ಗಲ್ಫ್

ಕೆ.ಐ.ಸಿ ದುಬೈ ಸಮಿತಿ ಸಾರಥಿಗಳಾಗಿ ಎಸ್ . ಎಂ ಅಶ್ರಫ್ ಮಾಂತೂರ್  ಮತ್ತು ಮುಸ್ತಫಾ ಗೂನಡ್ಕ ಆಯ್ಕೆ

Pinterest LinkedIn Tumblr

nn

ದುಬೈ : ಕರ್ನಾಟಕ   ಇಸ್ಲಾಮಿಕ್ ಸೆಂಟರ್ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಕಳೆದ ಹಲವಾರು ವರ್ಷಗಳಿಂದ ದುಬೈ ಯಾದ್ಯಂತ ಕಾರ್ಯಚರಿಸುತ್ತಾ ಬಂದಿದ್ದು , ಹಲವಾರು ಶಾಖಾ ಸಮಿತಿಗಳನ್ನು ಒಳಗೊಂಡಿರುವ ಕೆ.ಐ.ಸಿ ದುಬೈ ಸಮಿತಿಯ ಸಮಿತಿಯ ಮಹಾ ಸಭೆಯು ದಿನಾಂಕ 05/12/2014 ರಂದು ಕೆ.ಎಂ.ಸಿ.ಸಿ  ಸಭಾಂಗಣದಲ್ಲಿ ನಡೆಯಿತು. ಅತಾವುಲ್ಲಾ ಉಮರ್ ಮುಕ್ವೆ ರವರು ಕಿರಾ ಅತ್ ಪಠಣ ದೊಂದಿಗೆ ಚಾಲನೆಗೊಂಡ ಕಾರ್ಯಕ್ರಮದಲ್ಲಿ  ಸಯ್ಯದ್  ಕೆ.ಎಸ್  ಅಲಿ ತಂಙಲ್ ಕುಂಬೋಲ್ ರವರ ದುವಾನೆರವೇರಿಸಿ ಮಾತನಾಡಿ ಸಂಘಟನೆಗಳನ್ನು ಪೋಷಿಸುವುದರಿಂದ ನಮ್ಮ ಸಮುದಾಯದ ಒಳಗೆ ಸ್ನೇಹ ಸಂಭಂದಗಳು ಗಟ್ಟಿಯಾಗುತ್ತದೆ, ಅಲ್ಲದೆ ನಮ್ಮ ಜೀವನದಲ್ಲಿ ಯಶಸ್ಸನ್ನು ಕೂಡ ಕಾಣಲು ಸಾದ್ಯವಾಗುತ್ತದೆ. ನಾಳಿನ ಪರಲೋಕ ಜೀವನದಲ್ಲಿ ನಮಗೆ ಸಾಕ್ಷಿಯಾಗುವ ಸಲ್ಕರ್ಮಗಳಲ್ಲಿ ಒಂದಾಗಿರುತ್ತದೆ ದೀನೀ  ಸಂಘ ಸಂಸ್ಥೆಗಳನ್ನು ಪೋಷಿಸುವುದರ ಫಲ. ಆದರಿಂದ ವಿವಿದ ಪ್ರದೇಶಗಳ ಮಕ್ಕಳಿಗೆ  ಉಚಿತವಾಗಿ  ವಿದ್ಯಾರ್ಜನೆ ನೀಡುತ್ತಿರುವ ಕೆ.ಐ.ಸಿ ಕುಂಬ್ರ ಸ್ಥಾಪನೆಯೊಂದಿಗೆ ಕೈಜೋಡಿಸಿ ಕ್ರಿಯಾಶೀಲತೆಯಿಂದ ಹೆಜ್ಜೆ ಗಳನ್ನಿಡುವಂತೆ  ಕೇಳಿಕೊಂಡರು.

ನಂತರ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಉಸ್ತಾದ್ ಕಲ್ಲೇಗ ರವರು ಅತಿಥಿ ಗಳನ್ನೂ ಸ್ವಾಗತಿಸಿ ಕೆ ಐ ಸಿ ದುಬೈ ಸಮಿತಿಯ ಕಾರ್ಯ ವೈಖರಿಯ ಬಗ್ಗೆ ವಿವರಿಸಿ ಮುಂದಿನ ದಿನಗಳಲ್ಲಿ ನಮ್ಮ ಮೇಲಿನ ಹೆಚ್ಚಿನ ಜವಾಬ್ದಾರಿಯನ್ನು ಮನಗಂಡು ಉತ್ತಮ ರೀತಿಯಲ್ಲಿ ಕಾರ್ಯವೆಸಗುವಂತೆ  ವಿನಂತಿಸಿ ಕೊಂಡರು . ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ರವರು ಪ್ರಸಕ್ತ  ಸಾಲಿನ ವರದಿ ವಾಚನದೊಂದಿಗೆ  ಲೆಕ್ಕ ಪತ್ರಗಳನ್ನು ಮಂಡಿಸಿದರು .

ನಂತರ  ಅಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ  ರವರು ಹಾಲಿ ಸಮಿತಿಯನ್ನು ಬರಕಾಸ್ತು ಗೊಳಿಸಿ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಕೆ ಐ ಸಿ ಯೊಂದಿಗೆ ನಿಕಟ ಪೂರ್ವ ಸಂಭಂದವನ್ನು ಇಟ್ಟುಕೊಂಡು ಹೆಚ್ಚಿನ ಎಲ್ಲ ಸಮಯಗಳಲ್ಲಿ ಕೆ ಐ ಸಿ ಯ ಹಾಗು ಜಾಮಿಅ  ಅಲ್  ಕೌಸರ್ ಶರೀಅತ್ ಕಾಲೇಜಿನ ಅಬಿವೃದ್ದಿಯನ್ನು  ಮಾತ್ರ ನಿರೀಕ್ಷಿಸುತ್ತಾ ಬಂದಿರುವ ತಮ್ಮೆಲ್ಲರ ಸೇವಾ ಮನೋಭಾವವನ್ನು ಪ್ರಶಂಸಿಸಿ ಮುಂದಿನ ಅವದಿಯಲ್ಲಿ  ಇನ್ನಷ್ಟು ಉತ್ತಮ ರೀತಿಯಲ್ಲಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು. ನಂತರ ಬದ್ರುದ್ದೀನ್ ಹೆಂತಾರ್ ರವರ ನೇತೃತ್ವದಲ್ಲಿ ನೂತನ ಸಮಿತಿ ಪಧಾಧಿಕಾರಿಗಳ ಆಯ್ಕೆ ಗೊಳಿಸಲಾಯಿತು.

ಅದರಂತೆ ಸದಸ್ಯರ ಅಪೇಕ್ಷೆಯಂತೆ ನೂತನ ಸಾಲಿನ ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಬೈತಡ್ಕ  ಅದ್ಯಕ್ಷರಾಗಿ ಎಸ್  ಎಮ್  ಅಶ್ರಫ್ ಮಾಂತೂರ್  , ಪ್ರಧಾನ ಕಾರ್ಯದರ್ಶಿ ಗಳಾಗಿ ಮುಸ್ತಫಾ ಗೂನಡ್ಕ  ಕೋಶಾಧಿಕಾರಿ ಶರೀಫ್ ಕಾವು ರವರು ಆಯ್ಕೆ ಗೊಂಡರು. ನಂತರ ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಸಮಿತಿ ಅದ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ , ಉಪಾದ್ಯಕ್ಷರಾದ ಅಬ್ದುಲ್ ರಝಾಕ್ ಅಜ್ಮಾನ್ ಸಮಿತಿ ಅದ್ಯಕ್ಷರಾದ ಅಸೀಫ್ ಬಿ ಸಿ ರೋಡ್ , ನೌಶದ್ ಫೈ ಝಿ ಮೊದಲಾದವರು ಸಂದರ್ಬೋಜಿತವಾಗಿ ಮಾತನಾಡಿ ಮುಂದಿನ ದಿನಗಳಲ್ಲಿ ಕೆ ಐ ಸಿ ಯು ಇನ್ನಷ್ಟು ಉತ್ತಮ ರೀತಿಯಲ್ಲಿ ಕಾರ್ಯಚರಿಸಿ ತಾಯಿನಾಡಿನ ವಿಧ್ಯಾ ಕೇಂದ್ರ ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್ ಕುಂಬ್ರ ಇದರ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.

ಪಧಾಧಿಕಾರಿಗಳು
ಗೌರವಾಧ್ಯಕ್ಷರು : ಅಬ್ದುಲ್ ಖಾದರ್ ಬೈತಡ್ಕ
ಅದ್ಯಕ್ಷರು : ಎಸ್  ಎಮ್  ಅಶ್ರಫ್ ಮಾಂತೂರ್  ,
ಉಪಾಧ್ಯಕ್ಷರು : ರಫೀಕ್ ಅತೂರ್ ಸುಲೈಮಾನ್ ಮೌಲವಿ ಕಲ್ಲೇಗ , ಇಕ್ಬಾಲ್ ಬೈತಡ್ಕ
ಪ್ರಧಾನ ಕಾರ್ಯದರ್ಶಿ : ಮುಸ್ತಫಾ ಗೂನಡ್ಕ
ಕಾರ್ಯದರ್ಶಿ : ಅಶ್ರಫ್ ಪರ್ಲಡ್ಕ ಅಸೀಫ್ ಮರೀಲ್ ರಫೀಕ್ ಮುಕ್ವೆ
ಕೋಶಾಧಿಕಾರಿ : ಶರೀಫ್ ಕಾವು
ಸಂಘಟನ ಕಾರ್ಯದರ್ಶಿ : ಹಮೀದ್ ಮಣಿಲ , ನವಾಝ್ ಬಿ. ಸಿ ರೋಡ್ ಅಬ್ಬಾಸ್ ಕೇಕುಡೆ
ಲೆಕ್ಕ ಪರಿಶೋಧಕರು : ಹಬೀಬ್ ತಂಙಲ್ , ರಶೀದ್ ಮುನ್ನ
ಸಲಹಾ ಸಮಿತಿ : ಅಸ್ಕರಲಿ ತಂಙಲ್ ಕೊಲ್ಪೆ , ಅಬ್ದುಲ್ ರಝಾಕ್ ಬುಳೇರಿಕಟ್ಟೆ , ಝಕರಿಯ ಮುಲಾರ್ , ಅಬ್ದುಲ್ ಸಲಾಂ ಬಪ್ಪಳಿಗೆ , ಬದ್ರುದ್ದೀನ್ ಹೆಂತಾರ್ ನೂರ್ ಮುಹಮ್ಮದ್ ನೀರ್ಕಜೆ ಅಶ್ರಫ್ ಅರ್ತಿಕೆರೆ
ಧಾರ್ಮಿಕ ಸಲಹೆಗಾರರು ; ನೌಶದ್ ಫೈಝಿ, ಶಂಸುದ್ದೀನ್ ಹನೀಫಿ , ಅಬ್ದುಲ್ಲಾ ನಈಮಿ , ಅಬ್ದುಲ್ ರಝಾಕ್ ಮುಸ್ಲಿಯಾರ್ , ಅಶ್ರಫ್ ಅಮ್ಜದಿ .
ಸಂಚಾಲಕರು : ಅಝೀಝ್ ಸೊರಕೆ , ಉಮರ್ ರೆಂಜಲಾಡಿ, ಶಂಸುದ್ದೀನ್ ಮಲಪ್ಪುರಂ , ಅಬ್ದುಲ್ ರಝಾಕ್ ನೀರ್ಕಜೆ , ರಿಫಾಯಿ ಗೂನಡ್ಕ , ಜುನೈದ್ ಪುತ್ತೂರು, ಅಸೀಫ್ ಕೂರ್ನಡ್ಕ , ಶಾಹುಲ್ ಬಿ ಸಿ ರೋಡ್ , ಸಲೀಂ ಮಿತ್ತೂರು, ರಹ್ಮಾನ್ ಪೆರಾಜೆ .
ಪತ್ರಿಕಾ ಪ್ರತಿನಿಧಿ : ಜಬ್ಬಾರ್ ಬೈತಡ್ಕ, ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ , ಅತಾವುಲ್ಲಾ ಉಮರ್ ಮುಕ್ವೆ
ಹಾಗು ಅಧೀನ ಘಟಕಗಳ ಅಧ್ಯಕ್ಷರು , ಕಾರ್ಯದರ್ಶಿ ಹಾಗು ಕೊಶಾಧಿಕಾರಿಗಳನ್ನು ಕಾರ್ಯಕಾರಿ ಸಮಿತಿ ಪಧಾಧಿಕಾರಿಗಳನ್ನಾಗಿ ನೇಮಿಸಲಾಯಿತು.

Write A Comment