ಕರಾವಳಿ

ಪಣಂಬೂರು ಬಂದರ್‌ ಒಳಗೆ 3.12 ಕೋ.ರೂ. ವೌಲ್ಯದ 755 ಮೆಟ್ರಿಕ್ ಟನ್ ಲ್ಯಾಮ್ ಕೊಕ್ ಕಾಣೆ

Pinterest LinkedIn Tumblr

ಮಂಗಳೂರು, ನ.7: ಚೀನಾದಿಂದ ಖರೀದಿಸಿ ಹಡಗಿನ ಮೂಲಕ ತಂದು ಪಣಂಬೂರು ಬಂದರ್‌ನ ಒಳಗೆ ಸಂಗ್ರಹಿಸಿಡಲಾಗಿದ್ದ ಕಲ್ಲಿದ್ದಲಿಗೆ ಸಂಬಂಧಿಸಿದ 1,550 ಮೆಟ್ರಿಕ್ ಟನ್ ಮೆಟ್ಲಾಜಿಕಲ್ ಕೊಕ್ ಮತ್ತು ಲ್ಯಾಮ್ ಕೊಕ್‌ನಲ್ಲಿ ಸುಮಾರು 755 ಮೆಟ್ರಿಕ್ ಟನ್ ಲ್ಯಾಮ್ ಕೊಕ್ ಕಡಿಮೆಯಾಗಿದ್ದು ಸಂಸ್ಥೆಗೆ 3,12,00,426 ರೂ. ನಷ್ಟವಾಗಿದೆ ಎಂದು ಪುಣೆ ಕಲ್ಯಾಣಿ ಸ್ಟೀಲ್ ಲಿಮಿಟೆಡ್ ಸಂಸ್ಥೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಸುಮಾರು 43.249 ಮೆಟ್ರಿಕ್ ಟನ್ ಮೆಟ್ಲಾಜಿಕಲ್ ಕೊಕ್ ಮತ್ತು 10.600 ಮೆಟ್ರಿಕ್ ಟನ್ ಲ್ಯಾಮ್ ಕೊಕ್‌ನ್ನು ಮೇ 14ರಂದು ಚೀನಾದಿಂದ ನವ ಮಂಗಳೂರು ಬಂದರಿಗೆ ಹಡಗಿನ ಮೂಲಕ ತರಲಾಗಿತ್ತು. ಅಲ್ಲಿ ಹಡಗಿನಿಂದ ಅನ್‌ಲೋಡ್ ಮಾಡಿ ಬಂದರನ ಒಳಗಡೆ ಕಲ್ಯಾಣಿ ಸ್ಟೀಲ್‌ಗೆ ಸಂಬಂಧಪಟ್ಟ ಯಾರ್ಡ್‌ನಲ್ಲಿ ಶೇಖರಿಸಿಡಲಾಗಿತ್ತು. ಅನಂತರ ಮೇ23ರಿಂದ 27ರವರೆಗೆ ಮೆಟ್ಲಾಜಿಕಲ್ ಕೊಕ್ ಮತ್ತು ಲ್ಯಾಮ್ ಕೊಕ್‌ನ್ನು ಕೊಪ್ಪಳ ಗಿಣಿಗೇರಿಯಲ್ಲಿರುವ ಕಲ್ಯಾಣಿ ಸ್ಟೀಲ್ ಕಂಪೆನಿಗೆ ಸಂಬಂಧಿಸಿದ ಪ್ಲ್ಯಾಂಟ್‌ಗೆ ರೈಲ್ವೆ ಮುಖಾಂತರ ಸಾಗಾಟ ಮಾಡಲಾಗಿತ್ತು. ಇಲ್ಲಿಂದ ಸಾಗಾಟ ಮಾಡಿದ ಮೆಟ್ಲಾಜಿಕಲ್ ಕೊಕ್‌ನಲ್ಲಿ ಸುಮಾರು 1,550 ಮೆಟ್ರಿಕ್ ಟನ್ ಮೆಟ್ಲಾಜಿಕಲ್ ಕೊಕ್, ಲ್ಯಾಮ್ ಕೊಕ್‌ನಲ್ಲಿ ಸುಮಾರು 755 ಮೆಟ್ರಿಕ್ ಟನ್ ಲ್ಯಾಮ್ ಕೊಕ್ ಕಡಿಮೆ ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Write A Comment