ಕರಾವಳಿ

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ 2014 ರ ಏಕಲವ್ಯ ಪ್ರಶಸ್ತಿ ಪ್ರದಾನ.

Pinterest LinkedIn Tumblr

campous_front_of_india

ಮಂಗಳೂರು,ನ.12: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ರಾಷ್ಟ್ರೀಯ ಶಿಕ್ಷಣ ಅಭಿಯಾನದs ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿಣಾಚರಣೆಯಂದು ಶೈಕ್ಷಣಿಕ ಹಾಗೂ ವಿವಿದ ರಂಗಗಳಲ್ಲಿ ಸಾಧನೆಯನ್ನು ಮಾಡಿದ ವಿದ್ಯಾರ್ಥಿನಿ ಆಯಿಶತುಲ್ ಇಸ್ಮತ್ ಇವರಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ನೀಡಲಾಗುವ 2014 ರ ಏಕಲವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಇವರು ಪ್ರಸ್ತುತ ಕೆ.ವಿ.ಜಿ. ಕಾಲೇಜಿನಲ್ಲಿ ದಂತ ವೈದ್ಯೆಕೀಯ ವಿಬಾಗದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಕಾರ್ಯಕ್ರಮವು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾದ್ಯಕ್ಷ ಸನಾವುಲ್ಲ ಇವರು ವಹಿಸಿದ್ದರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಕಾರ್ಯದರ್ಶಿ ಮಹಮ್ಮದ್ ತಪ್ಸೀರ್ ಇವರು ಮಾತನಾಡಿ ಭಾರತ ಸರಕಾರ ಕೊಡುತ್ತಿರುವಂತಹ ದ್ರೋಣಾಚಾರ್ಯ ಪ್ರಶಸ್ತಿ,ಅರ್ಜುನ ಪ್ರಶಸ್ತಿಯಂತೇ ಏಕಲವ್ಯ ಪ್ರಶಸ್ತಿಯನ್ನು ಭಾರತ ಸರಕಾರದ ವತಿಯಿಂದಲೇ ನೀಡಬೇಕು‌ಎಂದರು .ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಅದ್ಯಕ್ಷರಾದಂತಹ ಅಶ್ರಫ್ ಅಗ್ನಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

campous_front_of_a

ಮುಖ್ಯ ಅಥಿತಿಗಳಾಗಿ ದಲಿತ ಸಂಘದ ಪುತ್ತೂರು ಸಂಚಾಲಕರಾದ ಆನಂದ ಮಿತ್ತಬೈಲು, ನ್ಯಾಷನಲ್ ವುಮೆನ್ಸ್ ಫ್ರಂಟ್ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಸಿ.ಎ ಮರಿಯಮ್ಮ ಟಿ.ಎಸ್ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಅಧ್ಯಕ್ಷ ಅತಾವುಲ್ಲ ಪುಂಜಾಲಕಟ್ಟೆ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ರಿಲ್ವಾನ್‌ವಲಾಲ್ ನಿರೂಪಿಸಿ, ಅತಾವುಲ್ಲ ಸ್ವಾಗತಿಸಿ sವಂದಿಸಿದgi .

Write A Comment