ಕರಾವಳಿ

ಡಿ.22, 23: ಕುಂಬ್ರ ಕೆಐಸಿಯಲ್ಲಿ ದ್ವಿದಿನ ಇಸ್ಲಾಮಿಕ್ ಸಮಾವೇಶ

Pinterest LinkedIn Tumblr

1509126_902335116444897_6722843804158289110_n

ಪುತ್ತೂರು: ಪ್ರತಿಷ್ಠಿತ ಬಹುಮುಖ ವಿದ್ಯಾಸಂಸ್ಥೆಯಾದ ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯ ಅಧೀನದಲ್ಲಿ ಕಾರ್ಯವೆಸಗುತ್ತಿರುವ ಧಾರ್ಮಿಕ-ಲೌಕಿಕ ಸಮನ್ವಯ ವಿದ್ಯಾಕೇಂದ್ರ ಜಾಮಿಅಃ ಅಲ್ ಕೌಸರ್ ಇದರ ಹಾಸ್ಟೆಲ್ ಕಟ್ಟಡದ ಉದ್ಘಾಟನೆ ಹಾಗೂ ಅರಿಯಿರಿ ವಿಶ್ವ ಪ್ರವಾದಿಯನ್ನು ಎಂಬ ಧ್ಯೇಯವಾಕ್ಯದಡಿ ದ್ವಿದಿನ ಬೃಹತ್ ಇಸ್ಲಾಮಿಕ್ ಸಮಾವೇಶ ಡಿಸೆಂಬರ್ 22, 23 ರಂದು ಕುಂಬ್ರ ಕಾಲೇಜು ಮೈದಾನದಲ್ಲಿ ಜರಗಲಿದೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಅಂತಾರಾಷ್ಟ್ರ ಖ್ಯಾತ ವಾಗ್ಮಿ, ಬಹುಭಾಷ ಪಂಡಿತ, ಚಿಂತಕ ಸಿಂಸಾರುಲ್ ಹಕ್ ಹುದವಿ ಅಬುದಾಬಿ ಇವರು ಭಾಗವಹಿಸಲಿದ್ದಾರೆ.

ಧಶಕಗಳಿಂದ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಹರಿದಾಡುತ್ತಾ , ಧಾರ್ಮಿಕ , ಲೌಕಿಕ ಸಮನ್ವಯ ವಿಧ್ಯಾಭ್ಯಾಸ ನೀಡುತ್ತಾ ಬಂದಿರುವ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಅಧೀನ ವಿಧ್ಯಾ ಕೇಂದ್ರ   ಜಾಮಿಅ ಅಲ್  ಕೌಸರ್ ಶರೀಅತ್  ಕಾಲೇಜ್ .  ಸಮುದಾಯದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅರ್ಹತಾ ಪರೀಕ್ಷೆಗಳ ಮೂಲಕ ಗುರುತಿಸಿಕೊಂಡು  ಉಚಿತ ಊಟ ವಸತಿ ಯೊಂದಿಗೆ  ಸುಧೀರ್ಗ ಎಂಟು ವರ್ಷಗಳ ವಿಧ್ಯಾರ್ಜನೆ  ನಂತರ  ಧಾರ್ಮಿಕ ಕ್ಷೇತ್ರದಲ್ಲಿ ಫಾಝಿಲ್  ಕೌಸರಿ ಹಾಗು ಲೌಕಿಕ ಕ್ಷೇತ್ರದಲ್ಲಿ ಬಿ ಎ ಪದವಿಯೊಂದಿಗೆ  ಪಠೇತರ ಚಟುವಟಿಕೆಗಳಲ್ಲೂ ತರಬೇತಿ ನೀಡಲಾಗುತ್ತಿದೆ.

10846188_457288934412188_8329613388916328315_n

10428714_457293887745026_4993889095213716745_n

ನುರಿತ ಅಧ್ಯಾಪಕ ವೃಂದವನ್ನು ಹೊಂದಿರುವ ಈ ವಿಧ್ಯಾ ಕೇಂದ್ರವು ನುರಿತ ಕಂಪ್ಯೂಟರ್ ತರಬೇತಿ, ಗ್ರಂಥಾಲಯ , ಹಾಸ್ಟೆಲ್ ಕಟ್ಟಡ  ಕ್ಯಾಂಟೀನ್ ಕಟ್ಟಡಗಳನ್ನು ಹೊಂದಿದೆ. ಪ್ರಭಾಷಣ  ಲೋಕವನ್ನೇ ತನ್ನತ್ತ ಸೆಳೆದು ಕೊಂಡಿರುವ ಕೌಸರಿ  ಗಳೆಂಬ  ಯುವ ಪ್ರತಿಭೆಗಳು ಇಂದು ಸಮಾಜದಲ್ಲಿ ಎಲ್ಲ ಸಹೋದರ ಧರ್ಮಿಯರಿಂದಲೂ ಆಹ್ವಾನಿತರಾಗಿರುವುದು ಈ ವಿಧ್ಯಾ ಸ್ಥಾಪನೆಯ ಇನ್ನೊಂದು ವೈಶಿಷ್ಟ್ಯತೆ.  ಮೂರು ವರ್ಷಗಳ ಹಿಂದೆ ಐತಿಹಾಸಿಕ ಸನದು ದಾನ ಮಹಾ ಸಮ್ಮೇಳನದ ನಂತರ ಇಂದು ಮತ್ತೊಂದು ಚರಿತ್ರಾರ್ಹ ಘಟನೆಗೆ ಮುಂದಡಿ ಇಡುತ್ತಿರುವ ಈ ಮಹಾನ್ ಸ್ಥಾಪನೆಯು ಅಂತರಾಷ್ಟ್ರೀಯ ಪ್ರಭಾಷಣ ಕಾರ,  ಬ್ರಿಟಿಷ್ ಇಂಟರ್ನೇಶನಲ್ ಸ್ಕೂಲ್ ಅಬುಧಾಬಿ ಇದರ ಇಸ್ಲಾಮಿಕ್ ಸ್ಟಡೀಸ್ ಮತ್ತು ಸೋಸಿಯಲ್ ಸ್ಟಡೀಸ್ ವಿಭಾಗದ ಮುಖ್ಯಸ್ಥರು ಖ್ಯಾತ ವಾಗ್ಮಿಯೂ ತನ್ನ ಸುಮಧುರ ಕಂಠದಿಂದ ಕುರ್ ಆನಿನ ವ್ಯಾಖ್ಯಾನ ವನ್ನು  ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿ  ಅದೆಷ್ಟೋ ಅಭಿಮಾನಿ ವೃಂದವನ್ನು ತನ್ನದಾಗಿಸಿ ಕೊಂಡಿರುವ ಬಹು ಸಿಂಸಾರುಲ್  ಹಖ್ ಹುದವಿಯವರನ್ನು ಡಿಸೆಂಬರ್ 22, 23 ಮತ್ತು ರಂದು ತನ್ನತ್ತ ಆಹ್ವಾನಿಸಿಕೊಂಡಿದೆ

ದಿನಾಂಕ 22 ರಂದು ಸೋಮವಾರ ಬೆಳಗ್ಗೆ ನಡೆಯಲಿರುವ ಹಾಸ್ಟೆಲ್ ಕಟ್ಟಡದ ಉದ್ಘಾಟನೆಯನ್ನು ಸಮಸ್ತ ಉಲಮಾ ಸಂಘಟನೆ ಕೋಶಾಧಿಕಾರಿಯೂ, ಕಾಞಂಗಾಡ್ ಖಾಝಿಯೂ ಆದ ಅಸ್ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ದ.ಕ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದು, ಸಮಸ್ತದ ಕೇಂದ್ರ ಮುಶಾವರಾ ಸದಸ್ಯರಾದ ಅಲ್‌ಹಾಜ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಅವರು ಉದ್ಘಾಟಿಸಲಿದ್ದಾರೆ. ಅಸ್ಸಯ್ಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಅವರು ದುವಾಶಿರ್ವಚನ ನೀಡಲಿದ್ದು ಖ್ಯಾತ ವಿದ್ವಾಂಸ ಮುಸ್ತಫಲ್ ಫೈಝಿ ತಿರೂರ್‌ರವರಿಂದ ಅಹ್ಲುಸುನ್ನ ವಿಷಯದಲ್ಲಿ ಅಧ್ಯಯನ ಶಿಬಿರ ನಡೆಯಲಿದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಕೇರಳದ ನಂದಿ ಜಾಮಿಅಃ ದಾರುಸ್ಸಲಾಂ ಅರಬಿಕ್ ಕಾಲೇಜಿನ ಪ್ರೊ. ಎ.ವಿ. ಅಬ್ದುರ್ರಹ್ಮಾನ್ ಮುಸ್ಲಿಯಾರ್, ಪಳ್ಳಿಕೆರೆ ಖಾಝಿ ಪಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ಪೈವಳಿಕೆ, ಕೊಡಗು ಜಿಲ್ಲಾ ಉಪ ಖಾಝಿ ಅಬ್ದುಲ್ಲಾ ಮುಸ್ಲಿಯಾರ್, ಕೆ.ಕೆ. ಮಾಹಿನ್ ಮುಸ್ಲಿಯಾರ್ ತೊಟ್ಟಿ, ಹಾಫಿಳ್ ಸಯ್ಯದ್ ಸ್ವಾದಿಖ್ ಮೈಸೂರು, ಪುತ್ತೂರು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಹಾಜಿ ಕಮ್ಮಾಡಿ, ಕಾಂಞಂಗಾಡ್ ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಮೆಟ್ರೋ ಮುಹಮ್ಮದ್ ಹಾಜಿ, ಕೆಐಸಿ ಯುಎಇ ನ್ಯಾಷನಲ್ ಕಮಿಟಿ ಅಧ್ಯಕ್ಷ ಕಕ್ಕಿಂಜೆ ಹಾಜಿ ಮೊಯಿದೀನ್ ಕುಟ್ಟಿ ದಿಬ್ಬ, ಕುಂಬ್ರ ಕೆಐಸಿ ಅಧ್ಯಕ್ಷ ಆಕರ್ಷನ್ ಅಹ್ಮದ್ ಹಾಜಿ, ಉದ್ಯಮಿಗಳಾದ ಹಾಜಿ ಉಮರಬ್ಬ ಏರ್‌ಲೈನ್ಸ್ ಮಂಗಳೂರು, ಬೆಂಗಳೂರು ಆರ್.ಎಂ.ಗ್ರೂಪ್ ಮುಖ್ಯಸ್ಥ ಹಾಜಿ ಅಬ್ದುಲ್ ಖಾದರ್ ಕಾಂಞಂಗಾಡ್, ಜೀನೆಕ್ಸ್ ಐಟಿ ಸೊಲ್ಯುಷನ್ ವ್ಯವಸ್ಥಾಪಕ ನಿರ್ದೇಶಕ ಶಾಕಿರ್ ಹುಸೈನ್ ದೆಹಲಿ, ಎಸ್.ಎಂ ಸಿದ್ದೀಕ್ ಹಾಜಿ ಶೇಖಮಲೆ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

ದಿನಾಂಕ 22 ಮತ್ತು 23 ರಂದು ಮಗ್ರಿಬ್ ನಮಾಝಿನ ಬಳಿಕ ಗಂಟೆ 7 ಕ್ಕೆ ಸರಿಯಾಗಿ ನಡೆಯುವ ಇಸ್ಲಾಮಿಕ್ ಸಮಾವೇಶದಲ್ಲಿ ಗಲ್ಫ್ ರಾಷ್ಟ್ರದ ಅಬುದಾಬಿ ಬ್ರಿಟೀಷ್ ಸ್ಕೂಲ್‌ನ ಸಮಾಜಶಾಸ್ತ್ರ ಮತ್ತು ಇಸ್ಲಾಂ ವಿಭಾಗದ ಮುಖ್ಯಸ್ಥರೂ ಅಂತಾರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಬಹುಭಾಷಾ ಭಾಷಣಕಾರ ಸಿಂಸಾರುಲ್ ಹಖ್ ಹುದವಿಯವರಿಂದ ಅರಿಯಿರಿ ವಿಶ್ವ ಪ್ರವಾದಿಯನ್ನು ಎಂಬ ವಿಷಯದಡಿ ವಿಶೇಷ ಪ್ರಭಾಷಣ ನಡೆಯಲಿದೆ. ಇದೇ ಸಂದರ್ಭ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆ ಮಾಡಲಾಗಿದೆ.

Write A Comment