ಗಲ್ಫ್

ಬಹರೇನ್ ನಲ್ಲಿ ‘ಅಮರ ಮಧುರ ಗೀತೆ” ಗೆ ಕ್ಷಣಗಣನೆ :ದ್ವೀಪದ ಸಂಗೀತ ಪ್ರೇಮಿಗಳಿಗೆ ಸುಮಧುರ ಕನ್ನಡ ಚಲನಚಿತ್ರ ಗೀತೆಗಳ ರಸದೌತಣ

Pinterest LinkedIn Tumblr

KSB Amara Madura Geete Poster2_Lo

ಬಹರೈನ್ ; ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘವು ಸ್ಥಳೀಯ ಇಂಡಿಯನ್ ಕ್ಲಬ್ಬಿನ ಸಹಯೋಗದೊಂದಿಗೆ “ಅಮರ ಮಧುರ ಗೀತೆ ” ಎನ್ನುವಂತಹ ಸಂಗೀತ ಸಂಜೆಯನ್ನು ಇದೆ ತಿಂಗಳ 19 ರ ಗುರವಾರ ಸಂಜೆ 8 ಘಂಟೆಗೆ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಹಮ್ಮಿಕೊಂಡಿದೆ .

KSB Amara Madura Geethe IC Backdrop

ಇಂದಿಗೂ ನಮ್ಮ ನೆನಪಿನಾಳದಲ್ಲಿ ಹಸಿರಾಗಿರುವ 70,80 ಹಾಗು 90 ರ ದಶಕದ ಜನಪ್ರಿಯ ಮಧುರ ಕನ್ನಡ ಹಾಡುಗಳನ್ನು ದ್ವೀಪದ ಪ್ರತಿಭಾವಂತ ಗಾಯಕ ,ಗಾಯಕಿಯರು ಈ ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ . ಈ ಕಾರ್ಯಕ್ರಮಕ್ಕೆ ದ್ವೀಪದ ಹೆಸರಾಂತ ರಸಮಂಜರಿ ತಂಡವಾದ “ಬಹರೇನ್ ಮೆಲೋಡೀಸ್'” ಹಿನ್ನೆಲೆ ಸಂಗೀತ ನೀಡಲಿದೆ . ತಮ್ಮ ಸಂಗೀತ ನಿರ್ದೇಶನದಿಂದ ,ಗೀತ ರಚನೆ ಹಾಗು ಗಾಯನದಿಂದ ಕನ್ನಡ ಚಲನಚಿತ್ರ ಲೋಕವನ್ನು ಶ್ರೀಮಂತಗೊಳಿಸಿರುವ ಸಂಗೀತ ನಿರ್ದೇಶಕರು ,ಗೀತ ರಚನೆಕಾರರು ಹಾಗು ಗಾಯಕ ಗಾಯಕಿಯರುಗಳಿಗೆ ಈ ಕಾರ್ಯಕ್ರಮದ ಮುಖೇನ ಬಹರೇನ್ ನ ಕನ್ನಡಿಗರು ಅರ್ಪಿಸುವ ಗೌರವ ಕೂಡ ಈ ಕಾರ್ಯಕ್ರಮವಾಗಿರುತ್ತದೆ . ದ್ವೀಪದ ಪ್ರತಿಭಾವಂತ ನ್ರತ್ಯ ಪಟುಗಳು ಹಳೆಯ ಜನಪ್ರಿಯ ಕನ್ನಡ ಹಾಡುಗಳಿಗೆ ನ್ರತ್ಯ ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ . ದ್ವೀಪದ ಎಲ್ಲಾ ಕನ್ನಡಿಗರಿಗೂ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ .
ವರದಿ – ಕಮಲಾಕ್ಷ ಅಮೀನ್

Write A Comment