ಕರಾವಳಿ

ಗಾಂಜಾ ಮಾರಾಟದ ಇಬ್ಬರು ಅರೋಪಿಗಳು ಪೊಲೀಸರ ಸೆರೆ

Pinterest LinkedIn Tumblr

ganaja_marata_yatna_1

ಮಂಗಳೂರು, ನ .07: ನಗರದ ವಿವಿದ ಕಡೆಗಳಲ್ಲಿ ಗಾಂಜಾ ಮಾರಾಟ ಮಾಡುಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕದ್ರಿ ಇನ್‌ಸ್ಪೆಕ್ಟರ್ ನಾಗರಾಜ್ ಶಿವಮೊಗ್ಗ ನೇತೃತ್ವದ ಪೊಲೀಸರ ತಂಡ ಬಂಧಿಸಲಾಗಿದೆ.

ಅರೋಪಿಗಳನ್ನು ಆಕಾಶಭವನ ಕಾಪಿಗುಡ್ಡ ನಿವಾಸಿ ಗಣೇಶ್ (19) ಹಾಗೂ ಕೆಪಿಟಿ ವ್ಯಾಸನಗರ ನಿವಾಸಿ ಪ್ರಜ್ವಲ್ (19) ಎಂದು ಗುರುತಿಸಲಾಗಿದೆ. ಇವರಿಬ್ಬರು ಬಾರೆಬೈಲ್ ಸಮೀಪ ಗಾಂಜಾ ಮಾರಾಟ ಮಾಡಲು ಸ್ಕೂಟರ್‌ನಲ್ಲಿ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ನಗರದಲ್ಲಿ ವಿದ್ಯಾರ್ಥಿಗಳನ್ನೇ ಗುರುಯಾಗಿಸಿ ಗಾಂಜಾ ವ್ಯಾಪಾರ ನಡೆಸುತ್ತಿದ್ದರು.

ಆರೋಪಿಗಳಿಂದ ತಲಾ ಐದು ಗ್ರಾಂ ಪ್ಯಾಕ್‌ನ 115 ಗ್ರಾಂ ಗಾಂಜಾ ಹಾಗೈ ಒಂದು ಸ್ಕೂಟರ್, 2 ಮೊಬೈಲ್ ಹಾಗೂ 660ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ಇವರು ಉಪ್ಪಳದಿಂದ ಗಾಂಜಾ ಪಡೆದು ಅದನ್ನು ಪ್ಯಾಕೇಟ್ ಮಾಡಿ ಸಿಗರೇಟ್ ಒಳಗಡೆ ಹಾಕಿ ಮಾರಾಟ ಮಾಡುತ್ತಿದ್ದರು. ಒಂದು ಪ್ಯಾಕ್‌ಗೆ 100 ರೂ. ಕೊಟ್ಟು ತರುತ್ತಿದ್ದ ಗಾಂಜಾವನ್ನು ಆರೋಪಿಗಳು ಮಂಗಳೂರಿನಲ್ಲಿ 110 ರೂಗೆ ಮಾರಾಟ ಮಾಡುತ್ತಿದ್ದರು. ಪ್ರತಿ ಪ್ಯಾಕೇಟ್‌ನಲ್ಲಿ 10 ರೂ. ಲಾಭ ಮಾಡುತ್ತಿದ್ದು, ದಿನಕ್ಕೆ ಸುಮಾರು 700 ರೂ. ಲಾಭ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಗಣೇಶ್ ಎಂಬಾತನ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿದ್ದು, ಪ್ರಜ್ವಲ್ ಎರಡು ವರ್ಷಗಳ ಹಿಂದೆ ಪಂಪ್‌ವೆಲ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

ಕದ್ರಿ ಠಾಣೆ ಎಸ್‌ಐ ರಫೀಕ್, ಎ‌ಎಸ್‌ಐ ಕೃಷ್ಣ, ಸಿಬ್ಬಂದಿ ಶೀನಪ್ಪ ಪೂಜಾರಿ, ವೆಂಕಟೇಶ್, ಬಲರಾಜ್, ರಾಚಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment