ಕರಾವಳಿ

ಹೊಂಡಾ ಆಕ್ಟಿವಾದಲ್ಲಿ ಅಕ್ರಮ ಗೋ ಮಾಂಸ ಸಾಗಾಟ; ಆರೋಪಿ ಪರಾರಿ

Pinterest LinkedIn Tumblr

ಕುಂದಾಪುರ: ಅಕ್ರಮವಾಗಿ ಹೊಂಡಾ ಆಕ್ಟಿವ್ ಗಾಡಿಯಲ್ಲಿ ಸಾಗಿಸುತ್ತಿದ್ದ ಗೋಮಾಂಸವನ್ನು ಕೋಟ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಶುಕ್ರವಾರ ಕೋಟ ಬಳಿ ಪತ್ತೆ ಹಚ್ಚಿದರು.

Illeagle_Cow_meet (3) Illeagle_Cow_meet (1) Illeagle_Cow_meet (2)

ಘಟನೆ ವಿವರ: ಕುಂದಾಪುರ ದಿಕ್ಕಿನಿಂದ ಹೊಂಡಾ ಆಕ್ಟಿವ್‌ಗಾಡಿಯಲ್ಲಿ ಸಾಗಿಸುತ್ತಿದ್ದನ್ನು ತಿಳಿದ ಕೋಟ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕೋಟ ಮೂರ್‍ಕೈ ಬಸ್ಸು ಸ್ಟ್ಯಾಂಡ್ ಹತ್ತಿರ ಅಡ್ಡಗಟಿದರು. ನಂತರ ಗಾಡಿ ಚಾಲಕ ಇದು ಕೋಳಿ ಮಾಂಸ ನನ್ನನ್ನು ಬಿಟ್ಟುಬಿಡಿ ಎಂದು ಹೇಳಿದ ಆಗ ಪರೀಕ್ಷಿಸಲು ಕೋಟದ ಮಿನು ಮಾರುಕಟ್ಟೆ ಬಳಿಯಲ್ಲಿರುವ ಕೋಳಿ ಅಂಗಡಿಗೆ ಕರೆದುಕೂಂಡು ಹೋಗುವಷ್ಟರಲ್ಲಿ ಆರೋಪಿ ಸ್ಥಳೀಯ ನರಗಡಲೆ ಕಾರ್ಖಾನೆ ಸನಿಹ ಗಾಡಿ ಬಿಟ್ಟು ಪರಾರಿಯಾದ ಎನ್ನಲಾಗಿದೆ. ಘಟನೆಗೆ ಸಂಬದಿಸಿದಂತೆ ಕೋಟ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ಕೋಟ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಶಂಕರ ದೇವಾಡಿಗ ಇತ್ತೀಚಿಗಿನ ದಿನಗಳಲ್ಲಿ ಅಕ್ರಮ ಗೋ ಮತ್ತು ಮಾಂಸ ಸಾಗಾಟ ಜಾಸ್ತಿಯಾಗಿದ್ದು ಇದಕ್ಕೆ ಸರಕಾರ ಹಾಗೂ ಇಲಾಖೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

Write A Comment