ಕರಾವಳಿ

ಸುರತ್ಕಲ್ ಬಂಟರ ಭವನದಲ್ಲಿ ಕಲಾವಿದರ ಚಿಂತನ ಮಂಥನ.

Pinterest LinkedIn Tumblr

surthkal_bunts_sanga_photot

ಮಂಗಳೂರು,ನ.12: ಸುರತ್ಕಲ್ ಬಂಟರ ಭವನದಲ್ಲಿ ಕಲಾವಿದರ ಚಿಂತನ ಮಂಥನ ಕಾರ್ಯಕ್ರಮ ಜರಗಿತು.ನಾಟಕ ರಚನೆಕಾರ ನಿರ್ದೇಶಕ ನವೀನ್ ಶೆಟ್ಟಿ ಅಳಕೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರಿಗೆ ಪಾತ್ರ ನಿರ್ವಹಿಸುವ ಸಂದರ್ಭದಲ್ಲಿ ಶ್ರದ್ಧೆ ಭಕ್ತಿ ಮುಖ್ಯ ಆವಾಗ ಮಾತ್ರ ಪಾತ್ರಗಳು ಪರಿಣಾಮಕಾರಿಯಾಗಿ ಮೂಡಿ ಬರುತ್ತದೆ ಎಂದರು.

ಇತ್ತೀಚೆಗೆ ಪಡುಬಿದ್ರೆ ಬಂಟರ ಭವನದಲ್ಲಿ ನಡೆದ ತುಳುವನಡಕೆ ಸ್ಪರ್ಧೆಯಲ್ಲಿ ನವೀನ್ ಶೆಟ್ಟಿ ಅಳಕೆ ನಿರ್ದೇಶನದಲ್ಲಿ ಸುರತ್ಕಲ್ ಬಂಟರ ಸಂಘವು ಪ್ರಥಮ ಪ್ರಶಸ್ತಿಯೊಂದಿಗೆ 50 ಸಾವಿರ ರೂ.ನಗದನ್ನು ಗಳಿಸಿಕೊಂಡಿತ್ತು. ಆ ಪ್ರಯುಕ್ತ ಸುರತ್ಕಲ್ ಬಂಟರ ಭವನದಲ್ಲಿ ಕಲಾವಿದರ ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಿ ನಿರ್ದೇಶಕ ನವೀನ್ ಶೆಟ್ಟಿ ಅಳಕೆ ಅವರನ್ನು ಸಂಘದ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ ಶಾಲು ಹೊದಿಸಿ ಗೌರವಿಸಿದರು. ಸಮಾರಂಭದಲ್ಲಿ ಪ್ರಸಾದನ ಕಲಾವಿದ ಗಿರಿಯಪ್ಪ ಇಡ್ಯಾರನ್ನು ಕೂಡಾ ಅಭಿನಂದಿಸಲಾಯಿತು.

ಸಾಂಸ್ಕೃತಿಕ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಉಲ್ಲಾಸ್ ಆರ್.ಶೆಟ್ಟಿ ವಹಿಸಿದ್ದರು.  ತಾ.ಪಂ.ಸದಸ್ಯೆ ವಜ್ರಾಕ್ಷಿ ಶೆಟ್ಟಿ ಮತ್ತು ಪುಷ್ಪರಾಜ್ ಶೆಟ್ಟಿ ಕುಡುಂಬೂರು ಸಭೆಯಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಲ, ಸಂಘದ ಉಪಾಧ್ಯಕ್ಷ ಸುಧಾಕರ ಪೂಂಜ ಹೊಸಬೆಟ್ಟು, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಆಶಾ ಆರ್ ಶೆಟ್ಟಿ, ರಾಜೇಶ್ವರಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸೀತಾರಾಮ ರೈ ಎಂಆರ್‌ಪಿ‌ಎಲ್ ಕಾರ್ಯಕ್ರಮ ನಿರ್ವಹಿಸಿದರು.

Write A Comment