ಕರಾವಳಿ

ಅವೈಜ್ಞಾನಿಕ ಪದ್ಧತಿ ತೆಗೆದು ಹಾಕಲು ಎಸ್‌ಎಫ್‌ಐ ಆಗ್ರಹ

Pinterest LinkedIn Tumblr

SFI_Protest_Education

ಕುಂದಾಪುರ : ಅನುದಾನ ರಹಿತ ಶಾಲೆಗಳ ಶುಲ್ಕ ನಿಗದಿ ಕರಡು ವರದಿಗೆ ಆಕ್ಷೇಪಣೆ ಸಲ್ಲಿಸುವಂತೆ ಎಸ್‌ಎಫ್‌ಐ ಕುಂದಾಪುರ ತಾಲೂಕು ಸಮಿತಿಯು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಸರಕಾರ ಮುಂದಾಗಿರುವ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಕುಂದಾಪುರ ತಾಲೂಕು ಸಮಿತಿ ಸ್ವಾಗತಿಸುತ್ತದೆ. ಆದರೆ ನಿಯಂತ್ರಣದ ಹೆಸರಿನಲ್ಲಿ ಖಾಸಗೀಕರಣವನ್ನು ಕಡ್ಡಾಯ ಮಾಡಲು ಹೊರಟ ಕ್ರಮವನ್ನು ಖಂಡಿಸುತ್ತದೆ. ಶಾಲಾ ಶುಲ್ಕ ಕುರಿತು ರಚಿಸಲಾಗಿರುವ ಕರಡು ವರದಿಯನ್ನು ಕೈಬಿಟ್ಟು, ಎಲ್ಲರಿಗೂ ಸಮಾನ ಶಿಕ್ಷಣ ಸಿಗುವಂತಹ ವರದಿಯನ್ನು ರಚಿಸಲು ಮುಂದಾಗಲು ಎಸ್‌ಎಫ್‌ಐ ಒತ್ತಾಯಿಸುತ್ತದೆ. ಈ ಸಂದರ್ಭದಲ್ಲಿ ಎಸ್‌ಎಫ್‌ಐನ ತಾಲೂಕು ಕಾರ್ಯದರ್ಶಿ ಶ್ರೀಕಾಂತ್ ಹೆಮ್ಮಾಡಿ, ತಾಲೂಕು ಮುಖಂಡರಾದ ಅಕ್ಷಯ ವಡೇರಹೋಬಳಿ ಮತ್ತು ಆಲ್ಡ್ರೀನ್ ಡಿ’ಸೋಜ ಉಪಸ್ಥಿತರಿದ್ದರು.

ಇವರ ಸಲಹೆಗಳು :
1) ಶಿಕ್ಷಣದಲ್ಲಿ ಶ್ರೇಷ್ಠ – ಕನಿಷ್ಟ ಎಂದು ಶ್ರೇಣಿಕೃತಗೊಳಿಸಿ, ಶಿಕ್ಷಣದ ಖಾಸಗೀಕರಣಕ್ಕೆ ಕುಮ್ಮಕ್ಕು ನೀಡಲು ಹೊರಟಿರುವ ವರದಿಯನ್ನು ರದ್ದು ಮಾಡಬೇಕು.
2)ಸಮಾನ ಶಿಕ್ಷಣ ನೀಡುವ ಹಾದಿಯಲ್ಲಿ ಕರಡು ವರದಿಯನ್ನು ರಚಿಸಿ.
3) ಹೈಕೋರ್ಟ್ ನಿರ್ದೇಶನದಂತೆ ಕರಡು ವರದಿ ರಚಿಸುವಾಗ ಪೋಷಕರ ಸಂಘಟನೆಗಳ ಮುಖಂಡರನ್ನು, ವಿದ್ಯಾರ್ಥಿ ಸಂಘಟನೆಯ ಮುಖಂಡರನ್ನು, ಶಿಕ್ಷಣ ತಜ್ಞರನ್ನು ಒಳಗೊಂಡಂತೆ ವೈಜ್ಞಾನಿಕವಾಗಿ ಸಮಿತಿ ರಚಿಸಿ ಅದರ ಮೂಲಕ ಶುಲ್ಕ ನಿಗದಿಗೆ ಮುಂದಾಗಬೇಕು.
4) ಸರಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿಗೆ ಶುಲ್ಕ (ಅಭಿವೃದ್ಧಿ ಶುಲ್ಕ ಹಾಗೂ ಇತರೆ ಯಾವುದೇ ಶುಲ್ಕ ಸೇರಿದಂತೆ) ಪಡೆಯುವ ಖಾಸಗೀ ಶಿಕ್ಷಣ ಸಂಸ್ಥೆಗಳ ಮೇಲೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
5) ಕರಡು ವರದಿ ರಚಿಸುವ ಮುನ್ನ ಹೈಕೋರ್ಟ್ ನಿರ್ದೇಶನದಂತೆ ರಾಜ್ಯವ್ಯಾಪಿ ಎಲ್ಲಾ ತಾಲೂಕು, ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಪೋಷಕರ ಹಾಗೂ ಸಾಮಾನ್ಯ ಜನರ ಮದ್ಯೆ ವ್ಯಾಪಕ ಪ್ರಚಾರಗೊಳಿಸಬೇಕು. ಕೇವಲ ಸರಕಾರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರೆ ಪ್ರಯೋಜನವಾಗುವುದಿಲ್ಲ. ಜೊತೆಗೆ ರಾಜ್ಯದ ಪ್ರಮುಖ ಮಾದ್ಯಮಗಳಲ್ಲಿ ಜಾಹೀರಾತು ಮೂಲಕ ಪ್ರಚಾರಗೊಳಿಸಬೇಕು.
6) ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿ ಮಾಡಬೇಕು.
7) ಕೋಠಾರಿ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು.
8) ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಶಿಕ್ಷಣ ರೆಗ್ಯೂಲೆಟಿಂಗ್ ಪ್ರಾಧಿಕಾರವನ್ನು(DERA) ಬಲಗೊಳಿಸಬೇಕು.

Write A Comment