ಕರಾವಳಿ

ನಂದಿತಾ ಪೂಜಾರಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿ; ಪ್ರಕರಣ ಸಿಬಿಐ ತನಿಖೆಯಾಗಲಿ: ವಿ.ಹಿಂ.ಪ. ಜಿಲ್ಲಾಧ್ಯಕ್ಷ ಸುಪ್ರಸಾದ್ ಶೆಟ್ಟಿ ಹೇಳಿಕೆ

Pinterest LinkedIn Tumblr

Koteshwara-Bajarangadala_Protest (2)

ಕುಂದಾಪುರ: ಗೋಕಳ್ಳ ಕಬೀರನ ಸಾವಿಗೆ 10 ಲಕ್ಷ ರೂ. ಪರಿಹಾರ ನೀಡುವ ಸರಕಾರ ವಿದ್ಯಾರ್ಥಿನಿ ನಂದಿತಾ ಸಾವಿಗೆ ಪರಿಹಾರ ನೀಡಬೇಕು. ಬಾಲಕಿಯ ಕುಟುಂಬಿಕರಿಗೆ ೧೦ ಲಕ್ಷ ಪರಿಹಾರ ನೀಡುವುದು ಮಾತ್ರವಲ್ಲದೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಹೇಳಿದರು.

ಅವರು ಬುಧವಾರ ಸಂಜೆ ಕೋಟೇಶ್ವರದ ಮೀನು ಮಾರ್ಕೇಟ್ ಸಮೀಪ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಕೋಟೇಶ್ವರ ಘಟಕದ ವತಿಯಿಂದ ನಂದಿತಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Koteshwara-Bajarangadala_Protest (3) Koteshwara-Bajarangadala_Protest (1) Koteshwara-Bajarangadala_Protest (4) Koteshwara-Bajarangadala_Protest (6) Koteshwara-Bajarangadala_Protest (7) Koteshwara-Bajarangadala_Protest (5) Koteshwara-Bajarangadala_Protest

ನಂದಿತಾ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ವಿರುದ್ಧ ಸಮಾಜ ಆಕ್ರೋಷ ವ್ಯಕ್ತಪಡಿಸುತ್ತಿಲ್ಲವೆನ್ನುವುದು ಬೇಸರಕರ ಸಂಗತಿ. ನಂದಿತಾ ಪೂಜಾರಿಗೆ ನ್ಯಾಯ ಕೊಡಿ, ಪ್ರಕರಣದ ಆರೋಪಿಗಳ ಬಂಧನವಾಗಲಿ ಎಂಬ ಕೂಗು ಯಾವ ಕೋಮಿನವರಿಂದಲೂ ಬರುತ್ತಿಲ್ಲ, ಬದಲಾಗಿ ತಮ್ಮ ಪ್ರಾರ್ಥನಾ ಮಂದಿರಗಳು ಹಾಗೂ ಮನೆಗಳನ್ನು ರಕ್ಷಿಸುವಂತೆ ಪೊಲೀಸರಿಗೆ ಮನವಿ ಮಾಡುತ್ತಾರೆ, ಕೇವಲ ಜಾತಿ ಧರ್ಮದ ಭಾವನೆಯನ್ನಿಟ್ಟುಕೊಂಡು ತಮ್ಮ ರಕ್ಷಣೆ ಬಗ್ಗೆ ಮಾತ್ರವೇ ನಿಮ್ಮ ಗಮನವಾದರೇ ಈ ನೆಲದಲ್ಲಿ ವಾಸಿಸಲು ಹಕ್ಕಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಗ್ರಹ ಸಚಿವರು ಈವರೆಗೂ ತೀರ್ಥಹಳ್ಳಿಗೆ ಭೇಟಿ ನೀಡಿಲ್ಲ. ರಾಜ್ಯ ಸರಕಾರ ಇಲ್ಲವೇ ಎಂಬ ಪ್ರಶ್ನೆ ಈಗ ಎಲ್ಲರಿಗೂ ಕಾಡುತ್ತದೆ. ಕಳೆದ ೬ ತಿಂಗಳಿನಿಂದ ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ್ಗಳು ನಡೆಯುತ್ತಿದ್ದರೂ ಸರಕಾರ ಹಾಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ, ಒಂದು ಕೋಮಿನವರನ್ನು ರಕ್ಷಿಸಿ, ಹಿಂದುಗಳ ವಿರುದ್ಧ ತಾರತಮ್ಯ ನೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆಗೆ ಈ ಪ್ರಕರಣದ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರ್‍ಈಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್‍ಯಕಾರಿಣಿ ಸದಸ್ಯ ಸುಬ್ರಮಣ್ಯ ಹೊಳ್ಳ, ಬಜರಂಗದಳದ ಗಿರೀಶ್ ಕುಂದಪುರ, ರವೀಂದ್ರ ಕೋಟೇಶ್ವರ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Write A Comment