ಕರಾವಳಿ

ಕೃಷಿ ವಿಕಾಸ ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ -ನ.12 ರೊಳಗೆ ಅರ್ಜಿ ಆಹ್ವಾನ.

Pinterest LinkedIn Tumblr

agriculture

ಮಂಗಳೂರು,ನ.5 : ದ.ಕ.ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ವತಿಯಿಂದ 2013-14 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಾಗಿರುತ್ತದೆ. ಸದರಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಬೇಕಾಗಿರುವುದರಿಂದ, ಪ್ರತಿ ಯೋಜನೆಗೆ ಅರ್ಹ ಪಶುಪಾಲಕರಿಂದ ಅರ್ಜಿ ಅಹ್ವಾನಿಸಲಾಗಿರುತ್ತದೆ. ಆಯಾ ಯೋಜನೆಗೆ ಸಂಬಂಧಿಸಿದಂತೆ ಪಶುಪಾಲಕರು ಸ್ಥಳೀಯ ತಾಲ್ಲೂಕಿನ ಇಲಾಖಾ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ನಿಗದಿತ ನಮೂನೆಗಳಲ್ಲಿ ಅರ್ಜಿಯನ್ನು ಅವಶ್ಯಕ ದಾಖಲೆಗಳೊಂದಿಗೆ ಸಲ್ಲಿಸಲು ತಿಳಿಯಪಡಿಸಿದೆ. ಈ ಕೆಳಗಿನ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 12, 2014 ಅಂತಿಮ ದಿನವಾಗಿರುತ್ತದೆ. ಜಿಲ್ಲೆಯ ಪಶುಪಾಲಕರು ಈ ಯೋಜನೆಗಳ ಪ್ರಯೋಜನ ಪಡೆಯಲು ಕೋರಲಾಗಿದೆ.

ಯೋಜನೆಗಳ ವಿವರ:-
ಆಧುನಿಕ ಹೈನುಗಾರಿಕೆ ಯೋಜನೆ:- ಈ ಯೋಜನೆಯಡಿ ಪಶುಪಾಲಕರಿಗೆ ಆಧುನಿಕ ಜಾನುವಾರು ಕೊಟ್ಟಿಗೆ ನಿರ್ಮಾಣ ಹಾಗೂ ಯಾಂತ್ರೀಕರಣ ಹೈನುಗಾರಿಕೆಗೆ ಪ್ರೋತ್ಸಾಹ ಪ್ರತಿ ತಾಲೂಕಿಗೆ 1 ರಂತೆ ಜಿಲ್ಲೆಗೆ ಒಟ್ಟು5 ಗುರಿ ನಿಗದಿಪಡಿಸಲಾಗಿದೆ. ( 1 ಪ. ಜಾತಿ ಮೀಸಲು)

ಯೋಜನಾ ವಿವರಗಳು:-
ಫಲಾನುಭವಿಯು ಕನಿಷ್ಠ 5 ಹೈನುರಾಸು ಹೊಂದಿರಬೇಕು, ಘಟಕ ವೆಚ್ಚ ರೂ. 1,22,550/- ಆಗಿದ್ದು ರೂ. 61,250/- ಸಹಾಯಧನ, ಇನ್ನುಳಿದ ರೂ. 61,250 ಬ್ಯಾಂಕಿನ ಸಾಲ. ಸರಬರಾಜು ಯೋಜನೆ:- ಈ ಯೋಜನೆಯಡಿ ಹೈನುಗಾರಿಕೆ ನಡೆಸುತ್ತಿರುವ ಸ್ವಸಹಾಯ ಗುಂಪುಗಳಿಗೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ, ಸದಸ್ಯರ ಜಾನುವಾರುಗಳಿಗೆ ಮೇವು ಕತ್ತರಿಸಲು ಉಪಯೋಗಿಸಿಕೊಳ್ಳಲು 3 ಹೆಚ್.ಪಿ. ಮೇವು ಕತ್ತರಿಸುವ ಯಂತ್ರಗಳನ್ನು ಉಚಿತವಾಗಿ ಸರಬರಾಜು ಮಾಡುವ ಯೋಜನೆ ಪ್ರತಿ ತಾಲೂಕಿಗೆ 10 ರಂತೆ ಜಿಲ್ಲೆಗೆ ಒಟ್ಟು 50 ಗುರಿ ನಿಗದಿಪಡಿಸಲಾಗಿದೆ.

ತ್ವರಿತ ಮೇವು ಅಭಿವೃದ್ಧಿ ಯೋಜನೆಯಡಿ ಮೇವು ಕೊಯ್ಲು ಉಪಕರಣಗಳ ಸರಬರಾಜು ಯೋಜನೆ:- 2011-12 ನೇ ಸಾಲಿನಲ್ಲಿ ಮಂಜೂರಾದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಈ ಹಿಂದೆ ಅನುಷ್ಠಾನಗೊಳಿಸಿ ಬಾಕಿ ಉಳಿದಿರುವ ಅನುದಾನದಲ್ಲಿ ಜಿಲ್ಲೆಯ ಬೇಡಿಕೆಯಂತೆ 1 ಹೆಚ್ ಪಿ ಮೇವು ಕತ್ತರಿಸುವ ಯಂತ್ರ್ರಗಳನ್ನು ಉಚಿತವಾಗಿ ಸರಬರಾಜು ಮಾಡುವ ಯೋಜನೆ ಜಿಲ್ಲೆಗೆ ಒಟ್ಟು ಗುರಿ-32 ಯೋಜನಾ ವಿವರಗಳು:- ಫಲಾನುಭವಿಗಳು ಕನಿಷ್ಠ 4 ರಿಂದ 6 ಹಸುಗಳನ್ನು ಸಾಕುತ್ತಿರಬೇಕು.

ವರಾಹ ಅಭಿವೃದ್ಧಿ ಯೋಜನೆ:- 2011-12 ನೇ ಸಾಲಿನಲ್ಲಿ ಮಂಜೂರಾದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ವರಾಹ ಅಭಿವೃಧ್ಧಿ ಯೋಜನೆಯಡಿ ಹಂದಿ ಸಾಕಾಣಿ ಪ್ರೋತ್ಸಾಹಕ್ಕೆ ಈ ಹಿಂದೆ ಅನುಷ್ಠಾನಗೊಳಿಸಿ ಬಾಕಿ ಉಳಿದಿರುವ ಅನುದಾನದಲ್ಲಿ ಯೋಜನೆಗಳಾದ 1 ) ಮಿಶ್ರತಳಿ ಅಭಿವೃದ್ಧಿ -59 ಮರಿಕೊಬ್ಬಿಸುವುದು -33 ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಗಿದೆ. ( ಹಂದಿ ಸಾಕಣಿ ತರಬೇತಿ ಪಡೆದವರಿಗೆ ಮೊದಲ ಆದ್ಯತೆ)

ಅ) ಮಿಶ್ರತಳಿ ಅಭಿವೃದ್ಧಿ (ಘಟಕವೆಚ್ಚ ರೂ. 3000/-, ಸಹಾಯಧನ ರೂ. 3000/-) ಬ) ಮರಿಕೊಬ್ಬಿಸುವುದು ( ಘಟಕವೆಚ್ಚ ರೂ.6000/-, ಸಹಾಯಧನ ರೂ. 3000/-) ಮಹಿಳೆ/ಪ.ಜಾ./ಪ.ಪಂ/ ವಿಕಲಾಂಗಚೇತನರು ಹಾಗೂ ಅಲ್ಪಸಂಖ್ಯಾತರ ಅರ್ಜಿಗಳಿಗೆ ಸರ್ಕಾರಿ ನಿಯಮದಂತೆ ಆದ್ಯತೆ ನೀಡಲಾಗುವುದು.

ಮೇಲ್ಕಾಣಿಸಿದ ಯೋಜನೆಗಳಿಗೆ ಆಸಕ್ತ ಹಾಗೂ ಅರ್ಹ ಫಲಾಕಾಂಕ್ಷಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಆಯಾ ತಾಲ್ಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ದಿನಾಂಕ: 12-11-2014 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯರನ್ನು ಸಂಪರ್ಕಿಸಲು ಕೋರಲಾಗಿದೆ.

ಸಂಪರ್ಕಿಸಬೇಕಾದ ತಾಲೂಕು ಮಟ್ಟದ ಅಧಿಕಾರಿಗಳ ವಿವರ- ಡಾ: ಎಂ. ಎನ್. ರಾಜಣ್ಣ, ಮಂಗಳೂರು/0824/2492369 /9448625698: ಡಾ: ಹೆನ್ರಿ ಲಸ್ರಾದೊ, ಬಂಟ್ವಾಳ-08255/232512/9448502276: ಡಾ: ರತ್ನಾಕರ ಮಲ್ಯ, ಬೆಳ್ತಂಗಡಿ/08256/232067/9448688552: ಡಾ: ಪಿ.ಸುರೇಶ್ ಭಟ್, ಪುತ್ತೂರು/08251/230664/9449102915: ಡಾ: ಬಿ. ಕೆ. ಸೂರ್ಯನಾರಾಯಣ, ಸುಳ್ಯ/08257/230412/9448177566

Write A Comment