ಕುಂದಾಪುರ: ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿಯ ಶ್ರೀ ದೇವರಿಗೆ ಬೆಳ್ಳಿಯ ಮುಖವಾಡ ಸೇರಿದಂತೆ ಪೂರ್ಣ ದೇಹ ಕವಚವನ್ನು ಹರಿಹರದ ಹೋಟೆಲ್ ಉದ್ಯಮಿ ರಾಜಗೋಪಾಲ ಹೆಬ್ಬಾರ್ ಸಮರ್ಪಿಸಿದರು.
ದೇವಳದ ಆಡಳಿತ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ಅವರು ಬೆಳ್ಳಿಯ ಮುಖವಾಡ ಅರ್ಪಿಸಿದ ರಾಜಗೋಪಾಲ ಹೆಬ್ಬಾರ್ ಅವರನ್ನು ಗೌರವಿಸಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಶ್ರೀ ದೇವರಿಗೆ ಅಭಿಷೇಕ, ಅಲಂಕಾರ ವಿಶೇಷ ಪೂಜೆ, ರಂಗಪೂಜಾದಿ ಸೇವೆಗಳನ್ನು ನೆರವೇರಿಸಲಾಯಿತು.
ರಾತ್ರಿ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿ ದೀಪೋತ್ಸವವನ್ನು ಕಣ್ತುಂಬಿಕೊಂಡರು.
