ಕರಾವಳಿ

ಹೆಸರಿಗೆ ಮಾತ್ರ ಕ್ಲೀನ್ ಸಿಟಿ, ಅವ್ಯವಸ್ಥೆ ಆಗರವಾಗಿದೆ ಕುಂದಾಪುರ ನಗರ; ಕಿತ್ತು ಹೋದ ರಬ್ಬರ್ ಹಂಪ್, ಚರಂಡಿ ಹಾಸುಗಲ್ಲು ಮಾಯ..! ಕುಂದಾಪುರ ಅವ್ಯವಸ್ಥಿತ ಪುರಸಭೆಗೆ ಜನರ ಹಿಡಿಶಾಪ

Pinterest LinkedIn Tumblr

Kundapur road_Feb 15- 2015_002

ಕುಂದಾಪುರ: ಕಳೆದ ಬಿಜೆಪಿ ಅವಧಿಯಲ್ಲಿ ಉತ್ತಮ ಪುರಸಭೆಯೆಂಬ ಹಣೆಪಟ್ಟಿ ಹೊತ್ತ ಕುಂದಾಪುರ ನಗರವೀಗ ಗಬ್ಬು ನಾರುತ್ತಿದೆ. ಕುಂದಾಪುರ ನಗರದಲ್ಲಿ ರಸ್ತೆ, ಚರಂಡಿ ಅವ್ಯವಸ್ತೆ, ತ್ಯಾಜ್ಯ ಸಮಸ್ಯೆ ಹಾಗೂ ಪಾರ್ಕಿಂಗ್ ಅವ್ಯವಸ್ಥೆಯಿಂದ ಜನರು ಪುರಸಬೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕಿತ್ತೆದ್ದು ಹೋದ ಹಂಪ್: ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತೆವೆಂಬ ನೆಪದಲ್ಲಿ ಪುರಸಬೆಯು ಸ್ಥಳೀಯ ಸಮಚಾರಿ ಪೊಲೀಸ್ ಇಲಾಖೆಯೊಂದಿಗೆ ಸೇರಿಕೊಂಡು ರಬ್ಬರ್ ಹಂಪ್‌ಗಳನ್ನು ಅವೈಜ್ಞಾನಿಕವಾಗಿ ಅಳವಡಿಸುವ ಮೂಲಕ ಪ್ರಯಾಣಿಕರಿಗೆ ಮತ್ತು ಪಾದಚಾರಿಗಳಿಗೆ ಯಮ ಸ್ವರೂಪಿಯಾಗಿದೆ. ಕುಂದಾಪುರ ಪುರಸಭೆಯು ರಬ್ಬರ್ ಹಂಪ್ ಖರೀದಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸ್ಥಳೀಯ ಪುರಸಭಾ ವ್ಯಾಪ್ತಿಯಲ್ಲಿ ಇದೀಗ ಗುಸುಗುಸು ಆರಂಭವಾಗಿದೆ.

Kundapur road_Feb 15- 2015_001

Kundapur road_Feb 15- 2015_003

Kundapur road_Feb 15- 2015_004

Kundapur road_Feb 15- 2015_005

Kundapur road_Feb 15- 2015_007

Kundapur road_Feb 15- 2015_008

Kundapur road_Feb 15- 2015_009

Kundapur road_Feb 15- 2015_010

ಕುಂದಾಪುರ ಹೊಸ ಬಸ್ಸು ನಿಲ್ದಾಣ ಹಾಗೂ ಹಳೆ ಬಸ್ಸು ನಿಲ್ದಾಣಧಲ್ಲಿ ಹಂಪ್‌ಗಳು ಮಾಯವಾಗಿದೆ. ಅಲ್ಲದೇ ಕುಂದೇಶ್ವರ ದೆವಸ್ಥಾನದ ಎದುರು, ಸರಕಾರಿ ಆಸ್ಪತ್ರೆ ಎದುರು ಸೇರಿದಂತೆ ನಗರದ ಮುಖ್ಯ ರಸ್ತೆಗಳಲ್ಲಿರುವ ಹಮಪುಗಳು ಅರೆಬರೆ ಕಿತ್ತು ಹೋಗಿದ್ದು ಅದರಲ್ಲಿರುವ ದೊಡ್ಡದೊಡ್ಡ ಅಪಾಯಕಾರಿ ಬೋಲ್ಟುಗಳು ರಸ್ತೆಯ ಮೆಲ್ಬಾಗದಲ್ಲಿ ಎದ್ದು ನಿಮತಿದ್ದು ದ್ವಿಚಕ್ರ ವಾಹನ, ಲಘು ವಾಹನಗಲಿಗೆ ಕಂಟಕವಾಗಿ ಪರಿಣಮಿಸಿದೆ.

ಹಂಪ್ ಅವ್ಯವಹಾರ : ಸಂಚಾರ ದಟ್ಟಣೆ ಮಿತಿಮೀರಿದೆ ಎನ್ನುವ ಕಾರಣದ ಜೊತೆಗೆ ಖಾಸಗೀ ಬಸ್‌ಗಳು ವೇಗ ಮಿತಿ ಇಲ್ಲದೇ ಸಂಚರಿಸುತ್ತವೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದಂತೆ ಕುಂದಾಪುರ ಪೊಲಿಸ್ ಇಲಾಖೆ ಮೂಡ್ಲುಕಟ್ಟೆಯ ಎಂಐಟಿ ಸಹಯೋಗದೊಂದಿಗೆ ಸಮೀಕ್ಷೆ ನಡೆಸಿ ವಾಹನ ನಿಲುಗಡೆ ಮತ್ತು ಸುಗಮ ಸಂಚಾರಕ್ಕೆ ಪ್ರಫೋಸಲ್ ಒಂದನ್ನು ಸಿದ್ಧಪಡಿಸುವ ಯೋಜನೆ ಹಮ್ಮಿಕೊಂಡಿತ್ತು. ಇದೇ ಸಂದರ್ಭ ಪುರಸಭೆಯಿಂದ ವೇಗ ಮಿತಿ ತಡೆಯುವುದಕ್ಕಾಗಿ ರಬ್ಬರ್ ಹಂಪ್‌ಗಳನ್ನು ಖರೀದಿಸಲು ಟೆಂಡರ್ ಕರೆದಿದ್ದು, ಬೆಂಗಳೂರಿನ ಕಂಪೆನಿಯೊಂದು ಗಟ್ಟಿ ರಬ್ಬರ್ ಮತ್ತು ಪ್ಲಾಸ್ಟಿಕ್ ಮಿಶ್ರಣದಿಂದ ತಯಾರಿಸಿದ್ದೆನ್ನಲಾದ ಹಂಪ್‌ಗಳ ಕೊಟೇಶ್ನ್ ನೀಡಿತ್ತು. ಕೊಟೇಶನ್ ಪಡೆದ ಪುರಸಭೆ ಮೀಟರ್ ಒಂದಕ್ಕೆ ನೂರು ರೂಪಾಯಿಗಳಂತೆ 2000 ಮೀಟರ್‌ಗಳಷ್ಟು ರಬ್ಬರ್ ಹಂಪ್‌ಗಳನ್ನು ಅಂದಾಜು 10 ಲಕ್ಷರೂ ಬಿಲ್ ಪಾವತಿಸಿ ಖರೀದಿಸಿದೆ ಎನ್ನಲಾಗುತ್ತಿದೆ. ಸುಮಾರು 50ರಿಂದ 60 ಸಾವಿರ ರೂಪಾಯಿಗಳ ಕ್ಯಾಟ್‌ಐಗಳನ್ನು ಖರೀದಿಸಿದ್ದು, ಹೆಚ್ಚೆಂದರೆ ಮೂರು ಲಕ್ಷ ರೂಪಾಯಿಗಳ ಸೊತ್ತನ್ನು ಖರೀದಿಸಿ ಲಕ್ಷಾಂತರ ರೂಪಾಯಿಗಳ ಬಿಲ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇತ್ತೀಚೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿಯೂ ಚರ್ಚೆಯಾಗಿದ್ದು, ಕೂಲಂಕುಶ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.

Kundapur road_Feb 15- 2015_011

Kundapur road_Feb 15- 2015_012

Kundapur road_Feb 15- 2015_013

Kundapur road_Feb 15- 2015_014

Kundapur road_Feb 15- 2015_015

Kundapur road_Feb 15- 2015_016

Kundapur road_Feb 15- 2015_017

Kundapur road_Feb 15- 2015_018

Kundapur road_Feb 15- 2015_019

Kundapur road_Feb 15- 2015_020

Kundapur road_Feb 15- 2015_021

Kundapur road_Feb 15- 2015_022

Kundapur road_Feb 15- 2015_023

Kundapur road_Feb 15- 2015_024

Kundapur road_Feb 15- 2015_025

ಚರಂಡಿ ಹಾಸುಗಲ್ಲು ಸಮಸ್ಯೆ: ಕುಂದಾಪುರದ ಮುಖ್ಯ ರಸ್ತೆ ಹಾಗು ಪುರಸಭೆಗೆ ಸಮಬಂಧಿಸಿದ ಒಳರಸ್ತೆಗಳ ಸಮಿಪದ ಚರಂಡಿಯ ಮೆಲ್ಬಾಗಕ್ಕೆ ಅಳವಡಿಸಲಾದ ಹಾಸುಗಲ್ಲು ತುಮಡರಿಸಿ ಚರಮಡಿಗೆ ಬಿದ್ದಿದ್ದು ಹಲವು ಪ್ರಯಾಣಿಕರು ಹಾಗು ವಾಹನ ಸವಾರರು ಚರಂಡಿಗೆ ಬಿದ್ದು ಗಾಯಗೊಳ್ಳುತ್ತಿರುವ ಘಟನೆಗಳು ನಿತ್ಯವೆಂಬಂತೆ ನಡೆಯುತ್ತಿದೆ. ಹಲವೆಡೆ ನಾಲ್ಕಾರು ಹಾಸುಗಲ್ಲು ತುಂಡರಿಸಿ ಚರಂಡಿ ಬಾಯ್ತರೆದಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದ್ದರೂ ಕೂಡ ಸಂಬಂದಪಟ್ಟ ಪುರಸಭೆ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂದವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುವುದು ಜನಾಕ್ರೋಷಕ್ಕೆ ಕಾರಣವಾಗಿದೆ.

Kundapur road_Feb 15- 2015_026

Kundapur road_Feb 15- 2015_028

Kundapur road_Feb 15- 2015_029

Kundapur road_Feb 15- 2015_035

Kundapur road_Feb 15- 2015_036

Kundapur road_Feb 15- 2015_038

Kundapur road_Feb 15- 2015_039

Kundapur road_Feb 15- 2015_040

Kundapur road_Feb 15- 2015_046

Kundapur road_Feb 15- 2015_047

Kundapur road_Feb 15- 2015_049

Kundapur road_Feb 15- 2015_050

ಅಪಾಯಕಾರಿ ಹಂಪ್: ಕುಂದಾಪುರ ಪೇಟೆಯಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾದ ಈ ರಬ್ಬರ್ ಹಂಪ್‌ಗಳಿಂದಾಗಿ ನಿತ್ಯ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೇ ರಸ್ತೆಯ ಅರ್ಧ ಭಾಗಕ್ಕೆ ಮಾತ್ರ ಹಂಪ್‌ಗಳನ್ನು ಅಳವಡಿಸಿರುವುದರಿಂದ ಎಲ್ಲಾ ವಾಹನಗಳೂ ರಸ್ತೆಯ ಅತೀ ಪಕ್ಕಕ್ಕೆ ಚಲಿಸಿ ಹಂಪ್ ತಪ್ಪಿಸಲು ಯತ್ನಿಸುತ್ತಿದ್ದು ಪಾದಾಚಾರಿಗಳಿಗೆ ಸಮಸ್ಯೆಯುಂಟಾಗುತ್ತಿದೆ. ಅಲ್ಲದೇ ಹಂಪ್‌ಗಳನ್ನು ಹತ್ತಿಸುವಾಗ ವಾಹನಗಳ ಇಂಜಿನ್ ಬಂದ್ ಆಗುವುದರಿಂದ ನಿತ್ಯವೂ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಳವಡಿಸಿ ಒಂದು ವಾರದ ಒಳಗೇ ಹಂಪ್‌ಗಳು ಕಿತ್ತುಹೋಗಲಾರಂಭಿಸಿದೆ. ಅಲ್ಲದೇ ಮುಖ್ಯರಸ್ತೆಗಳು ಸೆರಿದಂತೆ, ಪುರಸಬೆ ರಸ್ತೆಗಳಲ್ಲಿನ ಚರಂಡಿಯ ಮೇಲ್ಭಾಗಕ್ಕೆ ಅಳವಡಿಸಲಾದ ಹಾಸುಗಲ್ಲು ಮುರಿದಿದ್ದು ಹಲವರಿಗೆ ಅವಘಡಗಳಾಗಿದೆ. ಇ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು 15 ದಿನಗೊಳೊಲಗೆ ಸರಿಪಡಿಸುವ ಭರವಸೆಯನ್ನು ಸಂಬಂದಪಟ್ಟವರು ತಿಳಿಸಿದ್ದಾರೆ.
– ರಾಜೇಶ್ ಕಾವೇರಿ (ಪುರಸಭೆ ಸದಸ್ಯ)

ಪ್ರತಿನಿತ್ಯ ಸಂಚಾರದ ಸಂದರ್ಬದಲ್ಲಿ ಹಲವರು ಬಿದ್ದು ಗಾಯಮಾಡಿಕೊಂಡಿದ್ದಾರೆ. ಇನ್ನು ಕೆಲವು ವಾಹನಗಳೂ ತೀರಾ ಬದಿಗೆ ಬರುವುದರಿಂದ ಪಾದಚಾರಿಗಳಿಗೆ ಡಿಕ್ಕಿಯಾಗಿ ಆಸ್ಪತ್ರೆ ಸೇರಿದ ಘಟನೆಯೂ ನಡೆದಿದೆದಿನ್ನಾದರೂ ಸಂಬಂಧಪಟ್ಟವರು ನಿಗಾವಹಿಸಿ ಹಂಪ್ ತೆಗೆಯಬೇಕು. ಇಲ್ಲದಿದ್ದಲ್ಲಿ ವೈಜ್ಞಾನಿಕ ಹಂಪ್‌ಗಳನ್ನು ಅಳವಡಿಸಲಿ.
– ಸುಬ್ರಮಣ್ಯ ಶೆಟ್ಟಿ (ಸ್ಥಳೀಯರು)

Write A Comment