ಕರಾವಳಿ

ಫೆಡರೇಶನ್‌ ಕಪ್‌; ಒಂದೇ ಮನೆಗೆ ನಾಲ್ಕು ಚಿನ್ನ!

Pinterest LinkedIn Tumblr

nat_3sport_17

ಮಂಗಳೂರು, ಮೇ 4: ಇಲ್ಲಿನ ಮಂಗಳಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸಿನೀಯರ್‌ ಫೆಡರೇಶನ್‌ ಕಪ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ನಾಲ್ಕನೆ ಹಾಗೂ ಅಂತಿಮ ದಿನವಾದ ಸೋಮವಾರ ಬೆಳಗ್ಗೆ ನಡೆದ 10 ಸಾವಿರ ಮೀ. ಓಟದಲ್ಲಿ ತಮಿಳುನಾಡಿನ ಅಣ್ಣ-ತಂಗಿಯರು ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಟೂರ್ನಿಯಲ್ಲಿ 5 ಸಾವಿರ ಹಾಗು 10 ಸಾವಿರ ಮೀ. ಓಟದಲ್ಲಿ ಚಾಂಪಿಯನ್‌ಪಟ್ಟಕ್ಕೇರಿ ಅಪರೂಪದ ಸಾಧನೆ ಮೂಲಕ ಗಮನ ಸೆಳೆದರು. ಆರ್ಮಿಯನ್ನು ಪ್ರತಿನಿಧಿಸುತ್ತಿರುವ ಜಿ. ಲಕ್ಷ್ಮಣನ್‌ 10 ಸಾವಿರ ಮೀ. ಓಟದ ಸ್ಪರ್ಧೆಯಲ್ಲಿ 29:49:91 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದುಕೊಂಡರು.

ಮಹಿಳೆಯರ 1೦ ಸಾವಿರ ಮೀ. ಓಟದಲ್ಲಿ ಲಕ್ಷ್ಮಣನ್‌ ತಂಗಿ ಸೂರ್ಯಾ 34:42:05 ಸೆಕೆಂಡ್‌ನಲ್ಲಿ ಗುರಿ ತಲುಪಿ ಸ್ವರ್ಣ ಪದಕ ಮುಡಿಗೇರಿಸಿಕೊಂಡರು. ಸೂರ್ಯಾ ಟೂರ್ನಿಯಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪಂದ್ಯಾವಳಿಯ ಮೊದಲ ದಿನವಾದ ಶುಕ್ರವಾರ ಒಂದೇ ಮನೆಯ ಲಕ್ಷ್ಮಣನ್‌ ಹಾಗೂ ಸೂರ್ಯಾ ಚಿನ್ನದ ಪದಕವನ್ನು ಜಯಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Write A Comment