ಕರಾವಳಿ

’ರಡ್ಡೆಟ್ ಏರೆಡ್ಡೆ’ ನಾಟಕ ಪ್ರದರ್ಶನ, ಸನ್ಮಾನ

Pinterest LinkedIn Tumblr

mumbai_drama_show_1

ವರದಿ : ಈಶ್ವರ ಎಂ. ಐಲ್

ಚಿತ್ರ : ದಿನೇಶ್ ಕುಲಾಲ್

ಮುಂಬಯಿ : ನಗರದಲ್ಲಿ ಕಳೆದ ಹಲವು ದಿನಗಳಿಂದ ಲಕುಮಿ ತಂಡದ ತುಳು ಹಾಸ್ಯ ನಾಟಕ ’ರಡ್ಡೆಟ್ ಏರೆಡ್ಡೆ’ ನಾಟಕ ಪ್ರದರ್ಶನಗೊಂಡಿದ್ದು, ಈ ನಾಟಕದ 25ನೇ ಯಶಸ್ವಿ ಪ್ರಯೋಗವು ನ. 12 ರಂದು ವಸಂತ ಅಮೀನ್ ಮತ್ತು ಸುಂದರ ರೈ. ಮಂದಾರ ಇವರ ಆಯೋಜನೆಯಲ್ಲಿ ಪ್ರದರ್ಶಿಸಲಾಯಿತು.

mumbai_drama_show_2a mumbai_drama_show_3

ನಾಟಕದ ಲೇಖಕ ತುಳಸಿದಾಸ್ ಮಂಜೇಶ್ವರ ಹಾಗೂ ಕಲಾವಿದ ಚಂದ್ರಹಾಸ ಕದ್ರಿ ಮತ್ತು ಧ್ವನಿ ಸಂಯೋಜಕ ಕಿಶೋರ್ ವಾಮಂಜೂರು ಅವರನ್ನು ಉದ್ಯಮಿ ಸುರೇಶ್ ಭಂಡಾರಿ ಕಡಂದಲೆ ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಿದರು. ನಂತರ ಮಾತನಾಡಿದ ಸುರೇಶ್ ಭಂಡಾರಿಯವರು ಲಕುಮಿ ತಂಡವು ತುಳು ರಂಗಭೂಮಿಗೆ ಸಲ್ಲಿಸಿದ ಸೇವೆ ಹಾಗೂ ಯುವ ಪ್ರತಿಭೆಗಳಿಗೆ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಮೀರಾಗಾಂವ್ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರು ಮಾತನಾಡುತ್ತಾ ಕಡಿಮೆ ಅವಧಿಯಲ್ಲಿ ಹೆಚ್ಚಿ ಪ್ರದರ್ಶನವನ್ನು ನೀಡಿದ ಯಶಸ್ಸು ಲಕುಮಿ ತಂಡಕ್ಕೆ ಸಲ್ಲುತ್ತದೆ ಎಂದರು. ಸಯನ್ ನ ಪುರೋಹಿತ ಎಂ.ಜೆ. ಪ್ರವೀನ್ ಭಟ್ ಅವರು ನಾಟಕ ತಂಡಕ್ಕೆ ಶುಭ ಹಾರೈಸಿದರು.

mumbai_drama_show_4a mumbai_drama_show_5

ಬಿ.ಕೆ. ಶೆಟ್ಟಿ, ಕಲಂಬೋಲಿ, ಅನಿಲ್ ಶೆಟ್ಟಿ, ನಿಲೇಶ್ ಪೂಜಾರಿ, ಸುರೇಶ್ ಶೆಟ್ಟಿ ಯೆಯ್ಯಾಡಿ, ಸಂತೋಷ್ ಶೆಟ್ಟಿ ವೇದಿಕೆಯಲ್ಲಿದ್ದರು.

ಎಚ್. ಕೆ. ನಯನಾಡು ಕಾರ್ಯಕ್ರಮವನ್ನು ನಿರೂಪಿಸಿದರು. ರುಕ್ಕು, ನಾಗಾರ್ಜುನ ಮಂಗಲ್ಪಾಡಿ, ಸುರೇಶ್ ಮಂಜೇಶ್ವರ, ರವಿ ಶೆಟ್ಟಿ ಸುರತ್ಕಲ್, ಸುರೇಶ್ ಪೂಜಾರಿ, ಕೇಶವದಾಸ್ ಪಡೀಲ್, ರಾಜೇಶ್ ಮಂಜೇಶ್ವರ, ಗಿರೀಶ್ ಶೆಟ್ಟಿ ಇಚ್ಲಂಗೋಡು ಮೊದಲಾದವರು ಸಹಕರಿಸಿದರು.

Write A Comment