ಕರಾವಳಿ

ಚೈಲ್ಡ್‌ಲೈನ್ ವತಿಯಿಂದ ಬೀದಿ ನಾಟಕ ಮತ್ತು ಭಿತ್ತಿ ಚಿತ್ರಕಲಾ ಪ್ರದರ್ಶನ.

Pinterest LinkedIn Tumblr

beedhi_nataka_photo_1

ಮಂಗಳೂರು:ನ,20 : ವಿಶ್ವ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಹಿಂಸೆಯನ್ನು ತಡೆಗಟ್ಟುವ ಜಾಗತಿಕ ದಿನ ಅಂಗವಾಗಿ, ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಮಂಗಳೂರು ಚೈಲ್ಡ್‌ಲೈನ್-1098 ವತಿಯಿಂದ, ಸಂತ ಮೇರಿ ಕಾಲೇಜು ಶಿರ್ವ ಇಲ್ಲಿನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಂದ ಅರಳುವ ಹೂವುಗಳು ಎಂಬ ಬೀದಿ ನಾಟಕ ಪ್ರದರ್ಶನವನ್ನು ನಡೆಸಲಾಯಿತು.

beedhi_nataka_photo_2 beedhi_nataka_photo_3a beedhi_nataka_photo_4 beedhi_nataka_photo_5 beedhi_nataka_photo_6

ಈ ಕಾರ್ಯಕ್ರಮವನ್ನು ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ, ವಿದ್ಯಾದಾನಿ ಸಮಾಜ ಸೇವಕರಾದ ಶ್ರೀ ಹರೇಕಳ ಹಾಜಬ್ಬರವರು ಗಾಂಧಿನಗರ ಸ.ಹಿ.ಪ್ರಾ ಶಾಲೆಯ ವಠಾರದಲ್ಲಿ ಉದ್ಘಾಟಿಸಿದರು, ಮಕ್ಕಳ ಮೇಲಿನ ದೌರ್ಜನ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಈ ಬಗ್ಗೆ ತಿಳುವಳಿಕೆಯನ್ನು ಸಮುದಾಯದಲ್ಲಿ ಮೂಡಿಸಬೇಕಾಗಿದೆ ಎಂದು ಹೇಳಿದರುಭಿತ್ತಿಚಿತ್ರ ಕಲಾ ಪ್ರದರ್ಶನವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀ ಉಸ್ಮಾನ್.ಎ ರವರು ಉದ್ಘಾಟಿಸಿ, ಮಕ್ಕಳ ಹಕ್ಕುಗಳ ರಕ್ಷಣೆ ಜನರ ಜವಾಬ್ದಾರಿ ಎಂದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಸಮುದಾಯದ ಸಹಭಾಗಿತ್ವ ಅತೀ ಪ್ರಮುಖವಾಗಿದೆ ಎಂದರು.

 

beedhi_nataka_photo_7 beedhi_nataka_photo_8 beedhi_nataka_photo_9 beedhi_nataka_photo_10 beedhi_nataka_photo_11 beedhi_nataka_photo_12

ನಗರದ ಹಲವಾರು ಕಡೆ ಬೀದಿ ನಾಟಕ ಪ್ರದರ್ಶನವನ್ನು ನಡೆಸಲಾಯಿತು, ಜಿಲ್ಲಾಧಿಕಾರಿ ಕಛೇರಿ ಬಳಿ, ಕೆ.ಎಸ್.ಆರ್.ಟಿ.ಸಿ ಬಿಜೈ ಬಸ್ ನಿಲ್ದಾಣ ಬಳಿ, ಮಂಗಳೂರು ಕೇಂದ್ರ ರೇಲ್ವೆ ನಿಲ್ದಾಣ ಬಳಿ, ಸ್ಟೇಟ್ ಬ್ಯಾಂಕ್ ಮತ್ತು ವಾಮಂಜೂರು ಬಸ್ ನಿಲ್ದಾಣ ಬಳಿ ಬೀದಿ ನಾಟಕ ಪ್ರದರ್ಶನವನ್ನು ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರ ಮಂಗಳೂರು ಅಧ್ಯಕ್ಷರಾದ ಶ್ರೀ ಹಸನ್ ಸಾಹೇಬ್, ಮಂಗಳೂರು ಜೇಸಿ‌ಐ ಅಧ್ಯಕ್ಷರಾದ ಲೋಹಿತ್ ಶೆಟ್ಟಿರವರು, ಚೈಲ್ಡ್‌ಲೈನ್ ನಗರ ಸಂಯೋಜನಾಧಿಕಾರಿ ಶ್ರೀ ಯೋಗಿಶ್ ಮಲ್ಲಿಗೆಮಾಡು ಹಾಗೂ ಚೈಲ್ಡ್‌ಲೈನ್ ಶ್ರೀ ಸಂಪತ್ ಕಟ್ಟಿ, ಹಾಗೂ ಗಾಂಧಿನಗರ ಬಿ‌ಆರ್‌ಸಿ ಕೇಂದ್ರದ ಅಧಿಕಾರಿಗಳು, ಶಿಕ್ಷಕರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Write A Comment