ಕುಂದಾಪುರ: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ವಾರ್ಷಿಕ ಮಹಾ ಹಬ್ಬದ ಪ್ರಯುಕ್ತ ಮಂಗಳವಾರಂದು ದೇವರ ವಾಕ್ಯದ ಭಕ್ತಿಯ ದೇವರ ವಾಕ್ಯದ ಭಕ್ತಿಯ ಪೂಜಾ ವಿಧಿಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು.
ದೇವರ ವಾಕ್ಯ ಕ್ರೈಸ್ತ ಸಮುದಾಯಕ್ಕೆ ಒಗ್ಗಟ್ಟಿಗೆ ಆಧಾರ ವಾಗುತ್ತದೆ ಜೀವನಕ್ಕೆ ಏಂಬ ಧ್ಯೇಯ ವಾಕ್ಯದೊಂದಿಗೆ ಆರಂಬಗೊಂಡ ಈ ಪೂಜಾ ವಿಧಿಯನ್ನು ಕೋಟೆಶ್ವರ ಬಾಲ ಎಸುವಿನ ಆಶ್ರಮದ ಧರ್ಮಗುರುಗಳಾದಾ ವ|ರಾಯನ್ ಪಾಯ್ಸ್ ನೆಡೆಸಿ ಕೊಟ್ಟು, ದೇವರ ವಾಕ್ಯವು ನಮಗೆ ಇತರರನ್ನು ಕರುಣೆ ತೋರಿಸಲು, ಇತರರನ್ನು ಪ್ರೀತಿಸಲು ಪ್ರೇರಣೆ ನೀಡುತ್ತದೆ, ನಿನ್ನ ತಮ್ಮನ ಪ್ರೀತಿ ಮಾಡದಿದ್ದರೆ, ಅದು ಕಪಟ ಪ್ರೀತಿಯಾಗುತ್ತದೆ, ಸ್ವರ್ಗದ ಹಾದಿಯು ನಿಮ್ಮ ನೆರೆಮನೆಯರಿಂದ ಆರಂಭವಾಗುತ್ತದೆ. ಏಂದು ಸಂದೇಶ ನೀಡಿದರು.
ವಲಯ ಪ್ರಧಾನ, ಕಾಥೆಡ್ರಾಲ್ ಇಗರ್ಜಿಯ ಪ್ರದಾನ್ ಧರ್ಮಗುರು ವ|ಸ್ಟ್ಯಾನಿ ಬಿ.ಲೋಬೊ, ಕುಂದಾಪುರದವರೆ ಆದ ಧರ್ಮಗುರು ವ|ಫರ್ಡಿನಾಂಡ್ ಗೊನ್ಸಾಲ್ವಿಸ್ ಕುಂದಾಪುರ ಇಗರ್ಜಿಯ ಹಾಗೂ ವಲಯ ಪ್ರಧಾನರಾದ ವ|ಅನಿಲ್ ಡಿಸೋಜಾ, ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ವ|ಪ್ರಕಾಶ್ ಪಾವ್ಲ್ ಡಿಸೋಜಾ ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಹಲಾವಾರು ಇಗರ್ಜಿಗಳ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲುಗೊಡರು.
ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೋನ್ಸನ್ ಆಲ್ಮೇಡಾ ಮೈಕಲ್ ವಂದಿಸಿದರು. ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಉಪಸ್ಥಿತರಿದ್ದರು ಈ ಜಾತ್ರೆಗೆ ಧರ್ಮ ಮತ ಪರಿಗಣಿಸದೆ ಏಲ್ಲಾ ಧರ್ಮಿಯರು ಭಾಗಿಯಾಗಿ ಬಹು ಸಂಖ್ಯೆಯಲ್ಲಿ ಭಾಗವಹಿಸಿದ್ದರು.