ಕರಾವಳಿ

ಶಿಕ್ಷಕಿ ವೈಜಯಂತಿ ಹೆಗ್ಡೆಗೆ ಜಾಗತಿಕ ಪುರಸ್ಕಾರ ಪ್ರದಾನ.

Pinterest LinkedIn Tumblr

global_award_photo_1

ಮುಂಬಯಿ, ಡಿ.೦5 : ಉಡುಪಿ ಹಿರಿಯಡ್ಕದ ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆಯ ಆಂಗ್ಲ ಶಿಕ್ಷಕಿ ಶ್ರೀಮತಿ ವೈಜಂತಿ ಪ್ರಸಾದ್ ಹೆಗ್ಡೆ ಅವರು ಬ್ರಿಟೀಷ್ ಕೌನ್ಸಿಲ್‌ನ `ಎನ್‌ಹಾನ್ಸಿಂಗ್ ಕಾಂಪ್ರಿಹೆನ್‌ಶನ್ ಸ್ಕಿಲ್‌ಸ್ ಇಸ್ ಸ್ಟೂಡೆಂಟ್‌ಸ್ ಆಫ್ ಗ್ರೇಡ್-8′ ವಿಷಯದಲ್ಲಿ ಕ್ರಿಯಾ ಸಂಶೋಧನೆ ನಡೆಸಿದ ಸಲ್ಲಿಸಿದ ಪ್ರಬಂಧಕ್ಕೆ ಬ್ರಿಟೀಷ್ ಕೌನ್ಸಿಲ್‌ನ `ದ ಗ್ಲೋಬಲ್ ಟೀಚರ್ ಅಕ್ರೆಡಿಶನ್ ಅವಾರ್ಡ್-2014 ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ.

global_award_photo_2

ಕಳೆದ ಮಂಗಳವಾರ ನವ ದೆಹಲಿಯ ಕೆಂಪೆನ್‌ಸ್ಕಿ ಎಂಬಿಯಾನ್ಸ್ ಹೋಟೆಲ್‌ನ ಎಮರಲ್ಡ್ ಬಾಲ್‌ರೋಮ್ ಸಭಾಗೃಹದಲ್ಲಿ ನಡೆಸಲಾದ ಸಮಾರಂಭದಲ್ಲಿ ಲಂಡನ್‌ನ ಫೊಸ್ಟಾರ್ ಪಾರ್‌ಟ್ನಾರ್ ಆಡಳಿತ ನಿರ್ದೇಶಕಿ ಸುಸಾನ್ ಡೌಗಲ್ಸ್, ರಿಸರ್ಚ್ ಎಂಡ್ ಇವುಲೇಶನ್ ಎಂಡ್ ಇಂಫೆಕ್ಟ್ ಟೀಚ್ ಫಸ್ಟ್ ಸಂಸ್ಥೆಯ ನಿರ್ದೇಶಕ ಸಾಮ್ ಫ್ರೀಡಮ್, ನೇಶನಲ್ ಕಾಲೇಜ್ ಫಾರ್ ಸ್ಕೂಲ್ ಲೀಡರ್‌ಶಿಪ್‌ನ ನಿರ್ದೇಶಕ ಆಂಡೀ ಬಕ್ ಹಾಗೂ ಬ್ರಿಟೀಷ್ ಕೌನ್ಸಿಲ್ ಆಫ್ ಇಂಡಿಯಾ ಮತ್ತಿತರ ಗೌರವ್ವಾನಿತರು ಉಪಸ್ಥಿತರಿದ್ದು ಶಿಕ್ಷಕಿ ವೈಜಯಂತಿ ಹೆಗ್ಡೆ ಅವರಿಗೆ ಪುರಸ್ಕಾರ ಪ್ರದಾನಿಸಿ ಗೌರವಿಸಿದರು. ವೈಜಯಂತಿ ಶೈಕ್ಷಣಿಕ ರಂಗದ ಹೆಸರಾಂತ ಶಿಕ್ಷಣಪ್ರೇಮಿ ಉಳ್ಳೂರುಗುತ್ತು ವಾಮನ ಶೆಟ್ಟಿ ಅವರ ಸುಪುತ್ರಿ ಆಗಿದ್ದು ಸದ್ಯ ಉಡುಪಿ ಅಲ್ಲಿನ ಪೆರ್ಡೂರು ನಿವಾಸಿ ಆಗಿದ್ದಾರೆ.

Write A Comment