ಗಲ್ಫ್

ಜನ್ಮ ನೀಡಿದ ಮಣ್ಣು ಹಾಗೂ ಅನ್ನ ನೀಡಿದ ದೇಶವನ್ನು ಪ್ರೀತಿಸುವವನೇ ನೈಜ ಮಾನವ : ದುಬೈ ಯಲ್ಲಿ  ಕೆ ಐ  ಸಿ ಗ್ರಾಂಡ್ ಮೀಟ್ ನಲ್ಲಿ ಮೊಹಮ್ಮದ್ ಅನೀಸ್ ಕೌಸರಿ 

Pinterest LinkedIn Tumblr

KIC Dubai-Dece 18- 2014_001

ಮನುಷ್ಯನ ಜೀವನದಲ್ಲಿ ಹೆತ್ತ ತಂದೆ ತಾಯಿಯ ನಂತರದ ಸ್ಥಾನವಾಗಿ ಹೆತ್ತ ಭೂಮಿ ಹಾಗೂ ಅನ್ನ ನೀಡಿದ ದೇಶ ಇವೆರಡನ್ನು ಪ್ರೀತಿಸದವನು ನೈಜ ಮನುಷ್ಯನಾಗಲು ಸಾಧ್ಯವಿಲ್ಲ. ದೇಶ ಪ್ರೇಮ ಎಂಬುದು ಇಸ್ಲಾಮಿನ ಆಶಯಗಳಲ್ಲಿ ಒಂದಾಗಿದೆ. ಭಾರತದ ಮಣ್ಣಿನಲ್ಲಿ ಹುಟ್ಟಿ ಬೆಳೆದು ತನ್ನ ಜೀವನೋಪಾಯಕ್ಕಾಗಿ ಅರಬ್ ರಾಷ್ಟ್ರಕ್ಕೆ ಕಾಲಿಟ್ಟ ನಮ್ಮನ್ನು ಅತ್ಯಂತ ಸಂತೋಷದಿಂದ ಜಾತಿ ಮತ ಭೇದವಿಲ್ಲದೆ  ಜೀವಿಸಲು ಅವಕಾಶ ಮಾಡಿಕೊಟ್ಟು , ತಾಯಿನಾಡಿನ ಸಂಘಟನೆಗಳನ್ನು ಪೋಷಿಸಲು ಅನುವು ಮಾಡಿಕೊಟ್ಟ ಅರಬ್ ರಾಷ್ಟ್ರದ ಆಡಳಿತಾಧಿಕಾರಿಗಳ ಮನಸ್ಸನ್ನು ತುಂಬು ಹೃದಯದಿಂದ ಅಭಿನಂದಿಸಬೇಕು. ಯಾವತ್ತೂ ಕೇಡನ್ನು ಬಯಸದೆ ಒಳಿತಿಗಾಗಿ ಪ್ರಾರ್ತಿಸೋಣ ಎಂದು ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್ ಕುಂಬ್ರ ಇದರ ಪ್ರಥಮ ಸಾಲಿನ ಬಿರುದುದಾರಿ ಮೊಹಮ್ಮದ್ ಅನೀಸ್ ಕೌಸರಿ ಯವರು ದುಬೈ ಜೋರ್ಡಾಣಿಯನ್ ಸೋಶಿಯಲ್ ಕ್ಲಬ್ ಸಭಾಂಗಣದಲ್ಲಿ ನಡೆದ ಕೆ ಐ ಸಿ ಗ್ರಾಂಡ್ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಕಾರರಾಗಿ ಮಾತನಾಡಿದರು.

ಕೆ ಐ ಸಿ ಯಂತಹ ವಿಧ್ಯಾಸ್ಥಾಪನೆಗಳನ್ನು ಪೋಷಿಸಲು ತಮ್ಮಂತಹ ದೀನಿ ಸ್ನೇಹಿಗಳೊಂದಿಗೆ ಇಲ್ಲಿನ ಆಡಳಿತಾಧಿಕಾರಿಗಳ ಪಾತ್ರವು ಅಷ್ಟೇ ಪ್ರಶಂಸನೀಯ. ೭ ನೇ ತರಗತಿಯಿಂದ ಹಿಡಿದು ಲೌಕಿಕವಾಗಿ ಬಿ ಎ ಪದವಿ ಧಾರ್ಮಿಕವಾಗಿ ಫಾಝಿಲ್ ಕೌಸರಿಗಳಾಗಿ ಅತ್ಯಂತ ಹೆಮ್ಮೆಯಿಂದ ಈ ಸಮುದಾಯದ ಮುಂದೆ ನಡೆದಾಡಲು ಸಾದ್ಯವಿದ್ದಲ್ಲಿ ಅದು ಕೆ ಐ ಸಿ ಎಂಬ ಮಹತ್ತರವಾದ ಸಂಘಟನೆಯಿಂದ ಮಾತ್ರ ಸಾದ್ಯವಾಗಿದ್ದು ಇಂತಹ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದು ಅದೆಷ್ಟೋ ತಲೆಮಾರು ಗಳು ಅನಿಷ್ಟ, ಮೂಡನಂಬಿಕೆ, ಹಾಗೂ ಲೌಕಿಕ ಸುಖಕ್ಕಾಗಿ ತನ್ನ ಪರ ಲೋಕ ವನ್ನೇ ಮರೆತು ಹೆತ್ತ ತಂದೆ ತಾಯಿಯನ್ನು ಕಣ್ಣೀರಿನ ಕಡಲಲ್ಲಿ ತೇಳುವಂತೆ ಮಾಡುತ್ತಿರುವ ಅದೆಷ್ಟೋ ಘಟನೆಗಳನ್ನು ಪತ್ರಿಕೆಗಳ ಮೂಲಕ ತಿಳಿಕೊಂಡಿದ್ದೇವೆ. ಇವೆಲ್ಲದಕ್ಕೂ ನಾಂದಿ ಹಾಡಬೇಕಾದರೆ ಕೆ ಐ ಸಿ ಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಸೋಣ ಎಂದು ಕರೆ ನೀಡಿದರು.

KIC Dubai-Dece 18- 2014_002

KIC Dubai-Dece 18- 2014_003

KIC Dubai-Dece 18- 2014_004

KIC Dubai-Dece 18- 2014_005

KIC Dubai-Dece 18- 2014_006

KIC Dubai-Dece 18- 2014_007

KIC Dubai-Dece 18- 2014_008

ಇನ್ನೋರ್ವ ಮುಖ್ಯ ಪ್ರಭಾಷಣಕಾರ ಬ್ರಿಟಿಷ್ ಇಂಟರ್ನೇಶನಲ್ ಸ್ಕೂಲ್ ಅಬುಧಾಬಿ ಇದರ ಇಸ್ಲಾಮಿಕ್ ಸ್ಟಡೀಸ್ ಮತ್ತು ಸೋಸಿಯಲ್ ಸ್ಟಡೀಸ್ ವಿಭಾಗದ ಮುಖ್ಯಸ್ಥರು ಖ್ಯಾತ ವಾಗ್ಮಿಯೂ ಆದ ಸಿಮ್ಸಾರುಲ್ ಹಖ್ ಹುದವಿ ಯವರು ಮಾತನಾಡಿ, ಯುಎಇ ರಾಷ್ಟ್ರ ಹುಟ್ಟಿಕೊಂಡ ರೀತಿ ಮತ್ತು ಅದರ ಅಂತ್ಯದ ಬಗ್ಗೆ ವಿವರಿಸುತ್ತಾ ಖುರಾನ್ ನಲ್ಲಿ ಉಲ್ಲೇಖವಿದೆ ಎಂಬುವುದನ್ನು ಖುರಾನ್ ಸೂಕ್ತದ ಮೂಲಕ ಚರಿತ್ರೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಬ್ರಿಟಿಷ್ ಕಪಿ ಮುಷ್ಟಿಯಿಂದ ಮುಕ್ತಿ ಹೊಂದಿ ತೈಲ ಉತ್ಪಾದನೆಯಲ್ಲಿ ತೊಡಗಿಸಿ ಇಂದು ಅಭಿವೃದ್ದಿಯಿಂದ ಅಭಿವೃದ್ದಿಯತ್ತ ಸಾಗುತ್ತಿದೆ. ಇಲ್ಲಿ ನಿಮ್ಮನ್ನು ಅಲ್ಲಾಹು ಕಷ್ಟಗಳನ್ನು ನೀಡಿ ಪರೀಕ್ಷಿಸಬಹುದು ಅದೇ ರೀತಿ ನಿಮ್ಮ ಆಧ್ಯಾತ್ಮಿಕತೆಗೆ ಹಾನಿಕರವಾದ ಮಾರ್ಗಗಳನ್ನು ತೆರೆದು ನಿಮ್ಮನ್ನು ಪರೀಕ್ಷಿಸಬಹುದು ಇವೆಲ್ಲವನ್ನೂ ಹತೋಟಿಯಲ್ಲಿಟ್ಟರೆ ನಿಮ್ಮ ಪರಲೋಕದ ಜೀವನ ವಿಜಯ ಸಾಧ್ಯ ಎಂದು ಹೇಳಿದರು.

ಆರಂಭದಲ್ಲಿ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಸದಸ್ಯರು ಗೌರವಾನ್ವಿತ ಅತಿಥಿ ಗಳನ್ನೂ ದಫ್ಫ್ ಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆ ಬರ ಮಾಡಿಕೊಂಡರು . ನಂತರ ಕುಂಬೋಲ್ ಕುಟುಂಬದ ಸುಪ್ರಸಿದ್ದ ಅಸಯ್ಯದ್ ಅಲಿ ತಂಙಲ್ ಕುಂಬೋಲ್ ಪ್ರಾರ್ಥಿಸಿ ಮಾತಾನಾಡಿದ ಅವರು ಕೆ ಐ ಸಿ ಎಂಬ ಸ್ಥಾಪನೆಯು ಇಂದು ಕೇವಲ ಪುತ್ತೂರ್ ತಾಲೂಕಿಗೆ ಸೀಮಿತವಾಗಿರದೆ ರಾಜ್ಯದ ನಾನಾ ಕಡೆಗಳಲ್ಲಿ ತನ್ನನ್ನು ಪರಿಚಯಿಸಿದೆ. ನಮ್ಮ ಸಂಸ್ಥೆಯಲ್ಲಿ ಕಲಿತ ಯುವ ಪ್ರತಿಭೆಗಳು ಇಂದು ವಿವಿದ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ಅವೆಲ್ಲದಕ್ಕೂ ತಮ್ಮಂತಹ ದಾನಿಗಳ ಸಹಕಾರವೇ ಕಾರಣ. ಅವೆಲ್ಲದಕ್ಕಿಂತಲೂ ಮಿಗಿಲಾಗಿ ಸಂಘ ಸಂಸ್ಥೆಗಳ ಪೋಷಣೆಗಾಗಿ ಯು ಎ ಇ ಯಲ್ಲಿ ಅನುವು ಮಾಡಿಕೊಟ್ಟ ಇಲ್ಲಿನ ಆಡಳಿತಾಧಿಕಾರಿಗಳನ್ನು ಸ್ಮರಿಸಿಕೊಂಡರು. ನಂತರ ಕೆ ಐ ಸಿ ಹಳೆ ವಿದ್ಯಾರ್ಥಿ ಮಜೀದ್ ಬಾಲಾಯರವರ ಕಿರಾಅತ್ ಪಠಣ ದೊಂದಿಗೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ದೊರಕಿತು.

KIC Dubai-Dece 18- 2014_009

KIC Dubai-Dece 18- 2014_010

KIC Dubai-Dece 18- 2014_011

KIC Dubai-Dece 18- 2014_012

KIC Dubai-Dece 18- 2014_013

KIC Dubai-Dece 18- 2014_014

ಬಳಿಕ ಸ್ವಾಗತ ಭಾಷಣವನ್ನು ಕೆ.ಐ.ಸಿ ಗ್ರಾಂಡ್ ಮೀಟ್ – 2014 ಚೇರ್ಮನ್ ಅಲ್ತಾಫ್ ಪರಂಗಿಪೇಟೆ ಯವರು ನಿರ್ವಹಿಸಿ ತಾಯ್ನಾಡಿನಿಂದ ಆಗಮಿಸಿದ ಗೌರವಾನ್ವಿತ ಅತಿಥಿ ವರ್ಗದವರನ್ನು ಹಾಗೂ ಸನ್ಮಾನ ಸ್ವೀಕರಿಸಲು ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.

ಬಳಿಕ ಯುಎಇ ರಾಷ್ಟ್ರ ಗೀತೆಯನ್ನು ಪುಟಾಣಿಗಳಾದ ಮಾಸ್ಟರ್ ಸವಾದ್, ಮಾಸ್ಟರ್ ಸಿನಾನ್, ಮಾಸ್ಟರ್ ಕಿನಾನ್, ಅಸ್ರಿಯ ಅಶ್ರಫ್, ಆಶಿಕ್ ಅಲಿ ತಂಙಳ್, ಬೇಬಿ ಸನ ಮೊದಲಾದವರು ಜೊತೆಯಾಗಿ ಹಾಡಿ ಯುಎಇ ರಾಷ್ಟ್ರೀಯ ದಿನಾಚರಣೆಗೆ ಗೌರವ ಸಲ್ಲಿಸಿದರು. ಗ್ರಾಂಡ್ ಮೀಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಆರ್.ಎಂ ಗ್ರೂಪ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ ರವರು ಕೆ.ಐ.ಐ ಸಂಸ್ಥೆಯಿಂದ ಯುವ ಜನಾಂಗಕ್ಕೆ ಅಗತ್ಯವಾದ ಉದ್ಯೋಗ ಸೃಷ್ಟಿಸುವಂತ ವೃತ್ತಿಪರ ಪಠ್ಯ ಕ್ರಮದ ವಿದ್ಯಾಭ್ಯಾಸ ಅಳವಡಿಕೆಗೆ ಹೆಚ್ಚಿನ ಒತ್ತು ಕೊಡಲು ಆಡಳಿತ ಮಂಡಳಿ ಮುಂದೆ ಬರಬೇಕಾಗಿದೆ. ಅದಕ್ಕೆ ಎಲ್ಲರ ಶ್ರಮ ಮಾತು ಸಹಕಾರ ಅಗತ್ಯವಿದೆ ಎಂದರಲ್ಲದೆ, ಬಡ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಡುವ ವಿಷಯದಲ್ಲಿ ಎಲ್ಲರೂ ಆತ್ಮ ವಿಮರ್ಶೆಮಾಡಿ ಜವಾಬ್ದಾರಿಯುತವಾಗಿ ಚಿಂತಿಸಬೇಕಾಗಿದೆ ಹಾಗೂ ಆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ ಎಂದು ಹೇಳಿದರು.

ಗ್ರಾಂಡ್ ಮೀಟ್ 2014 ಸ್ಮರಣಿಕೆ ನೀಡಿ ಸನ್ಮಾನಿಸಿದ ಕೆ.ಐ.ಸಿ ರಾಷ್ಟ್ರೀಯ ಸಮಿತಿ

ಕುಂಬ್ರ ಕೆ.ಐ.ಸಿ ವಿದ್ಯಾ ಕೇಂದ್ರದೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಹಲವಾರು ರೀತಿಯಲ್ಲಿ ನೆರವು ನೀಡುತ್ತಿರುವ ದಾನಿಗಳಾದ ನೋವೆ ಸೆಂಟೋಸ್ ಫ್ಯಾಶನ್ ಎಲ್.ಎಲ್.ಸಿ ಯುಎಇ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ಒಬೈದ್ ಸೈಫ್ ಅಲ್ ಅವಬೇದ್ ಅಲ್ ಮೆರ್ರಿ, ಗ್ರಾಂಡ್ ಮೀಟ್ ಪ್ರಾಯೋಜಕರಾದ ಖುಷಿ ಗ್ರೂಪ್ ಆಫ್ ಕಂಪೆನಿ ಮಾಲಿಕರಾದ ಶೈಖ್ ಮೊಹಮ್ಮದ್ ಶರೀಫ್, ರಾಸ್ ಅಲ್ ಖೈಮಾ ಸ್ಕಾಲರ್ಸ್ ಇಂಡಿಯನ್ ಶಾಲೆಯ ಪ್ರಾಂಶುಪಾಲ ಪ್ರೊ.ಅಬೂಬಕ್ಕರ್ ತುಂಬೆ, ರೌಫ್ ಹಾಜಿ, ಶಾಕಿರ್ ಹುಸೈನ್ ವ್ಯಸ್ಥಾಪಕ ನಿರ್ದೇಶಕ ಜೆನೆಕ್ಷ್ ಸಿಸ್ಟಂ ಐಟಿ ಸೊಲ್ಯುಸನ್ಸ್ ಕಂಪೆನಿ ದುಬೈ, ಅಬ್ದುಲ್ಲ ಮದುಮೂಲೆ ಹಣಕಾಸು ನಿರ್ವಾಹಕ ಝಾಯಿದ್ ಫೌಂಡೇಶನ್ ಅಬುಧಾಬಿ, ಮೊಹಮ್ಮದ್ ಅಶ್ರಫ್ ವ್ಯಸ್ಥಾಪಕ ನಿರ್ದೇಶಕ ಬ್ರಿಟೀಸ್ ಗ್ರೂಪ್ ಆಫ್ ಕಂಪೆನೀಸ್ ದುಬೈ, ಬಶೀರ್ ಬಂಟ್ವಾಳ ಅಸ್ಟೆರ್ ಗ್ರೂಪ್ಸ್ ದುಬೈ, ಹಾಜಿ ಮೊಹಮ್ಮದ್ ಕುಂಞಿ ಕೂಟತಾನ್ ಉದ್ಯಮಿ ಸೌದಿ ಅರೇಬಿಯಾ, ಬಶೀರ್ ಕನ್ನಿಂಗರ್ ಸಿ.ಇ.ಓ ಸಿಸ್ಟೆಕ್ನಿಕ್ ಸೊಲ್ಯುಸನ್ಸ್ ಯುಎಇ, ಜಾಫರ್ ತ್ರಿಸೂರು ವ್ಯಸ್ಥಾಪಕ ನಿರ್ದೇಶಕ ಅಲ್ ಬಶ್ ಜನರಲ್ ಟ್ರೇಡಿಂಗ್, ಮೊಹಮ್ಮದ್ ಖಾಲಿದ್ ವ್ಯಸ್ಥಾಪಕ ನಿರ್ದೇಶಕ ಲವೆಂದರ್ಸ್ ಶಿಪ್ಪಿಂಗ್ ಕಂಪೆನಿ ದುಬೈ, ಡಾ. ಎಂ.ಕೆ ಅಬ್ದುಲ್ ಹಾರಿಸ್ ವ್ಯಸ್ಥಾಪಕ ನಿರ್ದೇಶಕ ಎಫ್.ಆರ್.ಸಿ.ಪಿ ಕನ್ಸಲ್ಟೆಂಟ್ ಜನರಲ್ ವೈದ್ಯ ದುಬೈ, ನಾಸಿರ್ ನಂದಾವರ ಅಧ್ಯಕ್ಷರು ಇಂಡಿಯನ್ ಕಲ್ಚರಲ್ ಸೊಸೈಟಿ ಯುಎಇ, ಹನೀಫ್ ಬಲ್ಲೇರಿ ಐಟಿ ಪ್ರೋಗ್ರಾಮರ್ ಖಾಲಿಫಾ ಯುನಿವರ್ಸಿಟಿ ಅಬುಧಾಬಿ ಮೊದಲಾದವರನ್ನು ಕೆ.ಐ.ಸಿ ಗ್ರಾಂಡ್ ಮೀಟ್ 2014 ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಅಲ್ ಕೌಸರ್ ಯೂತ್ ವಿಂಗ್ ಸದಸ್ಯರಿಂದ ಕೆ ಐ ಸಿ ವಿಧ್ಯಾ ಸಂಸ್ಥೆಗೆ ವಾಹನದ ಕೀಲಿ ಹಸ್ತಾಂತರ
ಕೆ ಐ ಸಿ ಯು ಎ ಇ ಕೇಂದ್ರ ಸಮಿತಿಗೆ ಬೆನ್ನೆಲುಬಾಗಿ ನಿಂತಿರುವ ಯುವ ಸಂಘಟನೆ ಯಾದ ಅಲ್ ಕೌಸರ್ ಯೂತ್ ವಿಂಗ್ ಸದಸ್ಯರು ಕುಂಬ್ರ ಕಾರ್ಯವೆಸಗುತ್ತಿರುವ ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್ ಗೆ ಒಂದು ವಾಹನದ ವ್ಯವಸ್ಥೆಯ ಅನಿವಾರ್ಯತೆಯನ್ನು ಮನಗಂಡು ಹೊಸ ವಾಹನದ ಕೀಲಿ ಕೈ ಯನ್ನು ಅಸಯ್ಯದ್ ಅಲಿ ತಂಙಲ್ ಕುಂಬೋಲ್ , ಶೈಖುನ ಜಬ್ಬಾರ್ ಉಸ್ತಾದ್ ಮಿತ್ತಬೈಲ್ , ದಿವ್ಯ ಹಸ್ತದ ಮೂಲಕ ಕೆ ಐ ಸಿ ರಾಷ್ಟ್ರೀಯ ಸಮಿತಿಗೆ ಸಮರ್ಪಿಸಿದರು. ಇದೆ ಸಂಧರ್ಭದಲ್ಲಿ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಸದಸ್ಯರು ಸಯ್ಯದ್ ಅಲಿ ತಂಙಲ್ ಕುಂಬೋಲ್ , ಶೈಖುನ ಜಬ್ಬಾರ್ ಉಸ್ತಾದ್ ಮಿತ್ತಬೈಲ್, ಮೊಹಮ್ಮದ್ ಅನೀಸ್ ಕೌಸರಿ ಯವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಅಲ್ಲದೆ ಇದೆ ಸಂಧರ್ಭದಲ್ಲಿ ದುಬೈ ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಕೊನೆಯಲ್ಲಿ ದುವಾ ಆಶೀರ್ವಚನ ನೀಡಿ ಮಾತನಾಡಿದ ಶೈಖುನ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ರವರು ಮಾತನಾಡಿ ನನ್ನ ಶರೀರಕ್ಕೆ ನಡೆದಾಡುವ ಶಕ್ತಿ ಇಲ್ಲದಿದ್ದ ಕಾರಣ ನಾನು ಯು ಎ ಇ ಭೇಟಿ ನೀಡುವ ನಿರೀಕ್ಷೆ ಇರಲಿಲ್ಲ . ಆದರೂ ಕೆ ಐ ಸಿ ಸಂಘಟಕರ ಒತ್ತಾಯದ ಮೇರೆಗೆ ಬಂದಿದ್ದೇನೆ. ಅತ್ಯಂತ ಸಂತೋಷದಿಂದ ಬರಮಾಡಿಕೊಂಡ ಕೆ ಐ ಸಿ ಸಂಘಟಕರಿಗೆ ನಾನು ಅಭಾರಿಯಾಗಿದ್ದು ತಾನು ದುಡಿಯುತ್ತಿರುವ ರಾಷ್ಟ್ರದ ಮೇಲೆ ಆತ್ಮೀಯತೆ ಪ್ರೀತಿ ಸದಾ ನಿಮ್ಮಲ್ಲಿರಲಿ . ಯಾವತ್ತು ನೆಬಿ (ಸ ಅ ) ರ ಮೇಲೆ ಸ್ವಲಾತ್ ಹೇಲುತ್ತಾ ವರನ್ನು ಪ್ರೀತಿಸಿ , ಪ್ರವಾದಿಯವರನ್ನು ಪ್ರೀತಿಸದ ಹೊರತಾಗಿ ಅಲ್ಲಾಹನು ನಿಮ್ಮನ್ನು ಪ್ರೀತಿಸಲಾರ ಎಂದು ಹಿತಿವಚನದೊಂದಿಗೆ ಸಮಸ್ತ ಕೇರಳ ವಿಧ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಕಾರ್ಯವೆಸಗುತ್ತಿರುವ ಕೆ ಐ ಸಿ ಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಸಿ , ಇನ್ನೂ ಹೆಚ್ಹಿನ ಕೌಸರಿ ಗಳನ್ನೂ ಈ ಸಮುದಾಯಕ್ಕೆ ಪರಿಚಯಿಸಲು ತಾವೆಲ್ಲರೂ ಈ ಸಂಘಟನೆಯೊಂದಿಗೆ ಕೈ ಜೋಡಿಸುವಂತೆ ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಯುಎಇ ಯಾ ವಿವಿಧ ಎಮಿರೇಟ್ಸ್ ಗಳಿಂದ ಕೆ.ಐ.ಸಿ ಶಾಖಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದು ವಿವಿದ ರೀತಿಯಲ್ಲಿ ಸಹಕರಿಸಿದರು. ಅಲ್ಲದೆ ಅಲ್ ಕೌಸರ್ ಯೂತ್ ವಿಂಗ್ ಸದಸ್ಯರಿಂದ ಆಕರ್ಷಣೀಯ ದಫ್ ಪ್ರಧರ್ಷನವು ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಜಿ ಮೊಯ್ದೀನ್ ಕುಟ್ಟಿ ಕಕ್ಕಿಂಜೆ ವಹಿಸಿದ್ದರು. ಕೊನೆಯಲ್ಲಿ ಧನ್ಯವಾದವನ್ನು ಮುಸ್ತಫಾ ಗೂನಡ್ಕ ರವರು ಸಮರ್ಪಿಸಿದರು. ಅಲ್ ಕೌಸರ್ ಯೂತ್ ವಿಂಗ್ ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರೂ. ಕಾರ್ಯಕ್ರಮದ ನಿರೂಪಣೆಯನ್ನು ನೂರು ಮೊಹಮ್ಮದ ನೀರ್ಕಜೆ ಹಾಗೂ ಬಂದ್ರುದ್ದೀನ್ ಹೆಂತಾರ್ ನಿರ್ವಹಿಸಿದರು.

Write A Comment