ಕರಾವಳಿ

ಫೆ. 12 : ’ಪತ್ರಕಾರ್ ರತ್ನ’ ಪ್ರಶಸ್ತಿ ಪುರಸ್ಕೃತ ದಿನೇಶ್ ಕುಲಾಲ್ ಗೆ ತವರೂರಲ್ಲಿ ಸನ್ಮಾನ

Pinterest LinkedIn Tumblr

Dinesh Kulal

ಮುಂಬಯಿ : ಇತ್ತೀಚೆಗೆ ಮುಂಬಯಿ ಮಹಾನಗರದ ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿ ಸಂಸ್ಥೆ ನವಚಿಂತನ್ ಮತ್ತು ಸಾವಧಾನ್ ಸಂಸ್ಥೆಯಿಂದ ’ಪತ್ರಕಾರ್ ರತ್ನ’ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ, ಜನಪ್ರಿಯ ಪತ್ರಕರ್ತ, ಸಮಾಜ ಸೇವಕ ಹಾಗೂ ಸಂಘಟಕ, ಕುಲಾಲ ಪ್ರತಿಷ್ಟಾನ, ಮಂಗಳೂರು ಇದರ ಸ್ಥಾಪಕ ಬಿ. ದಿನೇಶ್ ಕುಲಾಲ್ ಅವರಿಗೆ ಫೆ. 12ರಂದು ಸಂಜೆ 5.30ಕ್ಕೆ ತನ್ನ ತವರೂರಾದ ಬೊಕ್ಕಪಟ್ನ ಬೋಳೂರು ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಅಂದು ರಾತ್ರಿ ಕುಲಾಲ ಸಮಾಜದ ಆಡಳಿತದ ಮಂಗಳೂರಿನ ಕುಲಶೇಖರ ವೀರ ನಾರಾಯಣ ದೇವಸ್ಥಾನದಲ್ಲಿ ದಿನೇಶ್ ಕುಲಾಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.

ಕಳೆದ ಒಂದೂವರೆ ದಶಕಗಳಿಂದ ಮುಂಬಯಿಯ ಕರ್ನಾಟಕ ಮಲ್ಲದ ವರದಿಗಾರರಾಗಿರುವ ಕುಲಾಲ್ ಅವರು ತೆಗೆದ ಛಾಯಾಚಿತ್ರಗಳು (ಫೋಟೊಗಳು) ಕಳೆದ ಕೆಲವು ವರ್ಷಗಳಿಂದ ಸುಮಾರು ಹತ್ತು ವೆಬ್ ಮಾಧ್ಯಮಗಳಲ್ಲದೆ, ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದು ಅದು ಈ ತನಕ ಒಂದೂವರೆ ಲಕ್ಷಕ್ಕೂ ಮೀರಿದ್ದು ಅವರು ಫೋಟೋ ಜರ್ನಲಿಸ್ಟ್ ಆಗಿ ಕೂಡಾ ಸಾಧನೆ ಮಾಡಿರುವರು. ಯುವ ಪತ್ರಕರ್ತ ದಿನೇಶ್ ಕುಲಾಲ್ ರ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯನ್ನು ಮೆಚ್ಚಿ ಈಗಾಗಲೇ ಕೆಲವು ತುಳು-ಕನ್ನಡ ಸಂಘಟನೆಗಳು ಸನ್ಮಾನಿಸಿದ್ದು, ಫೆ. 14ರಂದು (ಶನಿವಾರ) ಮುಂಬಯಿ ಮಲಾಡ್ ಪೂರ್ವದ ಕುರಾರ್ ವಿಲೇಜ್ ಶನಿ ಮಂದಿರದ 40 ನೇ ವಾರ್ಷಿಕ ಸಮಾರಂಭದಲ್ಲಿಯೂ ಪತ್ರಕರ್ತ ದಿನೇಶ್ ಕುಲಾಲ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಗುವುದು.

Write A Comment