ಕರಾವಳಿ

ಕುಲಶೇಖರ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವ; ಆತ್ಮಶುದ್ಧಿಯಿಂದ ಭಗವಂತನ ಸಾಮಿಪ್ಯ – ಸಾದ್ವಿ ಮಾತಾಅನಂದಮಯೀ

Pinterest LinkedIn Tumblr

Kulashekar-Feb 18_2015-001

ಮಂಗಳೂರು : ಇತಿಹಾಸ ಪ್ರಸಿದ್ದ ದ.ಕ. ಜಿಲ್ಲೆಯ ಕುಲಾಲ ಸಮಾಜದ ಆಡಳಿತದಲ್ಲಿರುವ ಮಂಗಳೂರಿನ ಕುಲಶೇಖರ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವವು ಫೆ. 12ರಿಂದ ಫೆ. 14 ರ ತನಕ ವಿವಿಧ ಧಾರ್ಮಿಕ ಪೂಜಾಕಾರ್ಯಗಳೊಂದಿಗೆ ವಿಜ್ರಂಭಣೆಯಿಂದ ಸಂಪನ್ನಗೊಂಡಿತು.

ಫೆ. 12 ರಂದು ದೇವಸ್ಥಾನದ ಅಂಗಣದಲ್ಲಿ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನ ಓಡಿಯೂರಿನ ಸಾದ್ವಿ ಮಾತಾಅನಂದಮಯೀ ಆಶೀರ್ವಚನ ನೀಡುತ್ತಾ ನಮ್ಮ ಆತ್ಮವೆಂಬ ಕುಂಬದೊಳಗೆ ಶುದ್ಧವಿರಬೇಕು. ಆಗ ಭಗವಂತ ಸಾಮಿಪ್ಯವಿರುತ್ತಾನೆ. ಪ್ರೀತಿ ವಿಶ್ವಾಸಕ್ಕೆ ಕುಲಾಲ ಸಮಾಜ ಮಾರ್ಗದರ್ಶಕವಾಗಿದೆ.

Kulashekar-Feb 18_2015-008

Kulashekar-Feb 18_2015-009

Kulashekar-Feb 18_2015-010

Kulashekar-Feb 18_2015-011

Kulashekar-Feb 18_2015-012

Kulashekar-Feb 18_2015-013

Kulashekar-Feb 18_2015-002

Kulashekar-Feb 18_2015-003

Kulashekar-Feb 18_2015-004

Kulashekar-Feb 18_2015-006

Kulashekar-Feb 18_2015-007

ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ತುಳುವೆರ್ ಚಾವಡಿಯ ಗೌರವ ಅಧ್ಯಕ್ಷ ಪುರುಷೋತ್ತಮ ಚೆಂಡ್ಲ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರಿನ ಮಹಾಪೌರ ಮಹಾಬಲ ಮಾರ್ಲ, ಕುಲಾಲ ಪ್ರತಿಷ್ಠಾನ ಟ್ರಷ್ಟಿ ಪತ್ರಕರ್ತ ಬೊಕ್ಕಪಟ್ನ ದಿನೇಶ್ ಕುಲಾಲ್, ಮಾಯಾ ಇಂಟರ್ನೇಷನಲ್ ಹೋಟೇಲ್ಲಿನ ವಾಸುದೇವ ಕಾಮತ್, ಕಾಂತಾವರ ಅಲ್ಲಮಾಪ್ರಭು ಪೀಟದ ಕಾರ್ಯಾಧ್ಯಕ್ಷ ಯಶೋಧರ ಕರ್ಕೇರ ಉಪಸ್ಥಿತರಿದ್ದರು.

ಪ್ರಾಸ್ಥಾವಿಕ ಮಾತುಗಳನ್ನು ದೇವಸ್ಥಾನ ಆಡಳಿತ ಮುಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಭಾವಿ ನುಡಿದರು. ಅತಿಥಿಗಳನ್ನು ಮುಕ್ತೇಸರರಾದ ನ್ಯಾ. ರವೀಂದ್ರ ಮುನ್ನಿಪ್ಪಾಡಿ ಪರಿಚಯಿಸಿದರು. ವೇದಿಕೆಯ ಗಣ್ಯರಿಗೆ ದ. ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘದ ಅಧ್ಯಕ್ಷ ರಾಜೇಂದ್ರ ಕುಲಾಲ್ ಅಳಪೆ ಗೌರವಿಸಿದರು.

ಕಾರ್ಯಕ್ರಮವನ್ನು ನ್ಯಾ. ಪ್ರಸಾದ್ ಕುಲಾಲ್ ಮತ್ತು ಚಂದ್ರಹಾಸ ಕುಲಾಲ್ ನಿರೂಪಿಸಿದರು. ದೇವಿಪ್ರಸಾದ್ ಶಕ್ತಿನಗರ ಅಬಾರ ಮನ್ನಿಸಿದರು. ಪೂಜಾ ವಿಧಿಗಳನ್ನು ದೇವಸ್ಥಾನದ ತಂತ್ರಿ ಅನಂತ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜನರ್ಧನ ಭಟ್ ನೆರವೇರಿಸಿದರು.

Write A Comment