ಕರಾವಳಿ

ಮೂಲ್ಕಿ: ಬೈಕ್‌ಗೆ ಕಾರು ಡಿಕ್ಕಿ, ಸವಾರ ಗಂಭೀರ

Pinterest LinkedIn Tumblr

ಮೂಲ್ಕಿ: ಇಲ್ಲಿನ ಮೂಲ್ಕಿ ಬಳಿಯ ಪುನರೂರು ಶಾಲೆಯ ಬಳಿ ಶನಿವಾರ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಗಾಯಗೊಂಡ ಬೈಕ್ ಸವಾರನನ್ನು ಉಡುಪಿ ಎರ್ಮಾಳ್ ನಿವಾಸಿ ಮಹಮದ್ ಅದನನ್(೩೨) ಎಂದು ಗುರುತಿಸಲಾಗಿದೆ.

ಮೂಲ್ಕಿಯಿಂದ ಬಜಪೆಗೆ ತೆರಳುತ್ತಿದ್ದ ಕಾರೊಂದು ಕಿನ್ನಿಗೋಳಿಯಿಂದ ಮೂಲ್ಕಿಯತ್ತ ಸಂಚರಿಸುತ್ತಿದ್ದ ಮಹಮದ್ ಅದನನ್ ಚಲಾಯಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಕಾರಿನ ಎದುರು ಭಾಗ ನಜ್ಜುಗುಜ್ಜಾಗಿದ್ದು ಬೈಕ್ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. ಸವಾರ ಮಹಮದ್‌ರವರ ಕಾಲು ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರತ್ಕಲ್ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Write A Comment