ಕುಂಬ್ರ : ದಾರ್ಮಿಕ ಲೌಕಿಕ ಸಮನ್ವಯ ವಿದ್ಯಾ ಕೇಂದ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಜಾಮಿಯಾ ಅಲ ಕೌಸರ್ ಶರೀಅತ್ ಕಾಲೇಜ್ ನೂತನ ವಾಗಿ ನಿರ್ಮಾಣಗೊಂಡ ಹಾಸ್ಟೆಲ್ ಕಟ್ಟಡ ಉದ್ಘಾಟನೆ ಹಾಗು ಅಂತರಾಷ್ಟ್ರೀಯ ಪ್ರಭಾಷಣ ಕಾರರು , ಬಹು ಭಾಷಾ ಪಂಡಿತ ಬಹು ಸಿಂಸಾರುಲ್ ಹಖ್ ಹುದವಿಯವರ ದ್ವಿದಿನ ಪ್ರಭಾಷಣ ಕಾರ್ಯಕ್ರಮದ ಪ್ರಾಚಾರ ವಾಹನ ರ್ಯಾಲಿಗೆ ಶುಕ್ರವಾರದಂದು ಜುಮಾ ನಮಾಝಿನ ಬಳಿಕ ಚಾಲನೆ ನೀಡಲಾಯಿತು.
ಪ್ರಚಾರ ವಾಹನಕ್ಕೆ ಚಾಲನೆ ನೀಡಿ ದ್ವಜ ಹಸ್ತಾಂತರಿಸಿ ಮಾತನಾಡಿದ ಕೆ ಅರ್ ಹುಸೈನ್ ದಾರಿಮಿಯವರು, ಕಳೆದ ದಶಕಗಳಿಂದ ಅದೆಷ್ಟೋ ಯುವ ಪ್ರತಿಭೆಗಳಿಗೆ ಸಂಸ್ಕಾರಯುತ , ಶಿಸ್ತು ಬದ್ದ ಶಿಕ್ಷಣ ನೀಡುತ್ತಾ ಬಂದಿರುವ ಜಾಮಿಯಾ ಅಲ ಕೌಸರ್ ಶರೀಅತ್ ಕಾಲೇಜ್ ಕುಂಬ್ರ ಎಂಬ ಈ ಸ್ಥಾಪನೆಯೂ ಇಂದು ಅತ್ಯಂತ ಹುಮ್ಮಸ್ಸಿನಿಂದ , ಹುರುಪಿನಿಂದ ಮುನ್ನಡೆಯುತ್ತಿದೆ.
ಅತೀ ಸುಸಜ್ಜಿತ ಹಾಸ್ಟೆಲ್ , ಕ್ಯಾಂಟೀನ್ ಕಟ್ಟಡ , ಮಸೀದಿಗಳನ್ನೋಳಗೊಂಡ ಈ ಅಕಾಡೆಮಿ ಕ್ಯಾಂಪಸ್ ಇಂದು ರಾಜ್ಯಾದ್ಯಂತ ತನ್ನನ್ನು ಪರಿಚಯಿಸಿಕೊಂಡಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದ್ದು ಇಂತಹ ಸಂಧರ್ಭದಲ್ಲಿ ಡಿಸೆಂಬರ್ 22, 23 ರಂದು ನೂತನ ಹಾಸ್ಟೆಲ್ ಕಟ್ಟಡ ಉದ್ಘಾಟನೆಗಾಗಿ ಹಲವಾರು ಉಲಮಾ – ಉಮರಾ ಪಂಡಿತ ನೇತಾರರು , ಸಾಮಾಜಿಕ ರಾಜಕೀಯ , ಧಾರ್ಮಿಕ ಮುಖಂಡರು ಆಗಮಿಸಲಿದ್ದು ರಾತ್ರಿ ಮಗ್ರಿಬ್ ನಮಾಝಿನ ಬಳಿಕ ಅಂತರಾಷ್ಟ್ರೀಯ ಪ್ರಭಾಷನಕಾರರು ಬಹು ಭಾಷಾ ಪಂಡಿತರು ಆದ ಬಹು ಸಿಂಸಾರುಲ್ ಹಖ್ ಹುದವಿಯವರ ದ್ವಿದಿನ ಪ್ರಭಾಷಣ ನಡೆಯಲಿರುವುದು. ಆ ಪ್ರಯುಕ್ತ ಜಿಲ್ಲೆಯಾದ್ಯಂದ ಈ ಪ್ರಚಾರ ವಾಹನವು ಸಂಚರಿಸಲಿದ್ದು ಕಾರ್ಯಕ್ರಮದ ಯಶಸ್ಸಿಗೆ ತಾವೆಲ್ಲರೂ ಕೈಜೋಡಿಸಿ ಈ ವಿಧ್ಯಾಸ್ಥಾಪನೆಯನ್ನು ಇನ್ನಷ್ಟು ಉತ್ತಮ ಮಟ್ಟಕ್ಕೆ ಏರಿಸುವಲ್ಲಿ ಸಹಕರಿಸುವಂತೆ ಕೇಳಿಕೊಂಡರು. ಈ ಸಂಧರ್ಭದಲ್ಲಿ ಹಲವಾರು ಕೆ ಐ ಸಿ ಹಿತೈಷಿಗಳು , ಅಕಾಡೆಮಿ ಪಧಾಧಿಕಾರಿಗಳು , ವಿವಿದ ಕ್ಷೇತ್ರಗಳ ನೇತಾರರು ಉಪಸ್ತಿತರಿದ್ದರು.
ವಾಹನ ವ್ಯವಸ್ತೆಯ ಹಸ್ತಾಂತರ :
ಇದೆ ಸಂಧರ್ಭದಲ್ಲಿ ಕೆ ಐ ಸಿ ಯು ಎ ಇ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಯು ಎ ಇ ಯಲ್ಲಿ ಕಾರ್ಯಾಚರಿಸುತ್ತಿರುವ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಸದಸ್ಯರ ವತಿಯಿಂದ ಅಕಾಡೆಮಿಯ ಸೌಲಭ್ಯಕ್ಕಾಗಿ ವಾಹನದ ವ್ಯವಸ್ತೆಯ ಹಸ್ತಾಂತರ ಕಾರ್ಯಕ್ರಮವು ನಡೆಯಲಿದೆ ,
ಕಾರ್ಯಕ್ರಮವನ್ನು kicrlive.com ಮತ್ತು www.ourkic/youtube.com ಮೂಲಕ ವೀಕ್ಷಿಸಬಹುದು ಎಂದು ಸಂಘಟಕರು ತಿಳಿಸಿರುತ್ತಾರೆ