೀವಾಸ್ತವ್, ನಟಿ ಮುಗ್ದ ಗೋಡ್ಸೆ, ಪ್ರಸಿದ್ಧ ವಿನ್ಯಾಸಕರಾದ ಸುನೀಲ್ ಲುಲ್ಲಾ ಮತ್ತು ಕೃಶಿಕಾ ಲುಲ್ಲಾ, ಭಂಡಾರಿ ಸೇವಾ ಸಮಿತಿ (ರಿ.) ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ, ಉಪಾಧ್ಯಕ್ಷರುಗಳಾದ ನ್ಯಾ| ಆರ್.ಎಂ ಭಂಡಾರಿ ಮತ್ತು ಸದಾನಂದ ಕುಮಾರ್ ಭಂಡಾರಿ, ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ, ಗೌ| ಕೋಶಾಧಿಕಾರಿ ರಮೇಶ್ ವಿ.ಭಂಡಾರಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಭಂಡಾರಿ ಪುಣೆ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಭಂಡಾರಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ನ್ಯಾ| ಸುಂದರ್ ಜಿ.ಭಂಡಾರಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಲಲಿತಾ ವಿ.ಭಂಡಾರಿ, ಪ್ರತಿಷ್ಠಿತ ಉದ್ಯಮಿಗಳಾದ ಗುಣಪಾಲ್ ಶೆಟ್ಟಿ ಐಕಳ, ಮಹೇಶ್ ಟ್ಯೂಟೋರಿಯಲ್ಸ್‌ನ ಮಹೇಶ್ ಶೆಟ್ಟಿ, ಸವಿತಾ ಮಾರ್ಗದರ್ಶಿ ಪತ್ರಿಕೆಯ ಪ್ರಕಾಶಕ ಸೊಮಶೇಖರ ಎಂ. ಭಂಡಾರಿ ಬೆಂಗಳೂರು, ಅನುಶ್ರೀ ಭಂಡಾರಿ ಮತ್ತು ಮಾ| ರೋಹಿಲ್ ಭಂಡಾರಿ ಹಾಗೂ ಬೇಬಿ ಆರಾಧ್ಯ ಭಂಡಾರಿ ಸೇರಿದಂತೆ ನೂರಾರು ಗಣ್ಯರು ಡಾಕ್ಟರೇಟ್ ಗೌರವಕ್ಕೆ ಪಾತ್ರರಾದ ಶಿವರಾಮ ಭಂಡಾರಿ ಅವರಿಗೆ ಅಭಿನಂದಿಸಿದ್ದಾರೆ.

ಕಳೆದ ವರ್ಷವಷ್ಟೇ ಶಿವಾ’ಸ್ ಹೇರ್ ಡಿಝೈನರ್‍ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಭವ್ಯ ಸಮಾರಂಭದಲ್ಲಿ ರಜತೋತ್ಸವ ಸಂಭ್ರಮಿಸಿತ್ತು.

ಹಳ್ಳಿಯುವಕ ಅತ್ತೂರು ಶಿವರಾಮ ಕೆ.ಭಂಡಾರಿ ಅವರಿಗೆ ಯುರೋಪಿಯನ್ ವಿವಿಯಿಂದ ಪ್ರೊಫೆಷನಲ್ ಎಂಟರ್‌ಪ್ರಿನರ್‌ಶಿಪ್‌ನಲ್ಲಿ ಡಾಕ್ಟರೇಟ್ 

 

Shivaram_Rons_Pics_1

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.12: ಕಳೆದ ಭಾನುವಾರ ಥೈಲ್ಯಾಂಡ್ ರಾಷ್ಟ್ರದ ಬ್ಯಾಂಕಾಕ್ ಅಲ್ಲಿನ ಹೋಲಿಡೇ ಇನ್ನ್ ಹೊಟೇಲು ಸಭಾಗೃದಲ್ಲಿ ಏಷಿಯಾ ಚಾಪ್ಟರ್-೨೦೧೫ರ ಜಾಗತಿಕ ಸಾಧಕ ಉದ್ಯಮಶೀಲರ ಘಟಿಕೋತ್ಸವದಲ್ಲಿ ಮುಂಬಯಿಯಲ್ಲಿ ಹೇರ್ ಸ್ಟೈಲೋ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಕೊಂಡಿರುವ ನಾಡಿನ ಹೆಸರಾಂತ ಕೇಶ ವಿನ್ಯಾಸ ಸಂಸ್ಥೆ ಶಿವಾ’ಸ್ ಹೇರ್ ಡಿಝೈನರ್‍ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಅತ್ತೂರು ಶಿವರಾಮ್ ಕೆ.ಭಂಡಾರಿ ಅವರಿಗೆ ಡಾಕ್ಟರೇಟ್ ಸನದು ಪ್ರದಾನಿಸಿ ಗೌರವಿಸಿದರು.

ಅಂತರಾಷ್ಟ್ರೀಯ ಅಧ್ಯಯನ ವಿಶ್ವವಿದ್ಯಾನಿಲಯದಲ್ಲಿ ಅಫರ್ಮೇಷನ್ ಆಫ್ ಪ್ರೀರಿಯರ್ ಎಕ್ಸ್‌ಫೀರಿಯೆನ್ಸ್ ಎಂಡ್ ಲರ್ನಿಂಗ್ ಎಂಬ ನಿರ್ಧಿಷ್ಟ ಯೋಜನೆಯಡಿಯಲ್ಲಿ ರಿಟೈಲ್ ಮೇನೇಜ್‌ಮೆಂಟ್‌ನಲ್ಲಿ ನಿಮ್ಮ ಡಾಕ್ಟರ್ ಆಫ್ ಪ್ರೊಫೆಷನಲ್ ಎಂಟರ್‌ಪ್ರಿನರ್‌ಶಿಪ್ (ಡಿಪಿ‌ಇ) ಎಂಬ ಯಶಸ್ವಿ ಸಾಧನೆಯ ಗೌರವವನ್ನು ಈ ಮೂಲಕ ಧೃಢೀಕರಿಸಿ ಯುರೋಪಿಯ ನ್ ಕಾಂಟಿನೆಂಟಲ್ ಯುನಿವರ್ಸಿಟಿಯ ಕಾರ್ಯನಿರ್ವಹಕಾ ಪ್ರಧಾನ ರಾಜ್ಯಪಾಲ ಪ್ರೊ| ಡಾ| ರಾಲ್ಫ್ ಥೋಮಸ್, ಯುಸಿಯು ಬದಲಿ ಉಪಕುಲಪತಿ ಡಾ| ಜೋಪ್ಪ್ರೆಯ್ ಕ್ಲರ್ಕ್ ಮತ್ತು ವಿಶ್ವವಿದ್ಯಾನಿಲಯದ ಪ್ರತಿನಿಧಿ ಕು| ಜುಡಿತ್ ಕೌಲ್‌ಸನ್ ಉಪಸ್ಥಿತರಿದ್ದು, ಶಿವರಾಮ್ ಕೆ.ಭಂಡಾರಿ ಅವರಿಗೆ ಡಾಕ್ಟರೇಟ್ ಸನದು ಪ್ರದಾನಿಸಿ ಗೌರವಿಸಿದರು.

ದಕ್ಷಿಣ ಭಾರತೀಯ ಸಿಟಿವಿ ಕಮ್ಯೂನಿಕೇಶನ್ ಆಫ್ ತಮಿಳುನಾಡು ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಅಮೇರಿಕಾ (ಯು‌ಎಸ್‌ಎ) ಡೆಲವಾರೆ ಅಲ್ಲಿನ ನಾಲೆಜ್ ಯುನಿವರ್ಸಿಟಿ ಸಂಘಟಿತ ಯುರೋಪಿಯನ್ ಕಾಂಟಿನೆಂಟಲ್ ಯುನಿವರ್ಸಿಟಿ (ಯುಸಿಯು) ಸಂಸ್ಥೆಯು ಯುನೈಟೆಡ್ ಕೊರಿಯಾ (ಯುಕೆ) ಕಮಿಶನ್ ಆಫ್ ಕಾನ್ಸಿಸ್ಟೆಂಟ್ ಸಹಯೋಗದೊಂದಿ ಗೆ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಸಾಧಕ ಒಡನಾಟದದೊಂದಿಗೆ ಉದ್ಯಮ ವೃದ್ಧಿಕೆಯ ಸಾಧನಾಶೀಲ ಆಡಳಿತಗಾರ (ಕಾನ್ಸಾರ್ಶಿಯಂ ಆಂಟರ್‌ಪ್ರಿನರಿಯಲ್ ಆಡ್‌ಮಿನಿಸ್ಟ್ರೇಟರ್‍ಸ್ ಫಾರ್ ಪ್ರೊಫೆಶನಲ್ ಡೆವಲಪ್‌ಮೆಂಟ್) ಪದವೀದಾನ ಸಮಾರಂಭದಲ್ಲಿ ಶಿವರಾಮ್ ಭಂಡಾರಿ ಅವರಿಗೆ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಲಾಯಿತು.

Shivaram_Rons_Pics_2 Shivaram_Rons_Pics_3 Shivaram_Rons_Pics_4 Shivaram_Rons_Pics_5 Shivaram_Rons_Pics_6 Shivaram_Rons_Pics_7 Shivaram_Rons_Pics_8 Shivaram_Rons_Pics_9 Shivaram_Rons_Pics_10 Shivaram_Rons_Pics_11

ನಮ್ಮ ಸ್ವತಂತ್ರ ವೃತ್ತಿಪರ ಸಲಹೆಗಾರರು, ಪರಿವೀಕ್ಷಕರು ಮತ್ತು ಯುಕೆ ಕನ್ಸಿಸ್ಟೆಂಟ್ ಲರ್ನಿಂಗ್ (ಯುಕೆ-ಸಿಸಿ‌ಎಲ್)ಟ್ರಸ್ಟಿಗಳು ವಿಶ್ವವಿದ್ಯಾಲಯದ ಪ್ರಶಸ್ತಿ ತೀರ್ಪುಗಾರರ ಮುಂದೆ ಪ್ರೊಫೆಷನಲ್ ಡಾಕ್ಟರೇಟ್ ಆಫ್ ಇಂಟರ್‌ಪ್ರ್ಯುನರ್‌ಶಿಪ್ ಗೌರವಕ್ಕೆ ನಿಮ್ಮ ಹೆಸರನ್ನು ಬಹಳ ಸಂತೋಷದಿಂದ ಶಿಫಾರಸ್ಸು ಮಾಡಿ, ತಮ್ಮ ಅರ್ಹತೆಗಳ ಬಗ್ಗೆ ಸವಿವರವಾಗಿ ಅರುಹಿ, ತಾವು ಈ ಗೌರವಪಡೆದುಕೊಳ್ಳಲು ಬೇಕಾದ ಅರ್ಹತೆಗಳನ್ನು ಹೊಂದಿರುವ ವ್ಯಕ್ತಿ ಹಾಗೂ ವಿಶ್ವವಿದ್ಯಾನಿಲಯದ ಅತ್ಯುನ್ನತ ಮತ್ತು ಅತ್ಯುತ್ಕೃಷ್ಟ ಗೌರವವನ್ನು ಶಿವರಾಮ ಭಂಡಾರಿ ಅವರಿಗೆ ದಯಮಾಡಿಸಬೇಕೆಂಬುದು ನಮ್ಮ ಮನದಾಳದ ಆಶಯವನ್ನು ತಿಳಿಸಿದ್ದೇವು ಎಂದು ಯುಸಿಯು ಪ್ರತಿನಿಧಿಗಳು ತಿಳಿಸಿದ್ದಾರೆ.

ಯುಕೆ-ಸಿಸಿ‌ಎಲ್ ಪ್ರತಿನಿಧಿಗಳು ಮೌಖಿಕ ಪರೀಕ್ಷೆ ಮತ್ತು ಅಸೆಸ್‌ಮೆಂಟನ್ನು ನಡೆಸಿ ಪರಿವೀಕ್ಷಕರು ಮತ್ತು ಸಲಹೆಗಾರರು ತಮ್ಮ ಸಾಧನೆ ಮತ್ತು ಅರ್ಹತೆಗಳನ್ನು ಗಮನಿಸಿ ಪ್ರೊಫೆಷನಲ್ ನಾಲೆಡ್ಜ್ ಇಂಟ್ರಪ್ರ್ಯುನರಿಯಲ್ ಡಾಕ್ಟರೇಟ್ ಪದವಿ ಎಂಬ ಮಹತ್ವದ ಗೌರವಕ್ಕೆ ತಾವು ಸಮರ್ಪಕ ವ್ಯಕ್ತಿ ಎಂದು ಅರ್ಥೈಸಿಕೊಂಡರು. ತಮ್ಮ ಎಲ್ಲಾ ಶೈಕ್ಷಣಿಕ ಸಾಧನೆಗಳನ್ನು, ಕೆಲಸದ ಅನುಭವ, ಕೌಶಲ್ಯ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ತಾವು ಮಾಡಿದ ಸಾಧನೆ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಮತ್ತು ಇದುವರೆಗೆ ನೀವು ಮಾಡಿದ ಎಲ್ಲಾ ಕೆಲಸ ಮತ್ತು ಸಾಧನೆಗಳನ್ನು ಪ್ರಶಸ್ತಿ ತೀರ್ಪುಗಾರರ ಮುಂದೆ ಮಂಡಿಸಿದ್ದೆವು. ಈ ಎಲ್ಲಾ ಅಂಶಗಳು ಅಫರ್ಮೇಷನ್ ಫಾರ್ ಪ್ರೀರಿಯರ್ ಎಕ್ಸ್‌ಪೀರಿಯೆನ್ಸ್ ಆಂಡ್ ಲರ್ನಿಂಗ್ (ಎಪಿ‌ಇ‌ಎಲ್) ಯುಕೆ-ಕಮಿಷನ್ ಫಾರ್ ಕನ್ಸಿಸ್ಟೆಂಟ್ ಲರ್ನಿಂಗ್ (ಯುಕೆ-ಸಿಸಿ‌ಎಲ್) ವಿಶೇಷ ಯೋಜನೆಯಲ್ಲಿ ಈ ವಿಶೇಷ ಗೌರವ ಸಲ್ಲಲು ಪೂರಕವಾದವು.

ಪ್ರೊಫೆಷನಲ್ ನಾಲೆಡ್ಜ್ ಡಿಗ್ರಿ ಸರ್ಟಿಫಿಕೇಟ್ ಮತ್ತು ಅಸೆಸ್ಮೆಂಟ್ ವರದಿ ಮತ್ತು ಇತರ ಸಂಬಂಧಪಟ್ಟ ದಾಖಲೆಗಳನ್ನು ಮತ್ತು ಗಳಿಸಿಕೊಂಡ ಪ್ರಶಸ್ತಿಯನ್ನು ಈ ಪತ್ರದ ಜೊತೆಗೆ ಕಳುಹಿಸುತ್ತೇವೆ. ಇದರ ಜೊತೆಗೆ ಶಿವರಾಮ ಭಂಡಾರಿ ಅವರ ಉಜ್ವಲ ಭವಿಷ್ಯಕ್ಕೆ ಶುಭಹಾರೈಸುವ ಉತ್ತಮ ಅವಕಾಶ ಕೂಡ ನಮಗೆ ದೊರೆತಿದೆ ಎನ್ನಲು ಸಂತೋಷ ಪಡುತ್ತಿದ್ದೇವೆ ಎಂದೂ ಯುಸಿಯು ತಿಳಿಸಿದೆ. ಧೃಢೀಕರಣ ಪತ್ರವು ತಮ್ಮ ಹುದ್ದೆಯ ಪತ್ರಗಳಲ್ಲಿ ತಮ್ಮ ಹೆಸರಿನ ನಂತರ ಡಿಪಿ‌ಇ (ಯು‌ಎಸ್‌ಎ) ಬಳಸಿಕೊಳ್ಳುವ ಸಂಪೂರ್ಣ ಹಕ್ಕು ಮತ್ತು ಅಧಿಕಾರ ಶಿವರಾಮ ಅವರಿಗೆ ನೀಡಿದೆ.

ರಿಟೈಲ್ ಮ್ಯಾನೇಜ್‌ಮೆಂಟ್‌ನಲ್ಲಿ ಡಾಕ್ಟರ್ ಆಫ್ ಪ್ರೊಫೆಷನಲ್ ಇಂಟರ್‌ಪ್ರಿನರ್‌ಶಿಪ್ (ಡಿಪಿ‌ಇ) ಗೌರವ ಸ್ವೀಕಾರ ಪತ್ರವು ತಮಗೆ ನೀಡಲಾಗಿತ್ತಿದೆ. ಪ್ರೊಫೆಷನಲ್ ಇಂಟರ್‌ಪ್ರಿನ್ಯುರಲ್ ನಾಲೆಡ್ಜ್ ಡಾಕ್ಟರೇಟ್‌ಗೆ ಸಂಬಂಧಿಸಿ ೨೦೧೪ನೇ ವರ್ಷದಿಂದ ಸಲಹಾಗಾರರಾಗಿ ಕೆಲಸ ನಿರ್ವಹಿಸಿ ಒಬ್ಬ ಪ್ರಬುದ್ಧ ಅನುಭವಿ ಸಲಹೆಗಾರರೆಂಬ ಹೆಸರು ತಮ್ಮದಾಯಿತು. ನಮ್ಮ ಪ್ರತಿನಿಧಿ ದಕ್ಷಿಣ ಭಾರತದ ಸಿಟಿವಿ ಕಮ್ಯುನಿಕೇಷನ್ ತಮಿಳುನಾಡು ದಯರಹಹ್ ಅವರು ಡಾಕ್ಟರ್ ಆಫ್ ಪ್ರೊಫೆಷನಲ್ ಎಂಟರ್‌ಪ್ರಿನರ್‌ಶಿಪ್ ಗೌರವಕ್ಕೆ ತಾವು ಅರ್ಹರು ಎಂದು ನಿಮ್ಮಂತಹ ಪ್ರಬುದ್ಧ ಅನುಭವಿ ವ್ಯಕ್ತಿಯನ್ನು ಅಫರ್ಮೇಷನ್ ಆಫ್ ಪ್ರೀರಿಯರ್ ಎಕ್ಸ್‌ಫೀರಿಯೆನ್ಸ್ ಎಂಡ್ ಲರ್ನಿಂಗ್ ಎಂಬ ನಿರ್ಧಿಷ್ಟ ಯೋಜನೆಯಡಿಯಲ್ಲಿ ತಮ್ಮ ಹೆಸರನ್ನು ಸಲಹೆ ಮಾಡಿದೆವು. ವಿಶ್ವವಿದ್ಯಾನಿಲಯ ಗುರುತಿಸಿ ಗೌರವ ಸಲ್ಲಿಸಿದೆ. ಇದಕ್ಕೆ ಬೇಕಾಗುವ ಎಲ್ಲಾ ದಾಖಲೆಗಳನ್ನು ಒದಗಿಸುವಂತೆ ಕೇಳಿಕೊಂಡಾಗ ನಮ್ಮ ಪ್ರತಿನಿಧಿಗೆ ವರ್ಗಾಯಿಸಿದ್ದಲ್ಲದೆ ನಮ್ಮ ಕೆಲಸ ಆಧಾರದ ಇಂಟರ್‌ಪ್ರಿನ್ಯುರಿಯಲ್ ನಾಲೆಡ್ಜ್ ಡಾಕ್ಟರೇಟ್ ಅವಾರ್ಡ್‌ಗೆ ಸಂಬಂಧಿಸಿದ ಹಲವಾರು ಮೌಖಿಕ ಚರ್ಚೆಗಳಲ್ಲಿ ಭಾಗವಹಿಸಿದಿರಿ. ಇದು ಯುರೋಪಿಯನ್ ಕಾಂಟಿನೆಂಟಲ್ ಯುನಿವರ್ಸಿಟಿಯ ಅತ್ಯುನ್ನತವಾದ ಗೌರವ ತಮಗೆ ಸಲ್ಲಲು ಪೂರವಾದುವು.

ತಮ್ಮ ೨೫ ವರ್ಷದ ಕ್ಷೌರಿಕ ಸೇವಾ ಅನುಭವವನ್ನು ಮತ್ತು ರಾಷ್ಟ್ರ ಮಟ್ಟದ ರಾಜಕಾರಣಿಗಳು, ಬಾಲಿವುಡ್ ತಾರೆಯರುಗಳ ಕೇಶ ವಿನ್ಯಾಸಗಳ ತಮ್ಮ ಎಲ್ಲಾ ದಾಖಲೆಪತ್ರಗಳು ತಿಳಿಸುತ್ತಿದ್ದು, ತಾವು ಒಬ್ಬ ಸಮರ್ಥ ಸಲಹೆಗಾರ ಮತ್ತು ಪರಿವೀಕ್ಷಕ ಎಂಬುದನ್ನು ಸಿಟಿವಿ ಕಮ್ಯುನಿಕೇಷನ್ ಸಂಸ್ಥೆ ಗುರುತಿಸಲು ಅನುಕೂಲವಾದ ಅಂಶಗಳಾದುವು. ಎಪಿ‌ಇ‌ಎಲ್ ಯೋಜನೆಯಲ್ಲಿ ತಮ್ಮನ್ನು ಒಬ್ಬ ಪ್ರತ್ಯಕ್ಷ ಅಭ್ಯರ್ಥಿಯಾಗಿ ನೇಮಿಸಿದ್ದಾಗ ಸ್ವತಂತ್ರ ಪರಿವೀಕ್ಷಣಾ ಸಂಘವಾದ ಯುಕೆ-ಸಿಸಿ‌ಎಲ್ ತಮ್ಮ ಅನುಭವ ಮತ್ತು ಸಾಧನೆಗಳ ದಾಖಲೆಗಳನ್ನು ಮಂಡಿಸಿ ವಿಶ್ವವಿದ್ಯಾನಿಲಯದ ಗೌರವಕ್ಕೆ ತಾವು ಸೂಕ್ತ ಅಭ್ಯಥಿ ಎಂದು ಶಿಫಾರಸ್ಸು ಮಾಡಿತ್ತು. ತಮ್ಮ ಈ ಗೌರವ ನಮ್ಮ ದೇಶಕ್ಕೆ ಸಂದ ಗೌರವ. ಇಡೀ ದೇಶವೇ ತಮಗೆ ಸಂದ ಗೌರವಕ್ಕೆ ಹೆಮ್ಮೆ ಪಡುತ್ತದೆ. ತಮ್ಮ ಉಜ್ವಲ ಭವಿಷ್ಯಕ್ಕೆ ನಮ್ಮ ಶುಭ ಹಾರೈಕೆಗಳು. ತಮ್ಮ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಸದಾ ಹಾರೈಸುತ್ತೇವೆ ಎಂಬುವುದಾಗಿ ಯುಸಿಯು ಪ್ರಕಟಿಸಿದೆ.
ಬಾಲ್ಯದಲೇ ತನ್ನ ಜನಕನನ್ನು ಕಳೆದುಕೊಂಡು ಮಮತೆಯ ತಾಯಿ ಶ್ರೀಮತಿ ಗುಲಾಬಿ ಭಂಡಾರಿ ಅವರ ಆಸರೆಯಲ್ಲಿ ಬೆಳೆದು ಮುಂಬಯಿ ಸೇರಿ ಸಲೂನ್‌ನಲ್ಲಿ ಕೆಲಸ ನಿರ್ವಹಿಸುತ್ತಾ ತನ್ನ ಸಾಧನೆಯಿಂದ ಇಂದು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಧರೆಗುಡ್ಡೆ ನಿವಾಸಿ ಶಿವರಾಮ ಭಂಡಾರಿ ಅವರು ೧೯೯೮ರ ಸಾಲಿನ ಸೆಲೂನ್ ಇಂಟರ್‌ನ್ಯಾಶನಲ್ ಪುರಸ್ಕಾರದಲ್ಲಿ ವಿಶ್ವದ ಖ್ಯಾತ ೪೮ ಪ್ರತಿಷ್ಠಿತ ಕೇಶ ವಿನ್ಯಾಸಗಾರರಲ್ಲಿ ಭಾರತೀಯರಾಗಿ ಶಿವಾಸ್ ಪುರಸ್ಕೃತರಾಗಿದ್ದರು. ಶಿವಸೇನಾ ಪರಮೋಚ್ಚ ನಾಯಕ ಬಾಳಸಾಹೇಬ್ ಠಾಕ್ರೆ ಪರಿವಾರದ ಸೇರಿದಂತೆ ಚಿತ್ರರಂಗದ ಹಿರಿಕಿರಿಯ ನಟ ನಟಿಯರ ಕೇಶ ವಿನ್ಯಾಸಕರಾಗಿಯೂ ಪ್ರಸಿದ್ಧರಾಗಿರುವರು.

ಹೇರ್ ಕಟ್ಟಿಂಗ್ ಸಲೂನ್‌ಗೆ ಹೊಸ ಆಯಾಮ ನೀಡಿ ತನ್ನ ಉದ್ಯಮವನ್ನು ಪ್ರೈವೇಟ್ ಲಿಮಿಟೆಡ್ ಆಗಿಸಿ ಶಿವಾಸ್ ಹೇರ್ ಸ್ಟೈಲೋ ಡಿಸೈನರ್ ಮುಖೇನ ಥಾಣೆ, ಜುಹೂ, ಮುಲುಂಡ್, ಅಂಧೇರಿ ಲೊಖಂಡ್‌ವಾಲ, ಅಂಧೇರಿ ಪಶ್ಚಿಮ, ಮಲಾಡ್ ಮತ್ತು ಮೂಡಬಿದ್ರೆ ನಗರದಲ್ಲೂ ವೃತ್ತಿ ನಿರತವಾಗಿದ್ದು, ಅತ್ಯಾಧುನಿಕ, ಸುಸಜ್ಜಿತ ಮಳಿಗೆಯಾಗಿ ಕಾರ್ಯಚರಿಸುತ್ತಾ ವ್ಯಕ್ತಿತ್ವದಲ್ಲಿ ಬಾಲಿವುಡ್ ವ್ಯಕ್ತಿಯಂತೆಯೇ ಪ್ರಜ್ವಲಿಸುತ್ತಾ ಸದಾ ತೆರೆಯ ಮರೆಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಶಿವರಾಮ ಅವರು ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ತುಳುನಾಡ ಹಳ್ಳಿ ಹುಡುಗನೋರ್ವ ಭಂಡಾರಿ ಸಮುದಾಯದಲ್ಲಿ ಹುಟ್ಟಿ ಬೆಳೆದು ಅಖಂಡ ಭಂಡಾರಿ ಸಮಾಜಕ್ಕೆ ಕೀರ್ತಿಯನ್ನೊದಗಿಸಿದ ಶಿವರಾಮ ಭಂಡಾರಿ ಅವರ ಸಾಧನೆ ಸರ್ವರಿಗೂ ಮಾದರಿ ಆಗಿದೆ. ಅವರೋರ್ವ ಮಿತಭಾಷಿ, ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಮೈಗೂಡಿಸಿರುವ ತೆರೆಯ ಮರೆಯ ಸಾಧಕ ಎಂದು ಭಂಡಾರಿ ಮಹಾ ಮಂಡಲದ ನಿಕಟಪೂರ್ವ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ ತಿಳಿಸಿ ಹರ್ಷವ್ಯಕ್ತ ಪಡಿಸಿದ್ದಾರೆ.

ಬಾಲಿವುಡ್ ರಂಗದ ಸೆಲೆಬ್ರೆಟಿಗಳಾದ ಚಲನಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್, ಬಾಲಿವುಡ್ ಚಿತ್ರನಟರಾದ ಅನುಪಮ್ ಖೇರ್, ನೀಲ್ ರತನ್ ಮುಕೇಶ್, ಅಂಜನ್ ಶ್ರೀವಾಸ್ತವ್, ನಟಿ ಮುಗ್ದ ಗೋಡ್ಸೆ, ಪ್ರಸಿದ್ಧ ವಿನ್ಯಾಸಕರಾದ ಸುನೀಲ್ ಲುಲ್ಲಾ ಮತ್ತು ಕೃಶಿಕಾ ಲುಲ್ಲಾ, ಭಂಡಾರಿ ಸೇವಾ ಸಮಿತಿ (ರಿ.) ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ, ಉಪಾಧ್ಯಕ್ಷರುಗಳಾದ ನ್ಯಾ| ಆರ್.ಎಂ ಭಂಡಾರಿ ಮತ್ತು ಸದಾನಂದ ಕುಮಾರ್ ಭಂಡಾರಿ, ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ, ಗೌ| ಕೋಶಾಧಿಕಾರಿ ರಮೇಶ್ ವಿ.ಭಂಡಾರಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಭಂಡಾರಿ ಪುಣೆ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಭಂಡಾರಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ನ್ಯಾ| ಸುಂದರ್ ಜಿ.ಭಂಡಾರಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಲಲಿತಾ ವಿ.ಭಂಡಾರಿ, ಪ್ರತಿಷ್ಠಿತ ಉದ್ಯಮಿಗಳಾದ ಗುಣಪಾಲ್ ಶೆಟ್ಟಿ ಐಕಳ, ಮಹೇಶ್ ಟ್ಯೂಟೋರಿಯಲ್ಸ್‌ನ ಮಹೇಶ್ ಶೆಟ್ಟಿ, ಸವಿತಾ ಮಾರ್ಗದರ್ಶಿ ಪತ್ರಿಕೆಯ ಪ್ರಕಾಶಕ ಸೊಮಶೇಖರ ಎಂ. ಭಂಡಾರಿ ಬೆಂಗಳೂರು, ಅನುಶ್ರೀ ಭಂಡಾರಿ ಮತ್ತು ಮಾ| ರೋಹಿಲ್ ಭಂಡಾರಿ ಹಾಗೂ ಬೇಬಿ ಆರಾಧ್ಯ ಭಂಡಾರಿ, ಇನ್ನಿತರ ನೂರಾರು ಗಣ್ಯರು ಡಾಕ್ಟರೇಟ್ ಗೌರವಕ್ಕೆ ಪಾತ್ರರಾದ ಶಿವರಾಮ ಭಂಡಾರಿ ಅವರಿಗೆ ಅಭಿನಂದಿಸಿದ್ದಾರೆ. ಕಳೆದ ವರ್ಷವಷ್ಟೇ ಶಿವಾ’ಸ್ ಹೇರ್ ಡಿಝೈನರ್‍ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಭವ್ಯ ಸಮಾರಂಭದಲ್ಲಿ ರಜತೋತ್ಸವ ಸಂಭ್ರಮಿಸಿತ್ತು.

Write A Comment