ಕರಾವಳಿ

ಹಳೆ ದ್ವೇಷದ ಹಿನ್ನಲೆ; ಯುವಕನಿಗೆ ಮಾರಣಾಂತಿಕ ಹಲ್ಲೆ

Pinterest LinkedIn Tumblr

Kumbashi_Apr 24_2015-002

ಕುಂದಾಪುರ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೋರ್ವನ ಮೆಲೆ ಮೂವರ ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ಕುಂದಾಪುರ ತಾಲೂಕು ತೆಗ್ಗರ್ಸೆ ಗ್ರಾಮದ ತೆಗ್ಗರ್ಸೆ ಪೇಟೆಯಲ್ಲಿ ನಡೆದಿದೆ.

ತಗ್ಗರ್ಸೆ ನಿವಾಸಿ ರವೀಂದ್ರ ಗಾಣಿಗ (31) ಹಲ್ಲೆಗೊಳಗಾದವರಾಗಿದ್ದು, ಶಶಿಧರ ಹುದಾರ ಮತ್ತು ರಾಜು, ನೀಲಕಂಠ ಹಾಗೂ ಜಯರಾಜ್ ಹುದಾರ ಹುದಾರ ಎನ್ನುವವರು ಹಲ್ಲೆಡ ನಡೆಸಿದ ಆರೊಪಿಗಳೆನ್ನಲಾಗಿದೆ.

Kumbashi_Apr 24_2015-001

Kumbashi_Apr 24_2015-003

ಘಟನೆ ವಿವರ; ಗುರುವಾರ ರಾತ್ರಿ 09:30 ಗಂಟೆಯ ಸಮಯಕ್ಕೆ ರವೀಂದ್ರ ಗಾಣಿಗ ಅವರು ತಮ್ಮ ಸೋದರ ಕೃಷ್ಣ ಗಾಣಿಗ ಅವರೊಂದಿಗೆ ತೆಗ್ಗರ್ಸೆ ಪೇಟೆಯಲ್ಲಿ ನಿಂತುಕೊಂಡಿರುವ ವೇಳೆ ಮೋಟಾರ್ ಸೈಕಲ್‌ನಲ್ಲಿ ಹಾಗೂ ನಡೆದುಕೊಂಡು ಬಂದ ಆರೋಪಿ ರಾಜು ಎಂಬಾತ ರವೀಂದ್ರ ಅವರನ್ನು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಆತನ ಕೆನ್ನೆಗೆ ಹೊಡೆದಿದ್ದಾರೆ, ಅಲ್ಲದೇ ಅದೇ ವೇಳೆಗೆಅಲ್ಲಿಗೆ ಬಂದ ಶಶಿಧರ ಹುದಾರ ಎಂಬಾತ ಆತನ ಕೈಯಲ್ಲಿದ್ದ ರಾಡ್‌ನಿಂದ ರವೀಂದ್ರನ ಬಲಕೈ ಕಾಲುಗಳಿಗೆ ಮಾರಣಾಂತಿಕವಗಿ ಹೊಡೆದಿದ್ದು ಆ ಸಮಯದಲ್ಲಿ ಹಲ್ಲೆ ತಪ್ಪಿಸಲು ಹೋದ ಕೃಷ್ಣ ಅವರನ್ನು ಆರೊಪಿಗಳು ಬಲವಾಗಿ ಹಿಡಿದುಕೊಂಡು ಕೆನ್ನೆಗೆ ಮೈಕೈಗೆ ಗುದ್ದಿದ್ದಾರೆ ಎನ್ನಲಗಿದ್ದು, ಕೊಲೆ ಬೆದರಿಕೆಯನ್ನು ಹಾಕಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Write A Comment