ಕುಂದಾಪುರ: ಚತುಷ್ಪತ ಕಾಮಗಾರಿಯ ಗೊಂದಲ ಕುರಿತು ಪರಿಶೀಲನೆಗೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಶನಿವಾರ ಸಾಲಿಗ್ರಾಮಕ್ಕೆ ಭೇಟಿ ನೀಡಿದರು.
ಸಾಲಿಗ್ರಾಮದಲ್ಲಿ ಪ್ರಮುಖ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಕಾರಂತ ಬೀದಿ ಹಾಗೂ ಕಾರ್ಕಡ ರಸ್ತೆ, ಪಡುಕರೆ ಮೀನುಗಾರಿಕಾ ರಸ್ತೆಯನ್ನು ಸಂಪರ್ಕಿಸಲು ಸರ್ಮಪಕ ರಸ್ತೆ ವಿಭಾಜಕ, ಸವೀರ್ಸ್ ರಸ್ತೆ, ಒಳಚರಂಡಿ ವ್ಯವಸ್ಥೆಯಿಲ್ಲದಿರುವುದರಿಂದ ಸಮಸ್ಯೆ ಉಂಟಾಗಲಿದೆ ಎಂದು ಸಾರ್ವಜನಿಕರು ತಿಳಿಸಿದರು ಹಾಗೂ ಸಾಸ್ತಾನದ ರಿಕ್ಷಾ ಚಾಲಕರು, ಸಾಲಿಗ್ರಾಮ-ಸಾಸ್ತಾನ ಮಧ್ಯಭಾಗದಲ್ಲಿ ರಸ್ತೆ ವಿಭಾಜಕವನ್ನು ನೀಡುವಂತೆ ಮವನಿ ಮಾಡಿದರು.
ಗುರುನರಸಿಂಹ ದೇವಳದ ಸಮೀಪ ನಿರ್ಮಿಸಿದ ರಸ್ತೆ ವಿಭಾಜಕವನ್ನು, ದೇವಳದ ಜಾತ್ರೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಉಪಯೋಗಿಸಿಕೊಳ್ಳುವಂತೆ ತಾತ್ಕಾಲಿಕ ವಿಭಾಜಕವಾಗಿ ಪರಿವರ್ತಿಸಿ, ಕಾರ್ಕಡ ತಿರುವಿನ ಬಳಿ ಶಾಶ್ವತ ವಿಭಾಜಕವನ್ನು ನಿರ್ಮಿಸುವುದಾಗಿ ತಿಳಿಸಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಸದರು, ಚತುಷ್ಪತ ಕಾಮಗಾರಿಯ ವಹಿಸಿಕೊಂಡ ಕಂಪನಿ ಅರ್ಥಿಕ ಸಂಕಷ್ಟದಲ್ಲಿದ್ದು, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕು ಎಂದರು.
ಉಡುಪಿ ಜಿಲ್ಲಾ ಜಿ.ಜೆ.ಪಿ. ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬಿ.ಜೆ.ಪಿ. ಮುಖಂಡರಾದ ಗೀತಾಂಜಲಿ ಸುವರ್ಣ, ಕಿರಣ್ ಕೊಡ್ಗಿ, ತಾ.ಪಂ.ಸದಸ್ಯ ರಾಘವೇಂದ್ರ ಕಾಂಚನ್, ಸಾಲಿಗ್ರಾಮ ಪ.ಪಂ.ಅಧ್ಯಕ್ಷೆ ಸಾಧು ಪಿ., ಉಪಾಧ್ಯಕ್ಷೆ ಸುಲತಾ ಹೆಗ್ಡೆ, ಸದಸ್ಯರಾದ ರಾಜು ಪೂಜಾರಿ, ರಾಘವೇಂದ್ರ ಗಾಣಿಗ, ಸಂಜೀವ ದೇವಾಡಿಗ, ಉದಯ್ ಪೂಜಾರಿ, ಕರುಣಾಕರ, ಭೋಜ ಪೂಜಾರಿ ಸ್ಥಳೀಯರಾದ ಶಿವರಾಮ ಉಡುಪ, ಮಂಜುನಾಥ ನಾರಿ, ಅಜೀತ್ ಶೆಟ್ಟಿ ಕೊತ್ತಾಡಿ, ನವಯುಗ ಕಂಪನಿಯ ಮುಖ್ಯಸ್ಥ ರಾಘವೇಂದ್ರ, ಹರೀಶ್, ಸಾಲಿಗ್ರಾಮ ಪ.ಪಂ. ಮುಖ್ಯಾಕಾರಿ ವೆಂಕಟರಮಣಯ್ಯ ಉಪಸ್ಥಿತರಿದ್ದರು.