ಮಂಗಳೂರು,ನ.24 : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ,ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು, ಸಿಡಾಕ್, ಧಾರವಾಢ ಹಾಗೂ ಜಿಲ್ಲಾಸಣ್ಣ ಕೈಗಾರಿಕಾ ಸಂಘ, ಯೆಯ್ಯಾಡಿ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಸ್ವ ಉದ್ಯೋಗಯೋಜನೆಯಡಿ ಅರ್ಜಿ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉದ್ಯಮಶೀಲತಾ ಜಾಗೃತಿ ಶಿಬಿರ ಇತ್ತೀಚೆಗೆ ನಡೆಯಿತು. ಶಿಬಿರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ, ಜಂಟಿ ನಿರ್ದೇಶಕಎಸ್.ಜಿ.ಹೆಗಡೆಯವರು ಸ್ವ ಉದ್ಯೋಗಿಗಳು ನಿರ್ಧಿಷ್ಟ ಗುರಿ ಇಟ್ಟು ಬ್ಯಾಂಕಿನಿಂದ ಸಾಲಪಡೆದು ಸರಿಯಾಗಿ ಮರುಪಾವತಿ ಮಾಡಿ ಯಶಸ್ವಿ ಉದ್ಯಮಶೀಲರಾಗಲು ಕರೆನೀಡಿದರು. ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾದ ಎಂ.ಎಸ್.ಎಂ.ಇ.ಯ ಉಪನಿರ್ದೇಶಕರಾದ ಕೆ.ಸೊಕ್ರೆಟಿಸ್‌ರವರು ಸರಿಯಾದ ಮಾರುಕಟ್ಟೆ ಸಮೀಕ್ಷೆ ಮಾಡಿ ಬೇಡಿಕೆ ಆಧಾರಿತ ಚಟುವಟಿಕೆ
ಗುರುತಿಸಿ ಉದ್ಯಮಶೀಲರಾಗಲು ಸಲಹೆ ನೀಡಿದರು. ವೇದಿಕೆಯಲ್ಲಿ ಕೆ.ಹೆಚ್. ರಾಜಶೇಖರಯ್ಯ, ಉಪನಿರ್ದೇಶಕರು ಶ್ರೀ ಸತ್ಯನಾರಾಯಣ ಭಟ್ಟ, ಸಹಾಯಕ ನಿರ್ದೇಶಕರು, ಜಿಲ್ಲಾ ಕೈಗಾರಿಕಾಕೇಂದ್ರ, ಮಂಗಳೂರು ಹಾಗೂ ಕುಸುಮಾ ದೇವಾಡಿಗ ಯಶಸ್ವಿ ಮಹಿಳಾ ಉದ್ದಿಮೆದಾರರು ಸಹಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಉದ್ದೇಶ ಹಾಗೂ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರಾದ ಅರವಿಂದ ಬಾಳೇರಿ ನೀಡಿದರು. ಕೆನರಾ ಬ್ಯಾಂಕ್, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆವಿಭಾಗದ ಮುಖ್ಯಸ್ಥ ರವಿ ಕುಮಾರ್ ಹಾಗೂ ಆರ್ಥಿಕ ಸಾಕ್ಷರತಾ ಸಲಹಗಾರರಾದ ರವಿಂದ್ರ ಬಲ್ಲಾಳ್ ಇವರು ಸಾಲ ಸೌಲಭ್ಯದ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿದರು. ತರಬೇತಿದಾರರು,ಸಿಡಾಕ್ವಂ ದನಾರ್ಪಣೆಗೈದರು.